ನಟಿ ಕಂಗನಾ ರಣಾವತ್​ ಲೋಕಸಭೆಗೆ ಸ್ಪರ್ಧೆ ಕನ್​ಫರ್ಮ್​: ಯಾವ ಕ್ಷೇತ್ರ, ಯಾವ ಪಕ್ಷ? ಇಲ್ಲಿದೆ ಡಿಟೇಲ್ಸ್​..

By Suvarna News  |  First Published Dec 21, 2023, 5:22 PM IST

ನಟಿ ಕಂಗನಾ ರಣಾವತ್​ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು ತಂದೆ ಮಾಹಿತಿ ನೀಡಿದ್ದಾರೆ. ಅವರು ಹೇಳಿದ್ದೇನು? 
 


ಮನಸ್ಸಿಗೆ ಅನ್ನಿಸಿದ್ದನ್ನು ನೇರಾನೇರವಾಗಿ ಹೇಳಿ, ಯಾರಿಗೂ ಹೆದರದೇ ಧೈರ್ಯದಿಂದ ಮುನ್ನುಗ್ಗುತ್ತಲೇ ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರು ಪಡೆದಿರುವವರು ಬಾಲಿವುಡ್​ ನಟಿ ಕಂಗನಾ ರಣಾವತ್​. ಸದ್ಯ ಯಾಕೋ ಬಾಲಿವುಡ್​ನಲ್ಲಿ ಅವರ ಚಿತ್ರಗಳು ಹಿಟ್​ ಆಗುತ್ತಲೇ ಇಲ್ಲ.  ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್‌ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್‌ ಮೇಲೆ ಶಾಕ್‌ ನೀಡುತ್ತಿವೆ. ಈಚೆಗೆ ಇವರ  ತೇಜಸ್ ಚಿತ್ರ ಬಿಡುಗಡೆಯಾಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಹೇಳಿದ್ದಷ್ಟು ಗಳಿಕೆಯನ್ನು ಈ ಚಿತ್ರ ಮಾಡಲಿಲ್ಲ. ಇದನ್ನು ಹೊರತುಪಡಿಸಿದರೆ ನಟಿಯ ಕೈಯಲ್ಲಿ ಎಮರ್ಜೆನ್ಸಿ ಚಿತ್ರವಿದೆ.  ಅಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ.  1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ ಚಿತ್ರವು ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ. ಈ ಚಿತ್ರ ಕೂಡ ಮುಂದೂಡತ್ತಲೇ ಸಾಗಿದೆ. ಇದೀಗ ನಟಿಯ ಬಗ್ಗೆ ಇಂಟರೆಸ್ಟಿಂಗ್​ ಮಾಹಿತಿಯೊಂದು ಲಭ್ಯವಾಗಿದೆ. ಅದೇನೆಂದರೆ, ನಟಿ ರಾಜಕೀಯಕ್ಕೆ ಎಂಟ್ರಿ ಕೊಡುವುದು ಕನ್​ಫರ್ಮ್​ ಆಗಿದೆ. ಈ ಬಗ್ಗೆ ಕಳೆದೊಂದು ವರ್ಷದಿಂದ ಸಾಕಷ್ಟು ಚರ್ಚೆಯಾಗುತ್ತಿದ್ದರೂ ಇದೀಗ ಕಂಗನಾ ರಾಜಕೀಯದಲ್ಲಿ ಗುರುತಿಸಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದು ದಿಟವಾಗಿದೆ.


ಬಿಜೆಪಿ ನಾಯಕರ ಜೊತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ನಟಿಗೆ ರಾಜಕೀಯ ಪ್ರವೇಶದ ಕುರಿತು ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇದ್ದವು. ಇಲ್ಲಿಯವರೆಗೂ ಆಕೆ ಅದನ್ನು ನಿರಾಕರಿಸುತ್ತಲೇ ಬಂದಿದ್ದರು. ಆದರೆ ಇತ್ತೀಚೆಗೆ ಅವರು  ರಾಜಕೀಯ ಪ್ರವೇಶದ ಸುಳಿವು ನೀಡಿದ್ದರು. ತೇಜಸ್ ಚಿತ್ರದ ಬಿಡುಗಡೆಯ ನಂತರ  ಗುಜರಾತ್‌ನ  ದ್ವಾರಕಾದ ಜಗತ್ ಮಂದಿರಕ್ಕೆ ತೆರಳಿದ್ದ ನಟಿ  ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದರು. ಮುಂದಿನ ದಿನಗಳಲ್ಲಿ ಶ್ರೀಕೃಷ್ಣನ ಆಶೀರ್ವಾದವಿದ್ದರೆ ನಾನೂ ಕೂಡ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದರು. ಇದೀಗ ಅದು ನಿಜವಾಗಿದೆ. ಮೂರು ದಿನಗಳ ಹಿಂದೆ ನಟಿ ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭೇಟಿ ನೀಡಿದ್ದರು. ಈ ಸಭೆಯ ನಂತರ, ಆಕೆಯ ತಂದೆ ಅಮರ್‌ದೀಪ್ ರಣಾವತ್​ ಸ್ವತಃ ಇದನ್ನು ಖಚಿತಪಡಿಸಿದ್ದಾರೆ.  2024 ರ ಲೋಕಸಭೆ ಚುನಾವಣೆಯಲ್ಲಿ ಕಂಗನಾ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ನಟಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಇವರು ಚಂಡೀಗಢದಿಂದ ಸ್ಪರ್ಧಿಸುವುದು ಬಹುತೇಕ ನಿಶ್ಚಯವಾಗಿದೆ. ಚಂಡೀಗಢದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆ. ಹೊಸ ಮುಖಗಳ ಪರಿಚಯಕ್ಕೂ ಪಕ್ಷ ಮುಂದಾಗಿದೆ.  ಅವರಲ್ಲಿ ನಟಿ ಕಂಗನಾ ರಣಾವತ್ ಕೂಡ ಒಬ್ಬರು ಎನ್ನಲಾಗುತ್ತಿದೆ . 

Tap to resize

Latest Videos

ಬಿಗ್​ಬಾಸ್ ಗೆದ್ದು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ರೈತನ ಮಗ ಜೈಲಿಗೆ! 9 ಕೇಸ್​ ದಾಖಲು: ಅಷ್ಟಕ್ಕೂ ಆಗಿದ್ದೇನು?

 ಒಟ್ಟೂ ಮೂರು ಲೋಕಸಭಾ ಕ್ಷೇತ್ರಗಳಿಂದ ಕಂಗನಾ   ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇವುಗಳಲ್ಲಿ ಮೊದಲ ಸ್ಥಾನ ಚಂಡೀಗಢ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಚಂಡೀಗಢದಲ್ಲಿ ನೆಲೆಸಿರುವಾಗಲೇ ಕಂಗನಾ ಶಾಲಾ ಶಿಕ್ಷಣ ಮುಗಿಸಿದ್ದರು. ಅವರು ಸೆಕ್ಟರ್ -15 ರಲ್ಲಿರುವ ಡಿಎವಿ ಶಾಲೆಯಲ್ಲಿ ಓದಿದ್ದಾರೆ. ಇಲ್ಲಿಂದಲೇ ಮಾಡೆಲಿಂಗ್ ಲೋಕಕ್ಕೆ ಕಾಲಿಡುವ ಕನಸು ಕೂಡ ಶುರುವಾಯಿತು. ಇದರಿಂದಾಗಿ ಅವರು ನಗರದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ಕುಟುಂಬವೂ ಚಂಡೀಗಢದಲ್ಲಿ ನೆಲೆಸಿದೆ. ಆದರೆ, ನಟಿ  ಮೂಲತಃ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರು. ಅಲ್ಲದೆ, ರಾಷ್ಟ್ರೀಯವಾದಿ ಸಿದ್ಧಾಂತ ಮತ್ತು ಬಿಜೆಪಿಯತ್ತ ಒಲವು ಕೂಡ ಅವರ ಹೆಸರು ಚರ್ಚೆಗೆ ಬರಲು ಕಾರಣವಾಗಿದೆ. ಹಿಮಾಚಲ ಪ್ರದೇಶದ ಹೆಚ್ಚಿನ ಜನರು ಚಂಡೀಗಢದಲ್ಲಿ ವಾಸಿಸುತ್ತಿದ್ದಾರೆ.   

ಇದರ ಜೊತೆಗೆ, ಹಿಮಾಚಲ ಪ್ರದೇಶದ ಮಥುರಾ ಮತ್ತು ಮಂಡಿ ಲೋಕಸಭಾ ಕ್ಷೇತ್ರಗಳಿಂದಲೂ ಕಂಗನಾ ಹೆಸರು ಕೇಳಿಬರುತ್ತಿದೆ. ನಟಿ ಹೇಮಾ ಮಾಲಿನಿ ಪ್ರಸ್ತುತ ಮಥುರಾದಿಂದ ಸಂಸದರಾಗಿದ್ದಾರೆ. ವಯೋಮಿತಿಯನ್ನು ಪರಿಗಣಿಸಿ, ಈಗ ಬಿಜೆಪಿ ಈ ಸ್ಥಾನದಿಂದ ಮತ್ತೊಂದು ಮುಖವನ್ನು ಹುಡುಕುತ್ತಿದ್ದು ಕಂಗನಾಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಅದೇ ಸಮಯದಲ್ಲಿ, ಕಂಗನಾ ಅವರ ಊರು ಮಂಡಿ ಕೂಡ ಇನ್ನೊಂದು  ಆಯ್ಕೆಯಾಗಿದೆ. ಅವರು ಸ್ಥಳೀಯರಾಗಿರುವುದರಿಂದ ಇಲ್ಲಿಯೂ ಬಿಜೆಪಿ ಅವರಿಗೆ ಅವಕಾಶ ನೀಡಬಹುದು. ಪ್ರಸ್ತುತ, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಈ ಕ್ಷೇತ್ರದಿಂದ ಸಂಸದರಾಗಿದ್ದಾರೆ.

ಐಶ್​- ಅಭಿ ಮದ್ವೆ ದಿನ ನಡೆದಿತ್ತು ಹೈಡ್ರಾಮಾ: ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಜಾಹ್ನವಿ ಕಪೂರ್​!

click me!