ಬೆಂಗಳೂರು ರೇವ್ ಪಾರ್ಟಿ: ತೆಲುಗು ನಟಿ ಹೇಮಾ ಕೊಲ್ಲಂಗೆ ಷರತ್ತುಬದ್ಧ ಜಾಮೀನು

By Sathish Kumar KH  |  First Published Jun 12, 2024, 8:45 PM IST

ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಬಂಧನವಾಗಿದ್ದ ತೆಲುಗು ನಟಿ ಹೇಮಾ ಅವರಿಗೆ ಕೋರ್ಟ್‌ನಿಂದ ಜಾಮೀನು ಲಭ್ಯವಾಗಿದೆ. 


ಬೆಂಗಳೂರು (ಜೂ.12): ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್‌ಹೌಸ್ (Electronic City GR Farm House) ಒಂದರಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಮಾದಕ ವಸ್ತು (drugs) ಸೇವನೆ ಆರೋಪದಡಿ ಬೆಂಗಳೂರು ಪೊಲೀಸರಿಂದ ಬಂಧನವಾಗಿದ್ದ ತೆಲುಗು ನಟಿ ಹೇಮಾ ಕೊಲ್ಲಂ (Telugu Actress Hema Kollam) ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. 

ಬೆಂಗಳೂರಿನಲ್ಲಿ ಬರ್ತಡೇ ಪಾರ್ಟಿ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ಮೇ 19ರ ರಾತ್ರಿ ವೇಳೆ 'ಸನ್ ಸೆಟ್ ಟು ಸನ್ ರೈಸ್ ಪಾರ್ಟಿ' ಎಂಬ ಥೀಮ್ ಅಡಿಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ರೇವ್ ಪಾರ್ಟಿಯ ಮೇಲೆ ಸಿಸಿಬಿ ಮಾದಕ ವಸ್ತು ನಿಯಂತ್ರಣ ಘಟಕದಿಂದ ದಾಳಿ ಮಾಡಲಾಗಿತ್ತು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳು ಲಭ್ಯವಾಗಿದ್ದವು. ಈ ಹಿನ್ನೆಲೆಯಲ್ಲಿ ತೆಲುಗು ಸಿನಿಮಾ ನಟಿ ಹೇಮಾ ಕೊಲ್ಲಂ ಸೇರಿದಂತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 103 ಜನರನ್ನು ವಶಕ್ಕೆ ಪಡೆದು ರಕ್ತ ಪರೀಕ್ಷೆ ಮಾಡಲು ರಕ್ತದ ಮಾದರಿ ಸಂಗ್ರಹ ಮಾಡಲಾಗಿತ್ತು. ನಂತರ ವಶಕ್ಕೆ ಪಡೆದವರನ್ನು ಬಿಟ್ಟು ಕಳಿಸಲಾಗಿತ್ತು.

Tap to resize

Latest Videos

undefined

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭರ್ಜರಿ ಟ್ವಿಸ್ಟ್; ನಟ ದರ್ಶನ್ ಬಚಾವಾಗಲು 30 ಲಕ್ಷ ರೂ. ಡೀಲ್

ಆದರೆ, ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಿದ ನಂತರ ನಟಿ ಹೇಮಾ ಸೇರಿ 86 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾ ಅವರಿಗೆ ಬೆಂಗಳೂರು ಸಿಸಿಬಿ ಪೊಲೀಸರು ನೋಟೀಸ್ ಜಾರಿ ಮಾಡಿದ್ದರು. ಪೊಲೀಸರ ನೋಟೀಸ್ ಪಡೆದು ಹೈದರಾಬಾದಿನಿಂದ ಜೂ.03ರಂದು ಬೆಂಗಳೂರಿಗೆ ಬಂದಿದ್ದ ನಟಿ ಹೇಮಾ ಬುರ್ಖಾ ಧರಿಸಿ ಪೊಲೀಸರ ಮುಂದೆ ಹಜರಾಗಿದ್ದರು. ಆಗ ನಟಿ ಹೇಮಾ ಅವರನ್ನು ಮತ್ತೊಮ್ಮೆ ಮೆಡಿಕಲ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೊತೆಗೆ, ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಕೇಳಿದಾಗ ಅಸಂಬದ್ಧ ಉತ್ತರ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ನಂತರ, ಡ್ರಗ್ಸ್ ಸೇವನೆ ಆರೋಪದಲ್ಲಿ ಅರೆಸ್ಟ್ ಮಾಡಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಮಾಡಿದ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಸಲ್ಮಾ .ಎ.ಎಸ್ ಅವರು, ನಟಿ ಹೇಮಾ ಅವರನ್ನು ಜೂ.14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದರು. ಆದರೆ, ಇದು ಬೆಂಗಳೂರು ಗ್ರಾಮಾಂತರ ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ನಿಂದ ನಟಿ ಹೇಮಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

Actress Hema: ನನ್ನನ್ನು ಯಾಕೆ ಹೀಗೆ ತೋರಿಸ್ತೀರಾ? ನಾನು ಕೊಲೆ ಮಾಡಿದ್ದೀನಾ?: ನಟಿ ಹೇಮಾ ಮಾಧ್ಯಮದವರ ಮೇಲೆ ಗರಂ

ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನಟಿ ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ಅವರು, ಹೇಮಾ ಅವರಿಂದ ಪೊಲೀಸರು ಯಾವುದೇ ಮಾದಕವಸ್ತು ವಶಕ್ಕೆ ಪಡೆಯಲಾಗಿಲ್ಲ. ಜೊತೆಗೆ, ಕೃತ್ಯ ನಡೆದ ಹಲವು ದಿನಗಳ ನಂತರ ಕರೆಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಾಧೀಶರು ನಟಿ ಹೇಮಾ ಅವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಇದರಿಂದ ಬೆಂಗಳೂರು ಜೈಲಿನಿಂದ ಬಿಡುಗಡೆಯಾದ ನಟಿ ಹೇಮಾ ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

click me!