ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ 'ಸೀ ಯೂ ಸೂನ್' ಟ್ರೈಲರ್ ಶೂಟ್ ಮಾಡಿದ್ದು ಐಫೋನಲ್ಲಿ

Suvarna News   | Asianet News
Published : Aug 27, 2020, 11:30 AM IST
ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ 'ಸೀ ಯೂ ಸೂನ್' ಟ್ರೈಲರ್ ಶೂಟ್ ಮಾಡಿದ್ದು ಐಫೋನಲ್ಲಿ

ಸಾರಾಂಶ

ಬಿಡುಗಡೆಯಾಗಿ 24 ಗಂಟೆಯಲ್ಲಿ 2.5 ಮಿಲಿಯನ್ ವ್ಯೂಸ್ ಪಡೆದ ಸೀ ಯೂ ಸೂನ್ ಟ್ರೈಲರ್ ಶೂಟ್ ಮಾಡಿದ್ದು ಐಫೋನಲ್ಲಿ..! ಮಾಲಿವುಡ್ ಸಿನಿಮಾ ಟ್ರೈಲರ್ ಈಗ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ

ಮಾಲಿವುಡ್ ನಿರ್ದೇಶಕ ಮಹೇಶ್ ನಾರಾಯಣನ್ ನಿರ್ದೇಶನದ ಸೀ ಯೂ ಸೂನ್ ಸಿನಿಮಾದ ಟ್ರೈಲರ್ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿದೆ. ಅಂದ ಹಾಗೆ ಈ ಸಿನಿಮಾ ಶೂಟ್ ಮಾಡಿದ್ದು ಐಫೋನಲ್ಲಿ.

ಬೆಂಗಳೂರ್ ಡೇಸ್ ಸಿನಿಮಾ ಖ್ಯಾತಿಯ ನಟ ಫಹಾದ್ ಫಾಸಿಲ್ ಲೇಟೆಸ್ಟ್ ಸಿನಿಮಾ ಸೀ ಯೂ ಸೂನ್ ಟ್ರೈಲರ್ ಬಿಡುಗಡೆಯಾದ 24 ಗಂಟೆಯಲ್ಲಿ 2.5 ಮಿಲಿಯನ್ ವ್ಯೂಸ್ ಪಡೆದಿದೆ.

'ಬೆಂಗಳೂರು ಡೇಸ್' ಖ್ಯಾತಿಯ ಫಹಾದ್‌ ಬರ್ತ್‌ಡೇಗೆ ಎಕ್ಸ್‌ಪ್ರೆಷನ್ ಕ್ವೀನ್ ನಸ್ರಿಯಾ ಸ್ಪೆಷಲ್ ವಿಶ್..!

ಕಾಲ್‌ಸೆಂಟರ್ ಉದ್ಯೋಗಿಯಾಗಿರುವ ಸಾಮಾನ್ಯ ವ್ಯಕ್ತಿಯೊಬ್ಬನ ಜೀವನ ಕಥೆಯೇ ಸೀ ಯೂ ಸೂನ್. ಅಬ್ರಾಡ್‌ನಲ್ಲಿದ್ದ  ರೋಷನ್ ಮ್ಯಾಥ್ಯೂ ಪತ್ನಿ ಆತನ ತಾಯಿಯೊಂದಿಗೆ ಊರಲ್ಲಿರುತ್ತಾಳೆ.

ಪ್ರತಿದಿನ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಾ ಸಂಪರ್ಕದಲ್ಲಿರುತ್ತಾರೆ. ಒಂದು ದಿನ ಆಕೆ ಮನೆಯಿಂದ ಕಾಣೆಯಾಗುತ್ತಾಳೆ. ಈ ಸಂದರ್ಭ ವ್ಯಕ್ತಿ ಗೆಳೆಯನ ನೆರವು ಕೇಳುತ್ತಾನೆ. ಹಾಲಿವುಡ್‌ನ ಸರ್ಚಿಂಗ್ ಸಿನಿಮಾದಿಂದ ಪ್ರೇರಿತವಾಗಿ ಈ ಸಿನಿಮಾ ತಯಾರಾಗಿದೆ.

ಸೌತ್ ಸ್ಟಾರ್‌ಗಳ ಬ್ಯೂಟಿಫುಲ್ ಪುತ್ರಿಯರಿವರು..!

ಸಿನಿಮಾವನ್ನು ಫೋನಲ್ಲಿ ಚಿತ್ರೀಕರಿಸಲಾಗಿರುವುದು ವಿಶೇಷ. ಅಂದ ಹಾಗೆ ಈ ಟ್ರೈಲರ್ ನೋಡಿ ಐಫೋನ್ ಕೊಳ್ಳೋಕೆ ಓಡೋರು ಇಲ್ಲಿ ಕೇಳಿ. ಕಥೆ, ಸ್ಕ್ರಿಪ್ಟ್, ಶಬ್ದ, ವಿಎಫ್‌ಎಕ್ಸ್, ಮ್ಯೂಸಿಕ್ ಎಲ್ಲವೂ ಇದ್ದು ವಿಶುವಲ್ ಮಾತ್ರ ಸಿನಿಮಾ ನಿರ್ಮಿಸಿದ್ದಲ್ಲ. ವಿಶುವಲ್ ಐಫೋನದ್ದು, ಉಳಿದಂತೆ ಎಲ್ಲ ತಂತ್ರಜ್ಞಾನ ಬಳಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!