ನಿರ್ದೇಶಕರೊಬ್ಬರು ಹೈದರಾಬಾದ್‌ನಲ್ಲಿ ನನ್ನನ್ನ ಒಂದು ದಿನಕ್ಕೆ ಸೇಲ್ ಮಾಡಿದ್ರು: ನಟಿಯ ಅಚ್ಚರಿ ಹೇಳಿಕೆ

Published : Jul 12, 2025, 09:15 PM IST
Khushi Mukherjee

ಸಾರಾಂಶ

ನಟಿ  ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಿರ್ದೇಶಕರೊಬ್ಬರು ನಿರ್ಮಾಪಕರಿಗೆ ತಮ್ಮನ್ನು ಮಾರಾಟ ಮಾಡಲು ಯತ್ನಿಸಿದ್ದಾಗಿ ಆರೋಪಿಸಿದ್ದಾರೆ. 

ಮುಂಬೈ: ಇತ್ತೀಚಿನ ದಿನಗಳಲ್ಲಿ ತಮ್ಮ ಚಿಕ್ಕ ಬಟ್ಟೆಗಳಿಂದಲೇ ಟ್ರೋಲ್ ಆಗುತ್ತಿರುವ ನಟಿ, ಕಾಸ್ಟಿಂಗ್ ಕೌಚ್ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ನಿರ್ದೇಶಕರೊಬ್ಬರು ಹೈದರಾಬಾದ್‌ನಲ್ಲಿ ನಿರ್ಮಾಪಕರೊಬ್ಬರಿಗೆ ಒಂದು ದಿನಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಜೀ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಂದು ಹೈದರಾಬಾದ್‌ನಿಂದ ಮುಂಬೈಗೆ ಹೇಗೆ ಬಂದು ಎಂಬುದನ್ನು ವಿವರಿಸಿದ್ದಾರೆ. ಎಲ್ಲರಂತೆ ಈ ನಟಿಯೂ ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡ ನಿರ್ದೇಶಕ ಯಾರು? ಆ ನಿರ್ಮಾಪಕ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.

ನಟಿ ಖುಷಿ ಮುಖರ್ಜಿ ಯಾವುದೇ ಸಿನಿಮಾ, ಟಿವಿ ಶೋಯಲ್ಲಿ ಭಾಗಿಯಾಗಿದಿದ್ದರೂ ತಮ್ಮ ಬಟ್ಟೆಗಳಿಂದಲೇ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ ಕಟ್‌ ಜೀನ್ಸ್ ಮತ್ತು ತುಂಡುಡುಗೆಯಿಂದಾಗಿ ವ್ಯಾಪಕ ಟ್ರೋಲ್ ಆಗಿದ್ದರು. ಇದೀಗ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ವೈಯಕ್ತಿಕ ಜೀವನದ ಬಗ್ಗೆ ಖುಷಿ ಮುಖರ್ಜಿ ಮಾತನಾಡಿ, ನಾನು ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಟಿ ಖುಷಿ ಮುಖರ್ಜಿ ಹೇಳಿದ್ದೇನು?

ಈ ಘಟನೆ ಹೈದರಾಬಾದ್‌ನಲ್ಲಿ ನಡೆದಿತ್ತು. ಅಲ್ಲಿ ನಿರ್ದೇಶಕರೊಬ್ಬರು ನನ್ನನ್ನು ನಿರ್ಮಾಪಕರಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದರು. ಆ ನಿರ್ದೇಶಕರು ನನಗಾಗಿಯೇ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ನಿರ್ಮಾಪಕರೊಬ್ಬರ ಜೊತೆ ಒಂದು ರಾತ್ರಿ ಕಳೆಯಲು ನಿರ್ದೇಶಕರು ಒಂದು ಲಕ್ಷ ರೂಪಾಯಿ ತೆಗೆದುಕೊಂಡಿದ್ದರು.

ಸಭೆಯಲ್ಲಿ ನನ್ನ ಬಳಿಯಲ್ಲಿ ಬಂದ ನಿರ್ಮಾಪಕರೊಬ್ಬರು, ಇಂದು ರಾತ್ರಿ ನೀವು ನನ್ನೊಂದಿಗೆ ಕಳೆಯಲಿದ್ದೀರಿ ಎಂದು ಹೇಳಿದರು. ನಾನು ಒಂದು ಕ್ಷಣ ಶಾಕ್ ಅದೆ. ನನಗೆ ಈ ವಿಷಯ ಯಾವುದೂ ಗೊತ್ತಿಲ್ಲ. ನಿರ್ದೇಶಕ ಮತ್ತು ನಿರ್ಮಾಪಕರ ನಡುವಿನ ಒಪ್ಪಂದಕ್ಕೆ ನನ್ನ ಸಮ್ಮತಿ ಇಲ್ಲ ಎಂದು ಆ ಪ್ರೊಡ್ಯೂಸರ್‌ಗೆ ಸ್ಪಷ್ಟವಾಗಿ ಹೇಳಿದೆ.

ನನ್ನ ಮಾತು ಕೇಳಿದ ಆ ನಿರ್ಮಾಪಕರು ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳಲಿಲ್ಲ. ಅವರೇ ಮುಂಬೈಗೆ ಫ್ಲೈಟ್ ಟಿಕೆಟ್ ಮಾಡಿ ಹೈದರಾಬಾದ್‌ನಿಂದ ಕಳುಹಿಸಿದರು. ನಿರ್ಮಾಪಕರು ನನ್ನನ್ನು ಟಚ್ ಸಹ ಮಾಡಲಿಲ್ಲ ಎಂದು ಖುಷಿ ಮುಖರ್ಜಿ ಹೇಳಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕ ಯಾರು ಎಂಬುದನ್ನು ಖುಷಿ ಮುಖರ್ಜಿ ಬಹಿರಂಗಪಡಿಸಿಲ್ಲ.

ಸೈಡ್ ಕಟ್ ಡ್ರೆಸ್ ಧರಿಸಿ ಕೆಟ್ಟದಾಗಿ ಟ್ರೋಲ್

ಕೆಲ ದಿನಗಳ ಹಿಂದೆಯಷ್ಟೇ ಸೈಟ್ ಕಟ್ ಡ್ರೆಸ್ ಧರಿಸಿ ಖುಷಿ ಮುಖರ್ಜಿ ಕೆಟ್ಟದಾಗಿ ಟ್ರೋಲ್ ಆಗಿದ್ದರು. ಪಾಪರಾಜಿಗಳು ಫೋಟೋ ಕ್ಲಿಕ್ಕಿಸುತ್ತಿರುವಾಗಲೇ ಖುಷಿ ಮುಖರ್ಜಿ ಹಾಕಿದ್ದ ಡ್ರೆಸ್ ಗಾಳಿಗೆ ಹಾರಲಾಂಭಿಸಿತ್ತು. ನಂತರ ಬಟ್ಟೆ ಹಿಡಿದುಕೊಳ್ಳುತ್ತಲೇ ಕಾರ್‌ನೊಳಗೆ ಬಂದು ಕುಳಿತಿದ್ದರು. ಇದೇ ವೇಳೆ ಅಲ್ಲಿದ್ದವರಲ್ಲಿ ಒಬ್ಬ, ಈಕೆ ಚಡ್ಡಿಯೇ ಹಾಕಿಲ್ಲ ಎಂದು ಕಮೆಂಟ್ ಮಾಡಿದ್ದರು. ವಿವಿಧ ಬರಹದಡಿಯಲ್ಲಿ ಈ ವಿಡಿಯೋವನ್ನು ಟ್ರೋಲ್ ಮಾಡಲಾಗಿತ್ತು. 

ಮತ್ತೋರ್ವ ಕಿರುತೆರೆ ನಟಿ ಫಲಕ್ ನಾಜ್, ಇದು ಅತಿಯಾಯ್ತು ಎಂದು ಖುಷಿ ಮುಖರ್ಜಿಯನ್ನು ಟೀಕಿಸಿದ್ದರು. ಮೊದಲಿನಿಂದಲೂ ಈ ಇಬ್ಬರು ನಟಿಯರ ನಡುವೆ ಶೀತಲ ಸಮರ ನಡೆಯುತ್ತಿದೆ. ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಖುಷಿ ಮುಖರ್ಜಿ ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!
ಇದು ನಿಜ.. ಸದ್ಯವೇ ತಮಿಳು ಸಿನಿಮಾದಲ್ಲಿ ನಟಿಸಲಿರುವ ಶಾರುಖ್ ಖಾನ್; ನಿರ್ದೇಶಕರು ಯಾರು?