Ajit Kumar: ಯಾರಾದರೂ ಇಷ್ಟವಾದರೆ ನಟ ಅಜಿತ್‌ ಕೊಡೋ ದುಬಾರಿ ಗಿಫ್ಟ್‌ ಏನು?

Published : May 28, 2025, 04:23 PM ISTUpdated : May 28, 2025, 04:25 PM IST
actor ajith

ಸಾರಾಂಶ

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್, ಯಾರನ್ನಾದರೂ ತುಂಬಾ ಇಷ್ಟಪಟ್ಟರೆ ಅವರಿಗೆ ದುಬಾರಿ ಗಿಫ್ಟ್‌ಗಳನ್ನು ಕೊಡುತ್ತಾರಂತೆ.

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್‌ ಅವರು ನಟನೆಯ ಜೊತೆಗೆ ಕಾರ್ ರೇಸ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ವರ್ಷ ಅಜಿತ್ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾಗಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿವೆ. ಅದರಲ್ಲಿ 'ಗುಡ್, ಬ್ಯಾಡ್ & ಅಗ್ಲಿ' ಸಿನಿಮಾವು 200 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ.

ಇದಲ್ಲದೆ, ಈ ವರ್ಷ ನಟ ಅಜಿತ್ ಕಾರ್ ರೇಸ್‌ನಲ್ಲಿ ಹೆಚ್ಚು ಗಮನ ಹರಿಸಿದ್ದಾರೆ. ಮೊದಲಿಗೆ ದುಬೈನಲ್ಲಿ ನಡೆದ ರೇಸ್‌ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಗಳಿಸಿದರು. ನಂತರ ಯುರೋಪ್‌ನಲ್ಲಿ ನಡೆದ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆದರು. ಇದರ ಜೊತೆಗೆ, ಈ ವರ್ಷ ಅಜಿತ್ ಕುಮಾರ್‌ಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದ್ದು, ಕಳೆದ ತಿಂಗಳು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.

ಅಜಿತ್ ಬಗ್ಗೆ SJ ಸೂರ್ಯ ಹೇಳಿದ್ದೇನು?

ಅಜಿತ್‌ಗೆ ಈ ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಈ ನಡುವೆ, ನಿರ್ದೇಶಕ ಎಸ್.ಜೆ.ಸೂರ್ಯ ಅವರು ಅಜಿತ್ ಬಗ್ಗೆ ಹೇಳಿದ್ದ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಜಿತ್ ಯಾರನ್ನಾದರೂ ಇಷ್ಟಪಟ್ಟರೆ ಅವರಿಗೆ ದುಬಾರಿ ಗಿಫ್ಟ್‌ಗಳನ್ನು ಕೊಡುತ್ತಾರೆ ಎಂದು SJ ಸೂರ್ಯ ಹೇಳಿದ್ದಾರೆ.

ಸಿನಿಮಾವೊಂದರ ಕಥೆ ಹೇಳುವಾಗ ಅಜಿತ್‌ಗೆ ಇಷ್ಟವಾಗಿ, ಒಂದು ಬೈಕ್ ಅನ್ನು ಗಿಫ್ಟ್ ಆಗಿ ಕೊಟ್ಟರು. ಅದೇ ರೀತಿ ಇನ್ನೊಂದು ಸಿನಿಮಾದ ಮೊದಲ ಪ್ರತಿ ನೋಡಿದ ನಂತರ ಕಾರ್ ಉಡುಗೊರೆ ಕೊಟ್ಟರು. ಹೀಗೆ ಯಾರಾದರೂ ಇಷ್ಟವಾದರೆ ಎಷ್ಟೇ ದುಬಾರಿಯಾಗಿದ್ದರೂ ತಕ್ಷಣ ಖರೀದಿಸಿ ಕೊಡುತ್ತಾರೆ ಎಂದು ಎಸ್.ಜೆ.ಸೂರ್ಯ ಹೇಳಿದ್ದಾರೆ.

'ವಾಲಿ' ಎಸ್.ಜೆ.ಸೂರ್ಯ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದಲ್ಲಿ ಅಜಿತ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಒಂದು ಹೀರೋ, ಇನ್ನೊಂದು ವಿಲನ್. ಅಜಿತ್‌ಗೆ ಸಿಮ್ರನ್ ಮತ್ತು ಜ್ಯೋತಿಕಾ ಜೋಡಿಯಾಗಿದ್ದರು. ಅಜಿತ್ ಅವರ ವೃತ್ತಿಜೀವನದಲ್ಲಿ 'ವಾಲಿ' ಪ್ರಮುಖ ಚಿತ್ರವಾಗಿದೆ.

ಅಷ್ಟಾಗಿ ಕಾಂಟ್ರವರ್ಸಿ ಮಾಡಿಕೊಳ್ಳದ ನಟ ಅಜಿತ್‌ ಅವರು ನಟಿ ಶಾಲಿನಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಗೆ ಮಗನಿದ್ದಾನೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌