'ಫ್ಯಾಮಿಲಿ ಮ್ಯಾನ್' ನಿರ್ದೇಶಕರ ಹೊಸ ವೆಬ್ ಸೀರಿಸ್ ನಲ್ಲಿ ಸಮಂತಾಗೆ ಜೋಡಿಯಾದ ಸ್ಟಾರ್ ನಟ

Published : Mar 23, 2022, 05:30 PM IST
'ಫ್ಯಾಮಿಲಿ ಮ್ಯಾನ್' ನಿರ್ದೇಶಕರ ಹೊಸ ವೆಬ್ ಸೀರಿಸ್ ನಲ್ಲಿ ಸಮಂತಾಗೆ ಜೋಡಿಯಾದ ಸ್ಟಾರ್ ನಟ

ಸಾರಾಂಶ

ನಟಿ ಸಮಂತಾ ಮತ್ತೆ ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕರ ತಂಡ ಸೇರಿದ್ದಾರೆ. ಸಿಟಾಡೆಲ್ ವೆಬ್ ಸೀರಿಸ್ ನಲ್ಲಿ ಸಮಂತಾ ನಟಿಸುತ್ತಿದ್ದು ವರುಣ್ ದವನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ನಟಿ ಸಮಂತಾ(Samantha) ದಿ ಫ್ಯಾಮಿಲಿ ಮ್ಯಾನ್ 2 (The family man) ವೆಬ್ ಸೀರಿಸ್ ಬಳಿಕ ದೇಶದಾದ್ಯಂತ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಈ ಸೀರಿಸ್ ಸಮಂತಾ ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ವೆಬ್ ಸೀರಿಸ್ ಸೂಪರ್ ಹಿಟ್ ಆದ ಬಳಿಕ ಸಮಂತಾ ಬೇಡಿಕೆಯೂ ಹೆಚ್ಚಾಗಿದೆ. ಕೇವಲ ಸೌತ್ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ಸಮಂತಾ ಹವಾ ಸೃಷ್ಟಿಯಾಗಿದೆ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಸಮಂತಾ ಬಾಲಿವುಡ್ ಕಡೆ ಮುಖ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸಮಂತಾ ಬಾಲಿವುಡ್ ಸಿನಿಮಾ ಯಾವುದು ಎನ್ನುವ ಚರ್ಚೆ ಪ್ರಾರಂಭವಾಗಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಸಮಂತಾ ಮತ್ತೆ ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕರ ತಂಡ ಸೇರಿದ್ದಾರೆ. ಹೌದು, ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರ ಹೊಸ ವೆಬ್ ಸರಣಿಯಲ್ಲಿ ಸಮಂತಾ ನಟಿಸುತ್ತಿದ್ದಾರೆ. ಅಂದಹಾಗೆ ಈ ಸರಣಿಯಲ್ಲಿ ಬಾಲಿವುಡ್ ಸ್ಟಾರ್ ನಟ ವರುಣ್ ದವನ್(Varun Dhawan) ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ಮೊದಲ ಬಾರಿಗೆ ರಾಜ್ ಮತ್ತು ಡಿಕೆ ಜೊತೆ ಕೆಲಸ ಮಾಡುತ್ತಿದ್ದಾರೆ.

ಸಮಂತಾ ಸಿನಿಮಾಗಾಗಿ ಹಾಲಿವುಡ್ ನಿಂದ ಬಂದ ಸ್ಟಂಟ್ ಮಾಸ್ಟರ್

ಕೆಲವು ದಿನಗಳ ಹಿಂದೆ ಸಮಂತಾ ಮತ್ತು ವರುಣ್ ದವನ್ ಇಬ್ಬರು ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಒಟ್ಟಿಗೆ ಮುಂಬೈನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದ ಸಮಂತಾ ಮತ್ತು ವರುಣ್ ಟ್ರೋಲ್ ಆಗಿದ್ದರು. ಸಮಂತಾ ಅವರಿಗೆ ಹೆದರಿಕೆ ಆಗುವಂತೆ ಮಾಡಬೇಡಿ ಎಂದು ವರುಣ್ ಛಾಯಾಗ್ರಾಹಕರಲ್ಲಿ ಕೇಳಿಕೊಂಡಿದ್ದರು. ಬಳಿಕ ಸಮಂತಾ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಕಾರಿನಲ್ಲಿ ಕೂರಿಸಿ ಬಂದರು. ವರುಣ್ ಈ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

ಇಬ್ಬರು ಒಟ್ಟಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಬಗ್ಗೆ ಅನೇಕ ಸುದ್ದಿಗಳು ಹರಿದಾಡಿತ್ತು. ಇದೀಗ ಎಲ್ಲಾ ವದಂತಿಗೆ ಬ್ರೇಕ್ ಬಿದ್ದಿದೆ. ಅಂದಹಾಗೆ ವೆಬ್ ಸರಣಿಗೆ ಸಿಟಾಡೆಲ್ ಎಂದು ಟೈಟಲ್ ಇಡಲಾಗಿದೆ. ಸಿಟಾಡೆಲ್ ಚಿತ್ರೀಕರಣ ಜುಲೈನಿಂದ ಪ್ರಾರಂಭವಾಗಲಿದೆ. ಮುಂಬೈನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಬಳಿಕ ಕೆಲವು ವಿದೇಶಗಳಲ್ಲಿಯೂ ಚಿತ್ರೀಕರಣ ನಡೆಯಲಿದೆ. ಯುರೋಪ್ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ಆಂಗ್ಲ ಮಾಧ್ಯಮಕ್ಕೆ ತಿಳಿಸಿವೆ.

ಮಿಡಲ್ ಫಿಂಗರ್‌ ಪೋಸ್ಟ್‌, ಟ್ರೋಲಿಗರ ಬಾಯಿ ಮುಚ್ಚಿಸಿದ ನಟಿ ಸಮಂತಾ!

ಅಂದಹಾಗೆ ಈ ವೆಬ್ ಸರಣಿಯಲ್ಲಿ ವರುಣ್ ದವನ್ ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಮಾರ್ಷಲ್ ಆರ್ಟ್ಸ್ ಸಹ ಕಲಿಯುತ್ತಿದ್ದಾರಂತೆ. ಈಗಾಗಲೇ ತಯಾರಿ ಪ್ರಾರಂಭ ಮಾಡಿದ್ದು, ಚಿತ್ರೀಕರಣ ಪ್ರಾರಂಭಕ್ಕೂ ಮೊದಲು ಮಾರ್ಷಲ್ ಆರ್ಟ್ಸ್ ಕಲಿಯಬೇಕೆಕಾಗಿದೆಯಂತೆ. ಅಂದಹಾಗೆ ರಾಜ್ ಮತ್ತು ಡಿಕೆ ಸದ್ಯ ದುಲ್ಕರ್ ಸಲ್ಮಾನ್, ರಾಜ್ ಕುಮಾರ್ ರಾವ್, ಆದರ್ಶ್ ಗೌರವ್ ಅವರ ಗನ್ಸ್ ಆಂಡ್ ಗುಲಾಬ್ಸ್ ಚಿತ್ರೀಕರಣದಲ್ಲಿದ್ದಾರೆ. ಇದು ಮುಗಿದ ಬಳಿಕ ಸಿಟಾಡೆಲ್ ಪ್ರಾರಂಭ ಮಾಡಲಿದ್ದಾರೆ. ಇತ್ತ ನಟ ವರುಣ್ ದವನ್ ಸಹ ನಿತೀಶ್ ತಿವಾರಿ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲರ ಕಮಿಟ್ಮೆಂಟ್ ಮುಗಿದ ಬಳಿಕ ಸಿಟಾಡೆಲ್ ಪ್ರಾರಂಭ ಮಾಡಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?