
ಮುಂಬೈ(ಜು.17): ಇತ್ತೀಚೆಗಷ್ಟೇ ಮುಂಬೈನ ಬಾಂದ್ರಾದಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ನಟಿ ರಿಯಾ ಚಕ್ರವರ್ತಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಒತ್ತಾಯಿಸಿದ್ದಾರೆ.
ತನ್ನನ್ನು ಸುಶಾಂತ್‌ರ ಪ್ರಿಯತಮೆ ಎಂದು ಹೇಳಿಕೊಂಡಿರುವ ರಿಯಾ ‘ಸುಶಾಂತ್ ಆತ್ಮಹತ್ಯೆ ಸಂಭವಿಸಿ ತಿಂಗಳು ಕಳೆಯಿತು. ಅವರನ್ನು ಆತ್ಮಹತ್ಯೆಗೆ ದೂಡಿದ ವಿಚಾರ ಏನೆಂದು ತಿಳಿಯಬೇಕು ಎಂಬುದು ನನ್ನ ಉದ್ದೇಶ’ ಎಂದು ರಿಯಾ ಸುಶಾಂತ್ ಜೊತೆಗಿನ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಇದೇ ವೇಳೆ ಇದಕ್ಕೂ ಮುನ್ನ ಸುಶಾಂತ್ ಸಾವಿಗೆ ನನ್ನನ್ನೇ ಹೊಣೆಯಾಗಿಸುತ್ತಿರುವ ಕೆಲ ದುಷ್ಕರ್ಮಿಗಳು ತಮಗೆ ಆನ್‌ಲೈನ್ ಹತ್ಯೆ ಮತ್ತು ಅತ್ಯಾಚಾರದ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿ ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ತಿಂಗಳ ನಂತರ ಮೌನ ಮುರಿದ ಸುಶಾಂತ್ ಗೆಳತಿ 'ಈ ಪ್ರೀತಿ ಶಾಶ್ವತ'
ರಿಯಾ ಒಂದು ಸುಶಾಂತ್ ಸಾವಿನ ಒಂದು ತಿಂಗಳ ಬಳಿಕ ಈ ಕುರಿತಂತೆ ಕೆಲದಿನಗಳ ಹಿಂದಷ್ಟೇ ತುಟಿಬಿಚ್ಚಿದ್ದರು. ಶಾಂತಿಯಿಂದ ನೆಲೆಸಿರು ಸುಶಿ, ನಿನ್ನ ಕಳೆದುಕೊಂಡು 30 ದಿನಗಳು ಆಗಿರಬಹುದು, ಆದರೆ ಇಡೀ ಜೀವನ ನಿನ್ನನ್ನೇ ಪ್ರೀತಿ ಮಾಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ರಿಯಾ ಸುದೀರ್ಘ ಪತ್ರವೊಂದನ್ನು ಬರೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.