ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ?

Suvarna News   | Asianet News
Published : Sep 28, 2020, 01:15 PM ISTUpdated : Sep 29, 2020, 10:49 AM IST
ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ?

ಸಾರಾಂಶ

ಭಾವೀ ಪತಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ನಯನತಾರ. ಜಾಲಿ ಟ್ರಿಪ್‌ ಕಮ್ ಬರ್ತಡೇಗೆ ಎಷ್ಟು ಖರ್ಚು ಮಾಡಿದ್ದಾರೆ?

ಕಾಲಿವುಡ್‌ ಬ್ಯೂಟಿ ಕ್ವೀನ್ ನಯನತಾರ ನಿರ್ದೇಶಕ ವಿಘ್ನೇಶ್‌ರನ್ನು ನಾಲ್ಕು ವರ್ಷಗಳಿಂದಲೂ  ಪ್ರೀತಿಸುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇದೆ. ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿರುವ ನಯನತಾರ ಬಗ್ಗೆ ಬಾಯ್‌ಫ್ರೆಂಡ್ ವಿಘ್ನೇಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಡೇಟ್‌ ನೀಡುತ್ತಿರುತ್ತಾರೆ. ಇತ್ತೀಚಿಗೆ ತಮ್ಮ ಬಾಲಿ, ಗೋವಾ ಟ್ರಿಪ್‌ ಬಗ್ಗೆಯೂ ಶೇರ್ ಮಾಡಿ ಕೊಂಡಿದ್ದಾರೆ.

ಮದುವೆಯಾಗದೇ ತಾಯಿ ಆಗುತ್ತಿದ್ದಾರಾ ನಯನತಾರಾ? 

ಗೋವಾ ಟ್ರಿಪ್‌ನಲ್ಲಿ ಪರಿಸರದ ನಡುವೆ ಸಮಯ ಕಳೆದ ನಯನತಾರ ಬ್ಯೂಟಿಯನ್ನು ನೆಟ್ಟಿಗರು ಮೆಚ್ಚಿ ಕೊಂಡಿದ್ದಾರೆ. ಇದೊಂದು ಜಾಲಿ ಟ್ರಿಪ್‌ ಆಗಿದ್ದಲ್ಲದೆ ಅತ್ತೆ ಹಾಗೂ ಭಾವಿ ಪತಿ ಹುಟ್ಟುಹಬ್ಬವನ್ನು ಆಚರಿಸಿ, ಆ ನಂತರ ಕೇರಳಕ್ಕೆ ತೆರಳಿ ಸುತ್ತಾಡಿ ಸಮಯ ಕಳೆದಿದ್ದಾರೆ.

ಗೋವಾ ಹಾಗೂ ಕೇರಳದಲ್ಲಿ ನಯನತಾರಾ ದುಬಾರಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ನೆಟ್ಟಿಗರು ಮಾಡಿರುವ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 25 ಲಕ್ಷ ಕರ್ಚು ಮಾಡಿದ್ದಾರೆ ಎನ್ನಲಾಗಿದೆ. ವಿಘ್ನೇಶ್ ಹಾಗೂ ಅತ್ತೆ ಬರ್ತಡೇಗೆ ನಯನತಾರ ಈ ರೀತಿಯ ಉಡುಗೊರೆ ನೀಡಿರುವುದು ಎಲ್ಲರ ಗಮನ ಸೆಳೆದಿದೆ.

ಕೊನೆಗೂ ನಯನತಾರಾ Live in relationship ಬಯಲು; ಮೂರು ಹುಡುಗರ ಕಥೆ!

ನಯನತಾರಾ ಸಂಭಾವನೆ?
ನಯನತಾರ ಸಿನಿಮಾ ಒಪ್ಪಿಕೊಳ್ಳವ ಸಮಯದಲ್ಲಿ ಕೆಲವು ಶರತ್ತುಗಳನ್ನು ಹಾಕುತ್ತಾರೆ. ಪ್ರಮೋಷನ್‌ನಲ್ಲಿ ಭಾಗಿಯಾಗುವುದಿಲ್ಲ. ಆದರೆ, ಸಂಭಾವನೆ ಮಾತ್ರ ಇಷ್ಟು ಎಂದು ಕರಾರುವಕ್ಕಾಗಿ, ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ. ಒಂದು ಸಿನಿಮಾ ಮಾಡುವುದಕ್ಕೆ ಅಂದಾಜು 4 ರಿಂದ 5 ಕೋಟಿ ರೂ. ಪಡೆಯುತ್ತಾರಂತೆ! ಇನ್ನು ನಯನತಾರ ಜೊತೆ ಸದಾ ಇರುವ ಸಹಾಯಕರಿಗೆ ದಿನಕ್ಕೆ 10 ರಿಂದ 12 ಸಾವಿರ ರೂ. ನೀಡುತ್ತಾರಂತೆ. ನಯನಾ ಜೊತೆ ಹಾಗೂ ಮನೆಯಲ್ಲಿ 7 ಮಂದಿ ಹೆಲ್ಪಿಗಿದ್ದಾರಂತೆ

"

 ಈ ಲೆಕ್ಕದ ಪ್ರಕಾರ ಒಂದು ದಿನದ ಖರ್ಚೇ 70 ಸಾವಿರವಾಗುತ್ತದೆ. ಕಾಲಿವುಟ್‌-ಟಾಲಿವುಡ್‌ ಹೈಯೆಸ್ಟ್ ಪೈಯ್ಡ್ ನಟಿಯಾಗಿರುವ ನಯನತಾರ ಜೀವನ ಶೈಲಿ ಈಗಲೂ ನೆಟ್ಟಿಗರಲ್ಲಿ ಕುತೂಹಲ ಹೆಚ್ಚಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!