29 ವರ್ಷದ ಅಂಕಲ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ನಟಿ ಕುಬ್ರಾ ಸೇಠ್; ಇಟ್ಟಿಗೆ ಎಸೆದು ಹಲ್ಲೆ

By Vaishnavi ChandrashekarFirst Published Jan 20, 2023, 6:33 PM IST
Highlights

ಓಪನ್‌ ಬುಕ್‌ನಲ್ಲಿ ಜೀವನ ಪ್ರತಿಯೊಂದು ಕಹಿ ಘಟನೆಯನ್ನು ಹಂಚಿಕೊಂಡ ಕುಬ್ರಾ ಸೇಠ್. ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ಕೇವಲ 19 ವರ್ಷ ಎಂದ ನಟಿ....

ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟಿ, ನಿರೂಪಕಿ ಕಮ್ ಮಾಡಲ್ ಕುಬ್ರಾ ಸೇಠ್ ತಮ್ಮ ಜೀವನ ಖುಷ ದುಃಖಗಳನ್ನು ಪುಸ್ತಕ ಬರೆಯುವ ಮೂಲಕ ಹಂಚಿಕೊಂಡಿದ್ದಾರೆ. 'ಓಪನ್ ಬುಕ್‌'ನಲ್ಲಿ ಕುಬ್ರಾ ಅಬಾರ್ಷನ್ ಆದ ಘಟನೆಯಿಂದ ಹಿಡಿದು ಲೈಂಗಿಕ ಕಿರುಕುಳ ಅನುಭವಿಸಿರುವ ವಿಚಾರವನ್ನು ಬರೆದಿದ್ದಾರೆ. ಕೆಲವೊಂದು ಘಟನೆಗಳು ಡಿಲೀಟ್ ಆಗಿದ್ದರೂ ಕೂಡ ಈ ಪುಸ್ತಕ ಓದುಗರ ಗಮನ ಸೆಳೆದಿದೆ. 

'ಲೈಂಗಿಕ ಕಿರುಕುಳ ಅಂದ್ರೆ ಏನು ಎಂದು ಗೊತ್ತಿರದ ವಯಸ್ಸಿನಲ್ಲಿ ಕಿರುಕುಳ ಅನುಭವಿಸಿರುವೆ. ಪುಸ್ತಕಗಳಲ್ಲಿ ಕೆಲವೊಂದು ವಿಚಾರಗಳನ್ನು ಡಿಲೀಟ್ ಮಾಡಲಾಗಿದೆ. ಒಂದು ಒಳ್ಳೆಯ ಮಾತಿದೆ Never tell a story untill you are over it ಅಂತ. ಈ ಪುಸ್ತಕಗಳ ಮೂಲಕ ಆ ಘಟನೆಗಳಿಂದ ಹೊರ ಬರಲು ಸಾಧ್ಯವಾಗಿತ್ತು. ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಅಂಕಲ್ ಏನೇ ಮಾಡಿದ್ದರೂ ಹಿಂದೆ ಸೆರೆಯುತ್ತಿರಲಿಲ್ಲ ಆತನಿಗೆ ನಾನು ಬೇಡ ಎಂದು ಎಷ್ಟು ಸಲ ಹೇಳಿದ್ದರೂ ಅರ್ಥವಾಗುತ್ತಿರಲಿಲ್ಲ. ನಿನ್ನ ತಾಯಿಗೆ ಹೇಳುತ್ತೀನಿ ನಾನು ಇದು ಮಾಡುತ್ತೀನಿ ಹಾಗೆ ಮಾಡುತ್ತೀನಿ ಎಂದು ಹೇಳುತ್ತಾ ಹೇಳುತ್ತಾ ತುಂಬಾ ಫಿಸಿಕಲ್ ಆಗುತ್ತಿದ್ದರು. ಮಾನಸಿಕವಾಗಿ ಕುಗ್ಗಿದೆ.' ಎಂದು  Faya ಸಂದರ್ಶನದಲ್ಲಿ ಕುಬ್ರಾ ಮಾತನಾಡಿದ್ದಾರೆ.

ಸ್ಕೂಬಾ ಡೈವಿಂಗ್ ಕ್ಲಾಸ್‌ನಲ್ಲಿ ಮೈಮರೆತೆ, ಗರ್ಭಿಣಿಯಾಗಿದ್ದೆ;ಗರ್ಭಪಾತದ ಕರುಣಾಜನಕ ಕಥೆ ಬಿಚ್ಚಿಟ್ಟ ಕುಬ್ರಾ ಸೇಠ್

'ನಾನು 17 ವರ್ಷವಿದ್ದೆ ಆತ 29 ವರ್ಷವಿದ್ದರು. ನಾನು ಬೇಸ್‌ಮೆಂಟ್‌ನಲ್ಲಿ ನಿಂತುಕೊಂಡಿದೆ ನನ್ನನ್ನು ಕರೆಯುತ್ತಿದ್ದರು, ನಾನು ಬರುವುದಿಲ್ಲ ಆಗಲ್ಲ ಎಂದು ವಾದ ಮಾಡುತ್ತಿದ್ದೆ ಏನು ಮಾಡಿದ್ದರೂ ಕೇಳಿಸಿಕೊಳ್ಳುತ್ತಿರಲಿಲ್ಲ ಆಗ ಸಿಟ್ಟು ಮಾಡಿಕೊಂಡು ಅಲ್ಲಿದ್ದ ಇಟ್ಟಿಗೆ ತೆಗೆದುಕೊಂಡು ಆತನ ಮುಖಕ್ಕೆ ಎಸೆದೆ. ಆತನ ಕಿವಿಗೆ ಪೆಟ್ಟು ಬಿತ್ತು ಆಸ್ಪತ್ರೆಗೆ ಸೇರಿಕೊಂಡು ಸ್ಟಿಚ್ ಹಾಕಿಸಿಕೊಂಡ. ಆ ಘಟನೆ ನಡೆದ ನಂತರ ಆತ ಹಿಂದೆ ಸೆರೆಯಲಿಲ್ಲ. ಮಾತನಾಡುವುದನ್ನು ನಿಲ್ಲಿಸಿದ್ದರು ಆಗ ನನ್ನ ತಾಯಿ ಬಂದು ಯಾಕೆ ಈ ರೀತಿ ಮಾಡಿರುವೆ ನಿಂದು ಈ ತಪ್ಪು ಮಾತನಾಡಿಸು ಎನ್ನುತ್ತಿದ್ದರು. ಈ ವಿಚಾರವನ್ನು ನನ್ನ ತಾಯಿ ಜೊತೆ ಹಂಚಿಕೊಳ್ಳುತ್ತಿರಲಿಲ್ಲ. ನನ್ನ ತಾಯಿ ತುಂಬಾನೇ ಸ್ಮಾರ್ಟ್ ಮಹಿಳೆ, ಸುಳ್ಳು ಹೇಳಿದ್ದರೆ ಬೇಗ ಕಂಡು ಹಿಡಿಯುತ್ತಿದ್ದರು ಆದರೆ ಈ ಘಟನೆ ಬಗ್ಗೆ ಸಣ್ಣ ಸುಳಿವು ಪಡೆಯಲಿಲ್ಲ. ಹುಡುಗರ ಜೊತೆ ಹೊರ ಹೋಗಿದ್ದರೆ ಆಕೆಗೆ ತಿಳಿಯುತ್ತಿತ್ತು. ಈ ವ್ಯಕ್ತಿ ನಮ್ಮ ಮನೆಯಲ್ಲಿದ್ದುಕೊಂಡು ಈ ರೀತಿ ಮಾಡಿದ್ದು ಬೇಸರದ ವಿಚಾರ.' ಎಂದು ಹೇಳಿದ್ದಾರೆ.

 

'ನಮ್ಮ ಜೀವನದ ಕಷ್ಟದ ಸಮಯದಲ್ಲಿದ್ದಾಗ ಈ ಘಟನೆ ನಡೆದ ಕಾರಣ ನಮಗೆ ಆ ಕಷ್ಟು ಎದುರಿಸುವುದಷ್ಟೆ ತಲೆಯಲ್ಲಿತ್ತು ಇದರ ಬಗ್ಗ ಚಿಂತೆ ಮಾಡಲಿಲ್ಲ. ಒಂದು ದಿನ ಕಾರಿನಲ್ಲಿ ಪ್ರಯಾಣ ಮಾಡುವಾಗ ನನ್ನ ತಾಯಿಗೆ ಈ ಘಟನೆ ಬಗ್ಗೆ ವಿವರಿಸಿದೆ. ಈ ವಿಚಾರ ಹೇಳುತ್ತಿರುವಾಗ ತಾಯಿ ಮುಖ ಬಣ್ಣ ಬದಲಾಗಿತ್ತು. ಆಕೆ ಏನು ಫೀಲ್ ಮಾಡುತ್ತಿದ್ದಳು ಎಂದು ನನಗೆ ಗೊತ್ತಿಲ್ಲ ಆದರೆ ಬೇಸರ ಕೋಪ ಎಲ್ಲ ಬಂದಿರುತ್ತದೆ. ಅಸಹಾಯಕಳಾಗಿ ಕುಳಿತು ಬಿಟ್ಟಿದ್ದರು. ನನಗೆ ಸಾರಿ ಕೇಳಿದ್ದರು. ಆ ಘಟನೆ ಬಿಟ್ಟು ಹೊರ ಬಂದಿರುವೆ. ಅಬಾರ್ಷನ್‌ ಘಟನೆ ಕೂಡ ತಾಯಿ ಜೊತೆ ಹಂಚಿಕೊಂಡಿರುವೆ. ನನ್ನ ತಾಯಿ ಒಂದು ಮಾತು ಹೇಳುತ್ತಿದ್ದರು ಏನೇ ವಿಚಾರ ಇದ್ದರೂ ನೀನು ನೇರವಾಗಿ ಬಂದು ಹೇಳಬೇಕು ಮತ್ತೊಬ್ಬರಿಂದ ನಾನು ಕೇಳಿಸಿಕೊಳ್ಳಬಾರದು ಎಂದು. ಈಗಲೂ ಆಕೆ ಮಾತನನ್ನು ಪಾಲಿಸುತ್ತಿರುವೆ, ಪ್ರತಿಯೊಂದು ವಿಚಾರ ಹಂಚಿಕೊಂಡಿರುವೆ ಅದೇ ಧೈರ್ಯದ ಮೇಲೆ ಪುಸ್ತಕ ಬರೆದಿರುವೆ' ಎಂದಿದ್ದಾರೆ ಕುಬ್ರಾ. 

click me!