
ಸದ್ಯ ಸೈಯಾರಾ ಸಿನಿಮಾ ( Saiyaara Movie ) ಭಾರೀ ಸೌಂಡ್ ಮಾಡ್ತಿದೆ. ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದ್ದು, ವ್ಯಕ್ತಿಯೋರ್ವರು ಐವಿ ಡ್ರಿಪ್ ಹಾಕಿಸಿಕೊಂಡು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿರೋ ವಿಡಿಯೋ ವೈರಲ್ ಆಗ್ತಿದೆ.
ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಜೊತೆಗೆ ಈ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದಾನೆ. ಅಲ್ಲಿ ಸಿನಿಮಾ ನೋಡಿ ತುಂಬ ಭಾವುಕನಾಗಿದ್ದಾನೆ. ಆ ಬಳಿಕ ಈ ಡ್ರಿಪ್ ಸಮೇತ ರಸ್ತೆಯಲ್ಲಿ ತಿರುಗಾಡಿದ್ದು, ಈ ವಿಡಿಯೋ ನೋಡಿ ಅನೇಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಕಥೆ ಏನು?
ಕೃಷ್ ಕಪೂರ್ (ಅಹಾನ್ ಪಾಂಡೇ) ಸಂಗೀತದ ಮೂಲಕ ಹೆಸರು ಮಾಡೋ ಈ ಹುಡುಗನಿಗೆ ಕೋಪ ಜಾಸ್ತಿ. ವಾಣಿ ಬಾತ್ರಾ (ಅನೀತ್ ಪಡ್ಡಾ) ಓರ್ವ ಕವಯತ್ರಿ. ಮದುವೆಯ ದಿನದಂದು ಅವಳು ಗಂಡನಿಂದ ದೂರ ಆಗಿ ಎಮೋಶನಲ್ ಆಗಿರ್ತಾಳೆ. ಅದಾಗಿ ಆರು ತಿಂಗಳ ನಂತರ, ಪತ್ರಕರ್ತೆ ಕೆಲಸಕ್ಕೆ ಸೇರಿದ ವಾಣಿಯ ಜೀವನಕ್ಕೆ ಕೃಷ್ ಎಂಟ್ರಿ ಆಗುವುದು. ಕೃಷ್‌ನ ಸಂಗೀತಕ್ಕೆ ವಾಣಿಯ ಕವಿತೆಗಳು ಸಾಹಿತ್ಯವಾಗುತ್ತವೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುವುದು. ಆದರೆ, ವಾಣಿಗೆ ಆಲ್ಝೈಮರ್ಸ್ ರೋಗ ಬರುವುದು, ಇದು ಅವರ ಪ್ರೀತಿಯ ಕಥೆಗೆ ದುರಂತದ ತಿರುವು ನೀಡುತ್ತದೆ.
ಎಮೋಶನಲ್ ಲವ್ ಸ್ಟೋರಿ ಹೇಳುವ ಸಿನಿಮಾ!
ಪ್ರೀತಿಸುವಾಗ ಎದುರಾಗುವ ಸಂಬಂಧದ ಸವಾಲುಗಳ ಬಗ್ಗೆ ಈ ಸಿನಿಮಾವಿದೆ. ಮೋಹಿತ್ ಸೂರಿ ನಿರ್ದೇಶನದ ಈ ಸಿನಿಮಾವು ಎಮೋಶನಲ್ ಲವ್ ಸ್ಟೋರಿ ಹೇಳುವುದು. ಮಿಥೂನ್, ತನಿಷ್ಕ್ ಬಾಗ್ಚಿ ಸಂಗೀತವು ಈ ಸಿನಿಮಾ ಕಥೆ ಜೀವ ತುಂಬುತ್ತದೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದ್ದು, ಮೊದಲ ದಿನವೇ ₹25 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾ ತೆರೆ ಕಂಡ ಮೊದಲ ದಿನವೇ 9.75 ಲಕ್ಷ ಜನರು ಈ ಸಿನಿಮಾವನ್ನು ನೋಡಿದ್ದಾರಂತೆ. 2018ರಲ್ಲಿ Dhadak Movie ರಿಲೀಸ್ ಆದಾಗ 8.7 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಮೊದಲ ಸಿನಿಮಾ ಮಾಡಿರೋ ನಟನಿಗೆ ಇದು ದಾಖಲೆಯ ಕಲೆಕ್ಷನ್ ಎನ್ನಬಹುದು. ಇತ್ತೀಚೆಗೆ ತೆರೆಕಂಡ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಈ ಸಿನಿಮಾವೇ ಅತಿ ಹೆಚ್ಚು ಹಣ ಗಳಿಸಿದೆ. ಒಟ್ಟಾರೆ, ಎರಡು ದಿನಗಳಿಗೆ ₹31.7 ಕೋಟಿ ರೂಪಾಯಿ ಹಣ ಗಳಿಸಿದೆ. ಒಟ್ಟಾರೆಯಾಗಿ 50 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ ಎನ್ನಲಾಗಿದೆ.
ಯಶ್ ರಾಜ್ ಫಿಲ್ಮ್ಸ್‌ನ ನಿರ್ಮಾಣ, ಇರ್ಷಾದ್ ಕಮಿಲ್‌ರ ಹಾಡುಗಳು ಈ ಸಿನಿಮಾಕ್ಕೆ ಮೆರುಗು ತಂದಿದೆ. ಅಹಾನ್ ಮತ್ತು ಅನೀತ್‌ರ ಕೆಮಿಸ್ಟ್ರಿಯು ಈ ಸಿನಿಮಾಕ್ಕೆ ಜೀವಂತಿಕೆಯನ್ನು ನೀಡಿದೆ. ಆದರೆ ಕಥೆಯ ಕೆಲವು ಭಾಗಗಳು ಮಾತ್ರ ಎಲ್ಲ ಸಿನಿಮಾಗಳಲ್ಲಿ ಇರುವಂತೆ ಇದೆ ಎಂಬ ಟೀಕೆಯೂ ವ್ಯಕ್ತವಾಗಿದೆ. 2004ರಲ್ಲಿ ತೆರೆ ಕಂಡ a moment to remember ಎನ್ನುವ ಸಿನಿಮಾವನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು ಈ ಸಿನಿಮಾ ತಂಡ ತಳ್ಳಿ ಹಾಕಿದ್ದು, ಒರಿಜಿನಲ್ ಸ್ಟೋರಿ ಎಂದು ಹೇಳಿದೆ. ಅಂದಹಾಗೆ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.