ಅಪ್ಪನ ಸಾವು, ಅಮ್ಮನ ನೋವು ನೋಡಿ ಕಣ್ಣೀರಿಟ್ಟ ಖ್ಯಾತ ನಟಿ!

Suvarna News   | Asianet News
Published : Apr 03, 2020, 02:20 PM IST
ಅಪ್ಪನ ಸಾವು, ಅಮ್ಮನ ನೋವು ನೋಡಿ ಕಣ್ಣೀರಿಟ್ಟ ಖ್ಯಾತ ನಟಿ!

ಸಾರಾಂಶ

ಕ್ಯಾನ್ಸರ್‌ನಿಂದ ತಂದೆಯನ್ನು ಕಳೆದುಕೊಂಡ ಹೆಬ್ಬುಲಿ ಚಿತ್ರದ ನಟಿ. ಸಾಮಾಜಿಕ ಜಾಲತಾಣದಲ್ಲಿ ತಂದೆಯ ಬಗ್ಗೆ ಬರೆದ ಪತ್ರದಲ್ಲಿ ತಾಯಿ ನೋವು ನೋಡಲಾಗದೇ ಕಣ್ಣೀರಿಟ್ಟಿದ್ದಾರೆ.

ಕಿಚ್ಚ ಸುದೀಪ್‌ ಅಭಿನಯದ 'ಹೆಬ್ಬುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ತಮ್ಮ ಪ್ರತಿಭೆ ತೋರಿದ ಬಹುಭಾಷಾ ನಟಿ ಅಮಲಾ ಪೌಲ್‌ ತನ್ನ  ಜೀವನದ ಕರಾಳ ದಿನದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜನವರಿ 22ರಂದು ಅಮಲಾ ಪೌಲ್‌ ತಮ್ಮ ತಂದೆ ಪೌಲ್‌ ವರ್ಗಿಸ್‌ ಅವರನ್ನು ಕ್ಯಾನ್ಸರ್‌ನಿಂದಾಗಿ ಕಳೆದುಕೊಂಡಿದ್ದಾರೆ. ಈ ದುಖಃದಿಂದ ಹೊರ ಬರಲು ಕುಟುಂಬದವರು ಪಟ್ಟ ಸಂಕಟವನ್ನು ಅಮಲಾ ತಾಯಿ ಅನ್ನೈಸ್‌ ಪೌಲ್‌ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. 

ಕದ್ದುಮುಚ್ಚಿ ಮದುವೆಯಾದ ಕನ್ನಡದ ನಟಿ; ವೈರಲ್‌ ಆಯ್ತು ಅಂತ ಫೋಟೋ ಡಿಲಿಟ್!

'ತಂದೆಯನ್ನು ಕಳೆದುಕೊಂಡ ನೋವನ್ನು ಯಾವತ್ತೂ ಹೇಳಿಕೊಳ್ಳಲಾಗದು. ನಮಗೇ ತಿಳಿಯದಂತೆ ಕತ್ತಲಿನ ಪ್ರಪಂಚಕ್ಕೆ ಕಾಲಿಡುತ್ತೇವೆ. ಕ್ಯಾನ್ಸರ್‌ನಿಂದ ಅಪ್ಪನನ್ನು ಕಳೆದುಕೊಂಡ ನೋವು ನನಗೆ ಅದೆಷ್ಟೋ ಪಾಠ ಹೇಳಿಕೊಟ್ಟಿದೆ. ಅದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ' ಎಂದು ಶುರು ಮಾಡಿದ್ದಾರೆ.

'ನಾವು ಎಷ್ಟು ಸುಂದರವಾದ ಪ್ರಪಂಚದಲ್ಲಿ ಹುಟ್ಟಿದ್ದೇವೆ. ಅಡಿಯಿಂದ ಮುಡಿಯವರೆಗೂ ಸೊಸೈಟಿ  ಏನೆಂದುಕೊಳ್ಳುತ್ತದೆ ಎಂದೇ ಚಿಂತಿಸುತ್ತೇವೆ.  ಚಿಕ್ಕ ವಯಸ್ಸಿನಿಂದಲೂ ಏನು ಮಾಡಬೇಕು, ಏನು ಮಾಡಬಾರದು ಎಂಬ ಕಂಡೀಷನ್‌ ನಮ್ಮ ಸುತ್ತಲೇ ಇರುತ್ತದೆ. ಈ ಸುಳಿಯಲ್ಲಿ ನಮ್ಮ ಮನಸ್ಸು ಎಂಬ ಪುಟ್ಟ ಕಂದಮ್ಮನನ್ನು ಡಬ್ಬದಲ್ಲಿ ಕೂಡಿಡುತ್ತೇವೆ. ಅದರಿಂದ ಹೂರ ಬರುವುದೇ ನಮ್ಮ ಗುರಿಯಾಗಿ ಆ ಹೋರಾಟದಲ್ಲಿ ನಮ್ಮನ್ನು ನಾವು ಪ್ರೀತಿಸುವುದನ್ನು ಮರೆಯುತ್ತೇವೆ. ಜಗತ್ತು ಏನೆಂದರೂ ಪರ್ವಾಗಿಲ್ಲ, ಎಂದು ಹೇಳುತ್ತಾ ಡಬ್ಬದಲ್ಲಿರುವ ಪುಟ್ಟ ಕಂದಮ್ಮನ ಹೊರ ತರಲು ಪ್ರಯತ್ನಿಸಲು ಮರೆಯುತ್ತೇವೆ. ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಹಾರುತ್ತಾ ನಾವು ಕೆಳೆದುಕೊಂಡಿದ್ದನ್ನು ಹುಡುಕುತ್ತಾ ಹೋಗುತ್ತೇವೆ. ಅದು ಸಂಗಾತಿಯ ವಿಚಾರದಲ್ಲೇ ಇರಬಹುದು ಅಥವಾ ನಾವು ಮಾಡುವ ಕೆಲಸದಲ್ಲೇ ಇರಬಹುದು.  ಅದರ ಬದಲು ನಮ್ಮನ್ನು ನಾವು ಪ್ರೀತಿಸೋಣ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸುವುದನ್ನು ಕಲಿಯೋಣ' ಎಂದು ಜೀವನದಲ್ಲಿ ಕಲಿತ ಪಾಠದ ಬಗ್ಗೆ ಹೇಳಿಕೊಂಡಿದ್ದಾರೆ.

ಅಮಲಾ ಪೌಲ್‌ ವಿಚ್ಛೇದನಕ್ಕೆ ನಟ ಧನುಷ್ ಕಾರಣ!

ಅಷ್ಟೇ ಅಲ್ಲದೇ 'ಈ ಸಂದರ್ಭದಲ್ಲಿ ಎಂಥದ್ದೇ ಸಂಕಷ್ಟ ಬಂದರೂ, ಅದನ್ನು ಧೈರ್ಯವಾಗಿ ಎದುರಿಸಲು ನಾನು ಸಿದ್ಧಳಾಗಿರುವೆ. ಅದರಲ್ಲೂ ಹಗಲಿರುಳು ಎಂದು ಲೆಕ್ಕಿಸದೇ ಕೆಲಸ ಮಾಡುವ ನಮ್ಮ ತಾಯಿಯನ್ನು ಮರೆಯುವುದು ಬೇಡ. ತನ್ನ ಇಡೀ ಜೀವನವನ್ನೇ ಗಂಡನಿಗೆ, ಮಕ್ಕಳಿಗೆ ಮೀಸಲಿಡುತ್ತಾಳೆ.  ಈ ಸಂದರ್ಭದಲ್ಲಾದರೂ ಅಕೆಯ ಜೊತೆ ನಿಂತು ಕತ್ತಲಿಂದ ಹೊರ ಬರಲು ಸಹಾಯ ಮಾಡೋಣ. ನಿನ್ನನ್ನು ನೀನು ಪ್ರೀತಿಸು ಎಂದು ಹೇಳೋಣ. ಅಪ್ಪನ ಸಾವಿನಿಂದ ಖಿನ್ನತೆಯಲ್ಲಿರುವ ನಾವು, ನಮ್ಮನ್ನು ನಾವು ಪ್ರೀತಿಸಿ ಆರೈಕೆ ಮಾಡಿಕೊಳ್ಳುವ ಮೂಲಕ ನಾವಿಬ್ಬರೂ ಫೀನಿಕ್ಸ್‌ನಂತೆ ಹಾರಲು ಸಾಧ್ಯವಾಯಿತು' ಎಂದು ದುಖಃವನ್ನು ಅಭಿಮಾನಿಗಳೊಂದಿಗೆ ತೋಡಿ ಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!