
ಮುಂಬೈ(ಆ. 20) ಕೊರೋನಾ ಲಾಕ್ ಡೌನ್ ಸಮಯ ಸಾವಿರಾರು ವಲಸೆ ಕಾರ್ಮಿಕರನ್ನು ಸುಕ್ಷಿತವಾಗಿ ಮನೆಗೆ ತಲುಪಿಸಿದ್ದ ನಟ ಸೋನು ಸೂದ್ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ,
ಯುವತಿಯೊಬ್ಬಳ ಬಾಳಿಗೆ ಸೋನು ಸೂದ್ ಬೆಳಕಾಗಿದ್ದಾರೆ. ಇತ್ತೀಚೆಗೆ ಛತ್ತೀಸ್‌ಗಡದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ನೂರಾರು ಜನರು ಮನೆ ಕಳೆದುಕೊಂಡಿದ್ದರು. ಬುಟಕಟ್ಟು ಜನಾಂಗದ ಯುವತಿ ಅಂಜಲಿ ಕುದಿಯಮ್ ಮನೆಯನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ ಪ್ರವಾಹದಲ್ಲಿ ತನ್ನ ಪುಸ್ತಕವನ್ನು ಕಳೆದುಕೊಂಡ ಪರಿಣಾಮ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಯುವತಿಯ ನೋವಿಗೆ ಸ್ಪಂದಿಸಿದ ಸೋನು ಸೂದ್ ಭರವಸೆ ತುಂಬುವ ಮಾತನಾಡಿದ್ದು ನಿನ್ನ ಪುಸ್ತಕಗಳೆಲ್ಲ ವಾಪಸು ಸಿಗಲಿದೆ ಎಂದು ತಿಳಿಸಿದ್ದಾರೆ. ಸಹೋದರಿ ಮೊದಲು ಕಣ್ಣೀರು ಒರೆಸಿಕೋ ಸೋದರಿ. ನಿನಗೆ ಪುಸ್ತಕವೂ, ಮನೆಯೂ ಹೊಸದು ಸಿಗುತ್ತದೆ’ ಎಂದು ಹೇಳಿದ್ದು ಸಹಾಯಕ್ಕೆ ಮುಂದಾಗಿದ್ದಾರೆ.
ಹೆತ್ತವರ ಕಳೆದುಕೊಂಡ ಮೂರು ಮಕ್ಕಳ ದತ್ತು ಪಡೆದ ಸೋನು ಸೂದ್
ಸ್ಥಳೀಯ ಪತ್ರಕರ್ತರೊಬ್ಬರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಾಲಕಿಯ ತಂದೆ ಐದು ಎಕರೆ ಜಮೀನು ಹೊಂದಿದ್ದರೂ ಮಳೆ ಕಾರಣಕ್ಕೆ ಬೆಳೆ ಎಲ್ಲ ನಷ್ಟವಾಗಿದೆ.
ನರ್ಸಿಂಗ್ ಪ್ರವೇಶ ಪರೀಕ್ಷೆಗೆ ಬೇಕಾಗಿ ಯುವತಿಗೆ ಅಗತ್ಯವಿರುವ ಪುಸ್ತಕವನ್ನು ಜಿಲ್ಲಾಡಳಿತ ನೀಡುತ್ತೇನೆ ಎಂದು ತಿಳಿಸಿದೆ. ಜಿಲ್ಲಾಧಿಕಾರಿ ರಿತೇಶ್ ಅಗರ್‌ವಾಲ್ ಮತ್ತು ಸ್ಥಳೀಯ ಶಾಸಕ ವಿಕ್ರಂ ಮಾಂಡವಿ ಯುವತಿಯ ಕುಟುಂಬಕ್ಕೆ 1.1 ಲಕ್ಷ ರೂ. ಪರಿಹಾರವನ್ನು ವಿತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.