ಭೀಕರ ರಸ್ತೆ ಅಪಘಾತದಲ್ಲಿ ಮಲಯಾಳಂನ ಖ್ಯಾತ ಕಿರುತೆರೆ ಹಾಗೂ ಹಾಸ್ಯ ನಟ ಕೊಲ್ಲಂ ಸುಧಿ ನಿಧನರಾಗಿದ್ದಾರೆ.
ಮಲಯಾಳಂನ ಖ್ಯಾತ ಹಾಸ್ಯ ನಟ ಹಾಗೂ ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ನಿಧನರಾಗಿದ್ದಾರೆ. 39 ವರ್ಷದ ನಟ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಂದು (ಜೂನ್ 5) ಬೆಳಗ್ಗೆ ಈ ಅಪಘಾತ ನಡೆದಿದೆ. ಕೊಲ್ಲಂ ಸುಧಿ ಚಲಾಯಿಸುತ್ತಿದ್ದ ಕಾರು ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಕೇರಳದ ಕೈಪಮಂಗಲಂನಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿದ್ದ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕೊಲ್ಲಂ ಸುಧಿ ಸಾವಿಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಕಾಲಿಕ ಮರಣವು ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಅತೀವ ದುಃಖ ತಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಲಾಗುತ್ತಿದೆ.
ಕೊಲ್ಲಂ ಸುಧಿ ವಟಕರಾದಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸ್ ಆಗುತ್ತಿದ್ದಾ ಈ ಘಟನೆ ಸಂಭವಿಸಿದೆ. ಬೆಳ್ಳಂಬೆಳಗ್ಗೆ ನಡೆದ ಅಪಘಡದಲ್ಲಿ ಕೊಲ್ಲಂ ನಿಧಿ ಸ್ಥಳದಲ್ಲೇ ಕೊನೆಯುಸಿರೆಳಿದ್ದಾರೆ. ಕಾರು ಸರಕು ಸಾಗಣೆ ಟ್ರಕ್ಗೆ ಡಿಕ್ಕಿ ಹೊಡೆದಿದೆ, ಟ್ರಕ್ ಗುದ್ದಿದ ರಭಸಕ್ಕೆ ಕೊಲ್ಲಂ ಸುಧಿ ಕಾರು ನಜ್ಜುಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡ ಕೊಲ್ಲಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಲೆಗೆ ಬಲವಾದ ಏಟು ಬಿದ್ದ ಕಾರಣ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಕಾರಿನಲ್ಲಿದ್ದ ಮೂವರ ಸ್ಥತಿ ಗಂಭೀರವಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಅಂದಹಾಗೆ ಕೊಲ್ಲಂ ಸುಧಿ 2015ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಕಾಂತರಿ ಸಿನಿಮಾದಲ್ಲಿ ಮೊದಲ ಬಾರಿಗೆ ಮಿಂಚಿದರು. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಹೆಚ್ಚು ಖ್ಯಾತಿಗಳಿಸಿದ್ದರು. ಮಿಮಿಕ್ರಿ ಮತ್ತು ಹಾಸ್ಯ ಪಾತ್ರಗಳ ಮೂಲಕ ಕೇರಳ ಪ್ರೇಕ್ಷಕರ ಮನೆಮಾತಾಗಿದ್ದರು. 'ಕಟ್ಟಪ್ಪನಾಯಿಲೆ ರಿತ್ವಿಕ್ ರೋಷನ್, ಕುಟ್ಟನಾಡನ್ ಮಾರ್ಪ್ಪಪ್ಪ, ಕೇಸು ಈ ವೀಡಿಂತೆ ನಾಧನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.