ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ತಾಯಿ ಫಾತಿಮಾ ಇಸ್ಮಾಯಿಲ್ ನಿಧನ

Published : Apr 21, 2023, 02:11 PM IST
ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ತಾಯಿ ಫಾತಿಮಾ ಇಸ್ಮಾಯಿಲ್ ನಿಧನ

ಸಾರಾಂಶ

ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ತಾಯಿ, ದುಲ್ಕರ್ ಸಲ್ಮಾನ್ ಅವರ ಅಜ್ಜಿ ಫಾತಿಮಾ ನಿಧನ ಹೊಂದಿದ್ದಾರೆ.  

ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ, ದುಲ್ಕರ್ ಸಲ್ಮಾನ್ ಅವರ ಅಜ್ಜಿ, ಫಾತಿಮಾ ಇಸ್ಮಾಯಿಲ್ ಇಂದು (ಏಪ್ರಿಲ್ 21) ಬೆಳಗ್ಗೆ ಇಹಲೋಕತ್ಯಜಿಸಿದರು. 93 ವರ್ಷದ  ಪಾತಿಮಾ ಇಸ್ಮಾಯಿಲ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.  ಕಳೆದ ಕೆಲವು ದಿನಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು. 

ಫಾತಿಮಾ ನಿಧನಕ್ಕೆ ಮಲಯಾಳಂ ಸಿನಿಮಾರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಮಮ್ಮುಟ್ಟಿ ಜೊತೆ ಇಂದು ಬೆಳಗ್ಗೆ ಮಾತನಾಡಿದೆ. ತಾಯಿಯ ಜೊತೆ ತುಂಬಾ ಕ್ಲೋಸ್ ಆಗಿದ್ದರು. ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿ ದೇವರು ನೀಡಲಿ' ಎಂದು ಹೇಳಿದ್ದಾರೆ.

ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

ತಾಯಿ ಫಾತಿಮಾ  ಇಸ್ಮಾಯಿಲ್ ಅವರಿಗೆ ಖ್ಯಾತ ನಟ ಮಮ್ಮುಟ್ಟಿ, ಇಬ್ರಾಹಿಂ ಕುಟ್ಟಿ, ಶಫಿನಾ, ಅಮೀನಾ, ಸೌದಾ ಮತ್ತು ಜಕರಿಯಾ ಒಟ್ಟು 5 ಜನ ಮಕ್ಕಳು. ಮಮ್ಮುಟ್ಟಿ ಹಿರಿಯ ಮಗನಾಗಿದ್ದಾರೆ. ಕುಟುಂಬ ಸದಸ್ಯರ ಪ್ರಕಾರ ಕೊಟ್ಟಾಯಂನ ಚೆಂಪುವಿನ ಜುಮಾ ಮಸೀದಿಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ನಟಿ ಮಾನ್ವಿತಾ ಕಾಮತ್ ತಾಯಿ ನಿಧನ

ಮಲಯಾಳಂ ಸಿನಿಮಾರಂಗದ ಖ್ಯಾತ ನಟ ಮಮ್ಮುಟ್ಟಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಕೂಡ ಸಿನಿಮಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಮಲಯಾಲಂ ಮಾತ್ರವಲ್ಲದೇ ಮಮ್ಮುಟ್ಟಿ ಬೇರೆ ಬೇರೆ ಭಾಷೆಯಲ್ಲೂ ನಟಿಸಿದ್ದಾರೆ. ತಂದೆಯ ಹಾಗೆ ಮಗ ದುಲ್ಕರ್ ಕೂಡ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಮ್ಮುಟ್ಟಿ ಕೊನೆಯದಾಗಿ ಕ್ರಿಸ್ಟೋಫರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?