
ರಜನಿಕಾಂತ್ ನಟನೆಯ ಕೂಲಿ ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಲ್ಲಿದ್ದಾರೆ. ಬಹುತೇಕ ಹಿಟ್ ಸಿನಿಮಾಗಳನ್ನು ನೀಡಿರೋ ಲೋಕೇಶ್ ಕನಕರಾಜ್ ಅವರು ಈ ಚಿತ್ರದ ನಿರ್ದೇಶಕರು ಎನ್ನೋದು ಇನ್ನೊಂದು ಖುಷಿಯ ವಿಷಯ. ಆದರೆ ಈ ಸಿನಿಮಾ ನೋಡಲು ಟಿಕೆಟ್ ದರ ಬಲು ಹೆಚ್ಚಾಗಿದೆ. ಟಿಕೆಟ್ ರೇಟ್ ಹೆಚ್ಚಿಸಿದಕ್ಕೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಅಸಮಾಧಾನ ಹೊರಹಾಕಿದ್ದಾರೆ.
“ಸಿನಿಮಾ ಟಿಕೆಟ್ ರೇಟ್ ವಿಚಾರ ರಾಜ್ಯ ಸರ್ಕಾರದ ಪ್ರಸ್ಥವನೆಯಲಿದೆ. ಮಲ್ಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ರೇಟ್ ಹೆಚ್ಚಿಸಿದ್ದಾರೆ. ಮಲ್ಲ್ಟಿಫ್ಲೆಕ್ ಅವರು ಚಿತ್ರರಂಗದ ಅಡಿಯಲ್ಲಿ ಇಲ್ಲ. ಅವರಿಗೆ ಸರ್ಕಾರ ಅಧಿಕೃತ ಆದೇಶ ಮಾಡಿದ್ರೆ ಮಾತ್ರ ಟಿಕೆಟ್ ರೇಟ್ ಕಡಿಮೆ ಮಾಡುತ್ತಾರೆ. ಯಾರೇ ಟಿಕೆಟ್ ರೇಟ್ ಹೆಚ್ಚಿಸಿದರೂ ಕೂಡ ಅವರ ವಿರುದ್ಧ ಕ್ರಮ ತೆಗೆದುಕೊಳುತ್ತೇವೆ. ಚಿತ್ರರಂಗದ ಸಂಸ್ಥೆಗಳು ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕೆಲವು ಸಿಂಗಲ್ ಥಿಯೇಟರ್ ಮಾಲೀಕರು ಹಾಗೂ ಮಲ್ಲ್ಟಿಫ್ಲೆಕ್ಸ್ ಸಿಬ್ಬಂದಿಗಳು ಸರ್ಕಾರದ ಏಕಾದರ ಟಿಕೆಟ್ ಆದೇಶಕ್ಕೆ ಬೇಸರಗೊಂಡಿದ್ದಾರೆ. ಅವರೆಲ್ಲರೂ ಸರ್ಕಾರಕ್ಕೆ 200 ರೂಪಾಯಿ ಮಾಡ್ಬೇಡಿ ಅಂತ ಮನವಿ ಮಾಡಿದ್ದಾರೆ” ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.
“ಚಿತ್ರರಂಗದ ಎಲ್ಲ ಸಂಸ್ಥೆಗಳು ಸರ್ಕಾರಕ್ಕೆ ನೀವು 200 ರೂಪಾಯಿ ಟಿಕೆಟ್ ಮಾಡಲೇಬೇಕು ಅಂತ ಕೇಳಿದ್ದೇವೆ. ಮುಖ್ಯಮಂತ್ರಿಗಳು ಗೃಹ ಇಲಾಖೆಗೆ ಮೌಕಿಕ ಆದೇಶ ಕೊಟ್ಟಿದ್ದಾರೆ. 200ರೂಪಾಯಿ ಟಿಕೆಟ್ ದರ ನಿಗದಿ ಜಾರಿ ಯಾವಾಗ ಬೇಕಾದ್ರು ಆಗುತ್ತದೆ. ಮಲ್ಲ್ಟಿಫ್ಲೆಕ್ಸ್‌ನವರು ಸರ್ಕಾರಕ್ಕೆ ಬರೆದುಕೊಟ್ಟ ಮುಚ್ಚಳಿಕೆ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಕೆಲ ಸಿಂಗಲ್ ಥಿಯೇಟರ್ ಮಾಲೀಕರು ಕೂಡ ಮಲ್ಲ್ಟಿಫ್ಲೆಕ್ಸ್ ಜೊತೆ ಸೇರಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಕೂಲಿ ಸಿನಿಮಾ ಬಿಡುಗಡೆ ಮೊದಲೇ ಸರ್ಕಾರ ಏಕದರ ಟಿಕೆಟ್ ಜಾರಿ ಮಾಡಿದ್ರು ಆಶ್ಚರ್ಯ ಇಲ್ಲ” ಎಂದಿದ್ದಾರೆ.
“ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿರೋದ್ರಿಂದ ಮುಖ್ಯಮಂತ್ರಿಗಳು ಬೇಗ ಅದೇಷ ಹೋರಾಡಿಸುತಾರೆ ಅನ್ನೋ ಭರವಸೆ ಇದೆ. ಸರಕಾರ ಆದೇಶ ಬಂದ ಕೂಡಲೇ ದರ ಹೆಚ್ಚಿಸಿದವರ ವಿರುದ್ದ ಕ್ರಮ ತೆಗೆದುಕೊಳುತ್ತೇವೆ” ಎಂದಿದ್ದಾರೆ.
ರಜನಿಕಾಂತ್ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಒಂದೇ ಅಲ್ಲದೆ ಆಂಧ್ರಪ್ರದೇಶ, ಕರ್ನಾಟಕದಲ್ಲಿಯೂ ಅವರಿಗೆ ಫ್ಯಾನ್ಸ್ ಇದ್ದಾರೆ. ಬೆಂಗಳೂರಿನಲ್ಲಿ ಕೂಲಿ ಸಿನಿಮಾವನ್ನು ಫಸ್ಟ್ ಡೇ, ಫಸ್ಟ್ ಶೋ ನೋಡಬೇಕು ಎಂದು ಅನೇಕರು ಕಾಯುತ್ತಿದ್ದಾರೆ. ಹೀಗಾಗಿ ದರ ಜಾಸ್ತಿ ಮಾಡಲಾಗಿದೆ. ಸ್ಟಾರ್ ಸಿನಿಮಾಗಳಿಗೆ ಮನಸ್ಸಿಗೆ ಬಂದಂತೆ ರೇಟ್ ಹೆಚ್ಚು ಮಾಡೋದುಂಟು. ಎರಡು ಸಾವಿರ ರೂಪಾಯಿ ಕೊಟ್ಟು ಸಿನಿಮಾ ನೋಡುವವರು ಇದ್ದಾರೆ. ಬೆಂಗಳೂರಿನಲ್ಲಿ 63 ಸಿಂಗಲ್ ಸ್ಕ್ರೀನ್, ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಒಟ್ಟಾರೆಯಾಗಿ ಈ ಸಿನಿಮಾದ ಟಿಕೆಟ್ ದರ ಗರಿಷ್ಠ 2000 ರೂಪಾಯಿ ತಲುಪಿದೆ ಎನ್ನಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹುಲು ಅವರ ಥಿಯೇಟರ್‌ನಲ್ಲಿ ಫಸ್ಟ್ ಶೋಗೆ 800 ರೂಪಾಯಿ ನಿಗದಿಪಡಿಸಲಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ಎಂಟು ಥಿಯೇಟರ್‌ನಲ್ಲಿ ಡಬ್ ಆದ ಸಿನಿಮಾಗಳು ರಿಲೀಸ್ ಆಗಲಿದ್ದು, ಉಳಿದ ಕಡೆ ತಮಿಳಿನಲ್ಲಿ ಚಿತ್ರ ರಿಲೀಸ್ ಆಗಲಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ದಿನಕ್ಕೆ 10-16 ಶೋ ನೀಡಲಾಗ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.