
ಸುಮಾರು 27 ದಿನಗಳಿಂದಲೂ ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೊರೋನಾವನ್ನು ಸೋಲಿಸಿದ್ದಾರೆ. ಆಗಸ್ಟ್ 8ರಂದು ಅಭಿಷೇಕ್ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದೆ.
ಇಂದು ಮಧ್ಯಾಹ್ನ ನನ್ನ ಕೊರೋನಾ ಪರೀಕ್ಷೆ ನೆಗೆಟಿವ್ ಬಂದಿದೆ. ನಾನು ಕೊರೋನಾ ಸೋಲಿಸುತ್ತೇನೆಂದು ಹೇಳಿದ್ದೆ. ನನಗೆ ಹಾಗೂ ನನ್ನ ಕುಟುಂಬಕ್ಕಾಗಿ ನಿಮ್ಮೆಲ್ಲರ ಪ್ರಾರ್ಥನೆಗಳಿಗೆ ಧನ್ಯವಾದ. ಥಂಕ್ಯೂ ಎಂದು ಬರೆದುಕೊಂಡಿದ್ದಾರೆ.
ಮೋಟಿವೇಷನ್‌ಗಾಗಿ ಶಾರುಖಾನ್ ಹಾಡು ಕೇಳಿದ ಅಭಿಷೇಕ್ ಬಚ್ಚನ್..!
ತಮ್ಮ ಕೇರ್ ಬೋರ್ಡ್ ಫೋಟೋ ಶೇರ್ ಮಾಡಿಕೊಂಡ ನಟ, ನಾನು ನಿಮಗೆ ಹೇಳಿದ್ದೆ, ಡಿಸ್ಚಾರ್ಜ್ ಆಗುತ್ತಿದ್ದೇನೆ. ಮನೆಗೆ ಹೋಗುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಬರೆದಿದ್ದಾರೆ.
ನನ್ನ ಹಾಗೂ ನನ್ನ ಕುಟುಂಬದ ಆರೋಗ್ಯದ ಕಾಳಜಿ ವಹಿಸಿದ ಮುಂಬೈಯ ನನಾವತಿ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ನನ್ನ ಧನ್ಯವಾದ. ಅವರಿಲ್ಲದಿದ್ದರೆ ಕೊರೋನಾ ಗೆಲ್ಲಲು ಸಾಧ್ಯವಿರಲಿಲ್ಲ ಎಂದು ಬರೆದಿದ್ದಾರೆ.
ಆಗಸ್ಟ್ 2ರಂದು ಅಮಿತಾಭ್ ಬಚ್ಚನ್ ಡಿಸ್ಚಾರ್ಜ್ ಆಗಿದ್ದರು. ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯಾ, ಪುತ್ರಿ ಆರಾಧ್ಯ, ತಂದೆ ಅಮಿತಾಭ್ ಅವರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.