ತನ್ನ ಮದುವೆಗೆ ಬಂದ ಬಾಲಕಿಗೆ 'ಬೇಟಾ' ಎಂದ, ಆಮೇಲೆ ಅವಳ ಮಕ್ಕಳಿಗೇ ತಂದೆಯಾದ! ಆ ನಟ ಯಾರು?

Published : Jul 22, 2025, 03:57 PM ISTUpdated : Jul 22, 2025, 05:42 PM IST
saif ali khan amrita singh

ಸಾರಾಂಶ

ನಟ ಸೈಫ್‌ ಅಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಮದುವೆಯಲ್ಲಿ ಭಾಗಿಯಾದ ಕರೀನಾ ಕಪೂರ್‌ಗೆ ಸೈಪ್‌ “ಥ್ಯಾಂಕ್ಯು ಭೇಟಾ” ಅಂತ ಹೇಳಿದ್ರಾ? 

1991 ರ ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮದುವೆಯಾದರು. ಸೈಫ್‌ಗಿಂತ ಅಮೃತಾ 12 ವರ್ಷ ದೊಡ್ಡವರು. ಈ ಮದುವೆ ಸೈಫ್‌ರ ತಾಯಿ ಶರ್ಮಿಳಾ ಟಾಗೋರ್ ಮತ್ತು ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಗೆ ಇಷ್ಟವೇ ಇರಲಿಲ್ಲ. ಈ ಮದುವೆಯಲ್ಲಿ ಕರೀನಾ ಕಪೂರ್‌ ಕೂಡ ಭಾಗಿಯಾಗಿದ್ರಂತೆ. ಆದರೆ ಅಂದು ಕರೀನಾಗೆ ಭೇಟಾ ಎಂದು ಸೈಫ್‌ ಕರೆದಿರೋದು ನಿಜವೇ?

ಅಮೃತಾ- ಸೈಫ್‌ ಲವ್‌ ಮ್ಯಾರೇಜ್!‌

ನಿರ್ದೇಶಕ ರಾಹುಲ್ ರಾವೈಲ್ ನಿರ್ದೇಶನದ ಸೈಫ್‌ರ ಮೊದಲ ಸಿನಿಮಾದ ಫೋಟೋಶೂಟ್‌ನಲ್ಲಿ ಈ ಜೋಡಿ ಭೇಟಿಯಾಗಿತ್ತು. ಆಮೇಲೆ ಇವರಿಬ್ಬರು ಪ್ರೀತಿಯಲ್ಲಿ ಬಿದ್ದು, ಮದುವೆಯಾದರು. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್‌ ಮದುವೆಗೆ ಕರೀನಾ ಕಪೂರ್‌ ಕೂಡ ಬಂದಿದ್ರಂತೆ. ಆಗ ಕರೀನಾಗೆ ಹತ್ತು ವರ್ಷ ವಯಸ್ಸಾದರೆ, ಸೈಫ್‌ಗೆ 21 ಆಗಿತ್ತು.

ಮದುವೆ ದಿನ ಭೇಟಾ ಎಂದಿದ್ರಾ ಸೈಫ್?

ಈ ಮದುವೆಯಲ್ಲಿ ಸೈಫ್‌ಗೆ ಕರೀನಾ, “ಮುಬಾರಕ್‌ ಸೈಫ್‌ ಅಂಕಲ್”‌ ಎಂದಿದ್ದರಂತೆ. ಆಗ ಸೈಫ್‌ “ಥ್ಯಾಂಕ್ಯು ಭೇಟಾ” ಎಂದು ಹೇಳಿದ್ದರಂತೆ. ಕರೀನಾ ಕಪೂರ್‌ ಹಾಗೂ ಸೈಫ್‌ ಅಲಿ ಖಾನ್‌ ಅವರು 2011ರಲ್ಲಿ ಮದುವೆಯಾದಾಗ ಹೀಗೊಂದು ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದು ನಿಖರವೇ ಎಂಬ ಬಗ್ಗೆ ಎಲ್ಲಿಯೂ ಮಾಹಿತಿಯಿಲ್ಲ.

ಡಿವೋರ್ಸ್‌ ಆಗಿದ್ದು ಯಾಕೆ?

ಅಭಿಪ್ರಾಯಗಳ ವ್ಯತ್ಯಾಸದಿಂದ ಸೈಫ್‌ ಅಲಿ ಖಾನ್‌, ಅಮೃತಾ ಅವರು 2004ರಲ್ಲಿ ಡಿವೋರ್ಸ್‌ ಪಡೆದರು. ಹಾಗೆ ಈ ದಂಪತಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಅಮೃತಾ ಸಿಂಗ್‌ ಅಭಿಮಾನಿ ಕರೀನಾ ಕಪೂರ್!‌

ಇದುವರೆಗೂ ಅಮೃತಾ ಸಿಂಗ್‌ರನ್ನು ಕರೀನಾ ಕಪೂರ್ ಭೇಟಿಯಾಗಿಲ್ಲ. 2008ರಲ್ಲಿ ನೀಡಿದ ಸಂದರ್ಶನದಲ್ಲಿ ಕರೀನಾ ಅವರು, “ನಾನು ಅಮೃತಾ ಸಿಂಗ್‌ರ ಸಿನಿಮಾಗಳ ಅಭಿಮಾನಿ” ಎಂದು ಹೇಳಿದ್ದರು. ಅವರು, "ನಾನು ಸೈಫ್‌ ಅಲಿ ಖಾನ್‌ರ ಮೊದಲ ಪತ್ನಿ, ಅವರ ಮಕ್ಕಳ ತಾಯಿ ಅಮೃತಾರನ್ನು ಯಾವಾಗಲೂ ಗೌರವಿಸುತ್ತೇನೆ" ಎಂದು ಹೇಳಿದ್ದರು. ಸೈಫ್ ಮತ್ತು ಅಮೃತಾ ಒಳ್ಳೆಯ ಸಂಬಂಧ ಹೊಂದಿರಬೇಕು ಎಂದು ಕರೀನಾ ಹೇಳುತ್ತಾರೆ.

ಎರಡನೇ ಮದುವೆ ಆಗುವಾಗ ಅಮೃತಾಗೆ ಪತ್ರ ಬರೆದಿದ್ದ ಸೈಫ್!‌

2018ರಲ್ಲಿ ಕರಣ್ ಜೋಹರ್‌ರ "ಕಾಫಿ ವಿಥ್ ಕರಣ್" ಶೋನಲ್ಲಿ ಸೈಫ್ ಅಲಿ ಖಾನ್‌ ಅವರು ಮಗಳು ಸಾರಾ ಜೊತೆಗೆ ಕಾಣಿಸಿಕೊಂಡಿದ್ದರು. ಆಗ ಸೈಫ್ ತಾವು ಕರೀನಾ ಜೊತೆ ಮದುವೆ ಆಗೋ ಮೊದಲು ಅಮೃತಾ ಸಿಂಗ್‌ಗೆ ಒಂದು ಲೆಟರ್ ಬರೆದಿದ್ದೇನೆ ಎಂದು ಹೇಳಿದ್ದರು. ಅದರಲ್ಲಿ ಹೊಸ ಜೀವನದ ಆರಂಭ, ಹಳೆಯ ದಿನಗಳನ್ನು ಗೌರವಿಸುವ ಸಂದೇಶವಿತ್ತು. ಕರೀನಾರಿಗೆ ಈ ಲೆಟರ್ ತೋರಿಸಿದಾಗ, ಅವರು ಕೂಡ ಒಳ್ಳೆಯದು ಎಂದು ಹೇಳಿದ್ದರು. ಸೈಫ್‌ ಹಾಗೂ ಕರೀನಾ ಮದುವೆಯಲ್ಲಿ ಸಾರಾ ಕೂಡ ತನ್ನ ತಮ್ಮ ಇಬ್ರಾಹಿಂ ಜೊತೆಗೆ ಭಾಗಿಯಾಗಿದ್ದರು.

ಇಂದು ಕರೀನಾ ಕಪೂರ್‌ ಮನೆಗೆ ಸಾರಾ ಅಲಿ ಖಾನ್‌, ಇಬ್ರಾಹಿಂ ಅಲಿ ಖಾನ್‌ ಕೂಡ ಆಗಾಗ ಬಂದು ಹೋಗುತ್ತಿರುತ್ತಾರೆ. ಅಂದಹಾಗೆ ಕರೀನಾಗೂ ಕೂಡ ಇಬ್ಬರು ಮಕ್ಕಳಿದ್ದಾರೆ. ಕರೀನಾ ಮಕ್ಕಳ ಜೊತೆ ಅಮೃತಾ ಮಕ್ಕಳು ಕೂಡ ಉತ್ತಮ ಸಂಬಂಧ ಹೊಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ
'ನನ್ನ ಸಿನಿಮಾ ನೋಡಿ' ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್'.. ಓಲ್ಡ್ ಫೋಟೋ ಈಗ ವೈರಲ್!