ಅನುಷ್ಕಾ ಧರಿಸಿದ ಪೊಲ್ಕಾ ಡಾಟ್ ಡ್ರೆಸ್‌ ಬೆಲೆ ಅರ್ಧ ಲಕ್ಷ..!

Published : Aug 27, 2020, 02:27 PM ISTUpdated : Aug 27, 2020, 07:31 PM IST
ಅನುಷ್ಕಾ ಧರಿಸಿದ ಪೊಲ್ಕಾ ಡಾಟ್ ಡ್ರೆಸ್‌ ಬೆಲೆ ಅರ್ಧ ಲಕ್ಷ..!

ಸಾರಾಂಶ

ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ. ಬ್ಲಾಕ್‌ ಮೇಲೆ ವೈಟ್ ಡಾಟೆಡ್ ಡ್ರೆಸ್‌ನಲ್ಲಿ ಪತಿ ಜೊತೆಗೆ ಪೋಸ್‌ ನೀಡಿದ ಅನುಷ್ಕಾ ಶರ್ಮಾ ಧರಿಸಿದ ಡ್ರೆಸ್ ಬೆಲೆ ಎಷ್ಟು ಗೊತ್ತಾ..?

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಜನವರಿಯಲ್ಲಿ ತಾವು ತಂದೆ, ತಾಯಿಯಾಗಲಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

"

2021ರ ಜನವರಿಯಲ್ಲಿ ಬರುವ ಕಂದನ ನಿರೀಕ್ಷೆಯಲ್ಲಿದ್ದೇವೆ ಎಂದು ಕಪಲ್ ಹೇಳಿಕೊಂಡಿದ್ದರು. ವಿರಾಟ್ ಸದ್ಯ ಐಪಿಎಲ್ ಮ್ಯಾಚ್‌ಗಾಗಿ ದುಬೈನಲ್ಲಿದ್ದು, ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಯಲ್ಲಿ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

IPL ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ ವಿರುಷ್ಕಾ ಜೋಡಿ

ತಾಯಿಯಾಗಲಿರುವ ಅನುಷ್ಕಾ ಇನ್ನಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ. ಬ್ಲಾಕ್ & ವೈಟ್‌ ಡ್ರೆಸ್‌ನಲ್ಲಿ ಅನುಷ್ಕಾ ಇನ್ನಷ್ಟು ಗ್ಲೋ ಕಾಣಿಸಿದ್ದಾರೆ. ಪೊಲ್ಕಾ ಡಾಟ್ ಡ್ರೆಸ್‌ನಲ್ಲಿ ಪ್ರೆಗ್ನೆಂಟ್ ಆಗಿರೋ ಅನುಷ್ಕಾ ಫೋಟೋ ಹಂಚಿಕೊಂಡಿದ್ದಾರೆ. LA ಬೇಸ್ಡ್ ಲೇಬಲ್ ನಿಖೋಲಾಸ್ ಡ್ರೆಸ್‌ನಲ್ಲಿ ಅನುಷ್ಕಾ ಸ್ಟೈಲಿಶ್ ಆಗಿ ಕಂಡಿದ್ದಾರೆ.

ಬ್ಲಾಕ್ ಡ್ರೆಸ್ ತುಂಬಾ ಬಿಳಿ ಬಣ್ಣದ ಚುಕ್ಕಿಗಳಿದ್ದು, ತುಂಬು ತೋಳಿದ್ದು ಎಟ್ರಾಕ್ಟಿವ್ ಆಗಿ ಕಾಣಿಸಿದೆ. ಡ್ರೆಸ್ ಮೇಲ್ಬಾಗದಲ್ಲಿ ಎಲಾಸ್ಟಿಕ್ ಇದ್ದು, ಪ್ರೆಗ್ನೆನ್ಸಿ ಸಮಯದಲ್ಲಿ ಧರಿಸಲು ಸೂಕ್ತವಾಗುವಂತಿದೆ. ಜ್ವೆಲ್ಸ್ ಏನೂ ಧರಿಸದೆ ಸಿಂಪಲ್ ಆಗಿ ಕಾಣಿಸಿದ್ದಾರೆ ಅನುಷ್ಕಾ. ಈ ಬಟ್ಟೆಗೆ ಸುಮಾರು 45 ಸಾವಿರ ಬೆಲೆ ಇದ್ದು, ಸದ್ಯ ಈ ಡ್ರೆಸ್ ಸ್ಟಾಕ್ ಇಲ್ಲ. 

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ತಲ’ ಅಜಿತ್‌ಗೆ ಏನಾಯ್ತು? ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿದ್ದೇಕೆ? ಅಭಿಮಾನಿಗಳಿಗೆ ಶಾಕ್!
‘Disney Queen’ ರೀತಿ ಕಾಣ್ತಾರೆ: ‘ಟಾಕ್ಸಿಕ್’ನಲ್ಲಿ ಈ ನಟಿಯ ಸೌಂದರ್ಯಕ್ಕೆ ಯಶ್ ಫುಲ್ ಫಿದಾ!