
ಬಾಲಿವುಡ್ ನಟಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅವರ ಮನೆಗೆ ಇಂದು (ನವೆಂಬರ್ 7, 2025) ಹೊಸ ಸದಸ್ಯರ ಆಗಮನವಾಗಿದೆ. ಕತ್ರಿನಾ ಅವರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ದಂಪತಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಅವರು ಗೊಂಬೆಯ ಫೋಟೋ ಹಂಚಿಕೊಂಡು, Blessed ಎಂದು ಬರೆದುಕೊಂಡಿದ್ದಾರೆ. 2021ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅವರು ಕೆಲವೇ ಕೆಲವು ಬಾಲಿವುಡ್ ತಾರೆಯರ ಸಾಕ್ಷಿಯಾಗಿ ಮದುವೆಯಾಗಿದ್ದರು.
ಸಾಕಷ್ಟು ಬಾರಿ ಕತ್ರಿನಾ ಕೈಫ್ ಅವರು ಗರ್ಭಿಣಿ ಎಂದು ಹೇಳಲಾಗಿತ್ತಾದರೂ ಕೂಡ ಅವೆಲ್ಲವೂ ವದಂತಿಯಾಗಿತ್ತು. ಕಳೆದ 2025ರ ಸೆಪ್ಟೆಂಬರ್ 23ರಂದು ಇನ್‌ಸ್ಟಾಗ್ರಾಂನಲ್ಲಿ ಈ ಜೋಡಿಯು ಪ್ರಗ್ನೆನ್ಸಿ ವಿಷಯವನ್ನು ಹಂಚಿಕೊಂಡಿತ್ತು. ಕತ್ರಿನಾ ಕೈಫ್‌ನ ಹೊಟ್ಟೆಯನ್ನು ವಿಕ್ಕಿ ಕೌಶಲ್ ಪ್ರೀತಿಯಿಂದ ಸ್ಪರ್ಶಿಸುತ್ತಿರುವ ಫೋಟೋ ಹಂಚಿಕೊಳ್ಳಲಾಗಿತ್ತು. ಇದಕ್ಕೆ "ನಮ್ಮ ಜೀವನದ ಅತ್ಯಂತ ದೊಡ್ಡ ಆಶೀರ್ವಾದ ಬರುತ್ತಿದೆ" ಎಂದು ಕ್ಯಾಪ್ಶನ್ ನೀಡಿದ್ದರು. ಅನೇಕರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದರು.
ಗರ್ಭಿಣಿಯಾದ ಬಳಿಕ ಕತ್ರಿನಾ ಕೈಫ್ ಅವರು ಸಾರ್ವಜನಿಕ ಜೀವನದಿಂದ ದೂರ ಇದ್ದರು, ಅಷ್ಟೇ ಅಲ್ಲದೆ ಸಿನಿಮಾ ಕೆಲಸದಲ್ಲಿಯೂ ಭಾಗಿ ಆಗಿರಲಿಲ್ಲ, ಹಾಲಿಡೇ ಎಂದು ಹೊರಗಡೆ ತಿರುಗಾಡಿರಲಿಲ್ಲ. ಮೂರನೇ ತಿಂಗಳಿನಿಂದ ಅವರು ತವರು ಮನೆಯವರ ಜೊತೆ ಲಂಡನ್‌ನಲ್ಲಿ ಇದ್ದರು ಎಂದು ವರದಿಗಳು ಹೇಳುತ್ತವೆ. ಅಲ್ಲಿಯೇ ಹೆರಿಗೆ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಕ್ಕಿ ಕೌಶಲ್ ಕುಟುಂಬಸ್ಥರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಕತ್ರಿನಾ ಕೈಫ್ ಅವರು ಬ್ರಿಟಿಷ್ ಮೂಲದ ಬಾಲಿವುಡ್ ನಟಿ. ಆದರೆ ಭಾರತೀಯರು ಎನ್ನುಷ್ಟರ ಮಟ್ಟಿಗೆ ಅವರು ಹಿಂದಿ ಭಾಷೆಯನ್ನು ಮಾತಾಡ್ತಾರೆ, ಹಿಂದು ಧರ್ಮದ ಆಚರಣೆಯನ್ನು ಪಾಲಿಸುತ್ತಾರೆ.
ಕುಟುಂಬದಲ್ಲಿ ಸರ್ಪ ದೋಷವಿದ್ದರೆ ಮಕ್ಕಳ ಜನನಕ್ಕೆ ಸಮಸ್ಯೆ ಆಗುವುದು, ಚರ್ಮ ಸಂಬಂಧಿತ ಕಾಯಿಲೆ ಬರುವುದು ಎಂದು ಹೇಳುತ್ತಾರೆ. ಕಳೆದ ಮಾರ್ಚ್‌ನಲ್ಲಿಯೇ ಈ ನಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಸರ್ಪ ಸಂಸ್ಕಾರ ಮಾಡಿಸಿಕೊಂಡಿದ್ದರು. ಇದನ್ನು ಅವರು ಅಷ್ಟಾಗಿ ಪಬ್ಲಿಕ್ ಕೂಡ ಮಾಡಿರಲಿಲ್ಲ. ಆದರೆ ಫೋಟೋಗಳು ವೈರಲ್ ಆದವು. ಸಂತಾನಕ್ಕೋಸ್ಕರ ಕತ್ರಿನಾ ಪೂಜೆ ಮಾಡಿಸಿದ್ದರು. 42 ವರ್ಷಕ್ಕೆ ಕತ್ರಿನಾ ಕೈಫ್ ಅವರು ಮಗುವಿಗೆ ಜನ್ಮ ನೀಡಿದ್ದರು. ನಿತ್ಯವೂ ಈ ದೇಗುಲಕ್ಕೆ ಸಾವಿರಾರು ಜನರು ಬಂದು, ಸರ್ಪದೋಷಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ.
ಅಂದಹಾಗೆ ವಿಕ್ಕಿ ಕೌಶಲ್ ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರ ನಟನೆಯ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.