ಮತ್ತೆ ಮದುವೆ ಆಗ್ತಿದ್ದಾರೆ ನಾಗಚೈತನ್ಯ, ಗುಟ್ಟಾಗಿ ನಡೆಯುತ್ತಿದೆ ನಿಶ್ಚಿತಾರ್ಥ!

By Roopa Hegde  |  First Published Aug 8, 2024, 11:43 AM IST

ಸಮಂತಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್. ನಟ ನಾಗಚೈತನ್ಯ ಎರಡನೇ ಬಾರಿ ಮದುವೆ ಆಗ್ತಿದ್ದಾರೆ. ಇಂದು ನಿಶ್ಚಿತಾರ್ಥ ನಡೆಯಲಿದ್ದು, ಹೊಸ ಜೋಡಿ ಫೋಟೋ ನೋಡಲು ನಾಗಚೈತನ್ಯ ಅಭಿಮಾನಿಗಳು ಕಾತರರಾಗಿದ್ದಾರೆ.
 


ನಟಿ ಸಮಂತಾ ರುಥ್‌ಪ್ರಭು ಜೊತೆ ವಿಚ್ಛೇದನ (Divorcing to Samantha Ruthprabhu) ಪಡೆದು ಮೂರು ವರ್ಷದ ನಂತ್ರ ನಟ ನಾಗಚೈತನ್ಯ ಮತ್ತೆ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಅವರು ಎರಡನೇ ಮದುವೆ ಆಗ್ತಿದ್ದಾರೆ ಎಂಬ ಗುಸು ಗುಸು ಇರುವಾಗ್ಲೇ ನಾಗಚೈತನ್ಯ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇಂದೇ ನಾಗಚೈತನ್ಯ ನಿಶ್ಚಿತಾರ್ಥ ನಡೆಯಲಿದೆ ಎಂಬ ದೊಡ್ಡ ಸುದ್ದಿ ಹರಡಿದೆ.

ಸಮಂತಾ (Samantha) ಜೊತೆ ಡಿವೋರ್ಸ್ ಪಡೆದ್ಮೇಲೆ ನಾಗಚೈತನ ಹಾಗೂ ನಟಿ ಶೋಭಿತಾ (Shobhita) ಧೂಳಿಪಾಲ್ ಮಧ್ಯೆ ಏನೋ ನಡೀತಾ ಇದೆ ಎಂಬ ಸುದ್ದಿಯಾಗಿತ್ತು. ಅವರಿಬ್ಬರು ಕೈ ಕೈ ಹಿಡಿದು ಸುತ್ತಾಡ್ತಿದ್ದಾರೆ, ನಾಗಚೈತನ್ಯ (Nagachaitanya) ಗೆ ಹೊಸ ಗರ್ಲ್ ಫ್ರೆಂಡ್ ಸಿಕ್ಕಿದಾರೆ ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು. ಈಗ ನಾಗಚೈತನ್ಯ ಅದನ್ನು ನಿಜ ಮಾಡ್ತಿದ್ದಾರೆ. ಇಂದು ಅಧಿಕೃತವಾಗಿ ತನ್ನ ಪ್ರೇಯಸಿಗೆ ಉಂಗುರತೊಡಿಸಿ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ.

Tap to resize

Latest Videos

undefined

ನಾಗಚೈತ್ಯ ತಂದೆ ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿಯಾಗ್ಲಿ ಇಲ್ಲ ನಾಗಚೈತನ್ಯ ಆಗ್ಲಿ ಈ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ನಟಿ ಶೋಭಿತಾ ಧೂಳಿಪಾಲ್  ಕಡೆಯಿಂದಲೂ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಆದ್ರೆ ಇಂದು ನಾಗಚೈತನ್ಯ ಮನೆಯಲ್ಲೇ ನಿಶ್ಚಿತಾರ್ಥ ನಡೆಯಲಿದೆ ಎಂಬ ವರದಿ ಹರಡಿದೆ. ನಾಗಚೈತನ್ಯ ಇಲ್ಲವೆ ನಾಗಾರ್ಜುನ್ ಅಕ್ಕಿನೇನಿ ಈ ನಿಶ್ಚಿತಾರ್ಥದ ಬಗ್ಗೆ ಅಧಿಕೃತ ಹೇಳಿಕೆ ನೀಡುವ ಸಾಧ್ಯತೆ ಇದೆ. ಶುಕ್ರವಾರ ನಿಶ್ಚಿತಾರ್ಥದ ಫೋಟೋ ಹೊರಬರಲಿದೆ ಎಂಬ ನಿರೀಕ್ಷೆ ಇದೆ. ಹಾಗೆ ಮದುವೆ ದಿನಾಂಕವನ್ನು ಜೋಡಿ ಅನೌನ್ಸ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ್ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಳ್ತಿದ್ದರೂ ಈ ಸುದ್ದಿ ಮಾಧ್ಯಮಗಳ ಕೈಸೇರಿದೆ. 

ಸಮಂತಾ ಜೊತೆ ವಿಚ್ಛೇದನ : ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಒಂದಿಷ್ಟು ವರ್ಷ ಡೇಟ್ ಮಾಡಿದ ಜೋಡಿ 2017ರಲ್ಲಿ ಮದುವೆಯಾಗಿತ್ತು. ಆದ್ರೆ ಮದುವೆ ತುಂಬಾ ದಿನ ಉಳಿಯಲಿಲ್ಲ. 2022ರಲ್ಲಿ ಇಬ್ಬರೂ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು. 2010 ರ ಯೇ ಮಾಯಾ ಚೇಸಾವೆ ಸಿನಿಮಾದಲ್ಲಿ ನಾಗಚೈತನ್ಯ ಹಾಗೂ ಸಮಂತಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಸಮಂತಾ ಚೊಚ್ಚಲ ಚಿತ್ರವಾಗಿತ್ತು.  ಸಮಂತಾರಿಂದ ದೂರವಾಗ್ತಿದ್ದಂತೆ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ್ ಡೇಟಿಂಗ್ ಸುದ್ದಿ ಹೊರಬಿದ್ದಿತ್ತು. ಇಬ್ಬರ ಸುತ್ತಾಟದ ವಿಡಿಯೋ, ಫೋಟೋಗಳು ವೈರಲ್ ಆಗಲು ಶುರುವಾಗಿದ್ದವು.

ಇಬ್ಬರು ಜೂನ್ ನಲ್ಲಿ ಯುರೋಪ್ ಟ್ರಿಪ್ (Europe Trip) ಹೋಗಿ ಬಂದಿದ್ದಾರೆ. ಅದ್ರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವೈಲ್ಡ್ ಲೈಫ್ ಎಂಜಾಯ್ ಮಾಡ್ತಿದ್ದ ಇಬ್ಬರ ಫೋಟೋ ಕೂಡ ಹರಿದಾಡಿತ್ತು.  ಒಟ್ಟಿಗೆ ರಜೆ ಮಜಾ ಅನುಭವಿಸಿದ್ದ ಜೋಡಿ ನೋಡಿ, ಇಬ್ಬರ ಮಧ್ಯೆ ಏನೋ ಇದೆ, ಶೀಘ್ರವೇ ನಾಗಚೈತನ್ಯ ಮದುವೆ ಆಗ್ತಾರೆ ಅಂತ ಅಭಿಮಾನಿಗಳು ಊಹಿಸಿದ್ದರು. ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ್ ಪ್ರೀತಿಯನ್ನು ನಾಗಾರ್ಜುನ್ ಕೂಡ ಒಪ್ಪಿಕೊಂಡಿದ್ದಾರೆ. ಅವರೇ ಮುಂದೆ ನಿಂತು ಮದುವೆ ಮಾಡಿಸ್ತಿದ್ದಾರೆ. ನಾಳೆ ಅವರೇ ಇದ್ರ ಬಗ್ಗೆ ಅಧಿಕೃತ ಮಾಹಿತಿ ನೀಡ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಇನ್ನು ನಾಗಚೈತನ್ಯ ಡೇಟಿಂಗ್ (Nagarujana Dating) ಬಗ್ಗೆ ಪ್ರಶ್ನೆ ಕೇಳಿದಾಗ ಶೋಭಿತಾ ಧೂಳಿಪಾಲ್ ಹಾರಿಕೆ ಉತ್ತರ ನೀಡಿದ್ದರು. ನಾನು ಯಾವಾಗ್ಲೂ ಪ್ರೀತಿಯಲ್ಲಿ ಇರ್ತೇನೆ. ಪ್ರೀತಿ ಇಂಧನದಂತೆ. ಅದು ಅವಶ್ಯಕ ಹಾಗೂ ಐಷಾರಾಮಿ ಎಂದಿದ್ದರು.  ಇವರಿಬ್ಬರ ನಿಶ್ಚಿತಾರ್ಥದ ಸುದ್ದಿ ಬರ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಶುರುವಾಗಿದೆ. ಕೆಲವರು ನಾಗಚೈತನ್ಯ ಮತ್ತು ಶೋಭಿತಾ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಸಮಂತಾ ಅಭಿಮಾನಿಗಳಿಗೆ ಇದ್ಯಾಕೋ ಸರಿ ಕಾಣ್ತಿಲ್ಲ. 

click me!