
ಮುಂಬೈ(ಆ.14): ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮುಂಬೈನಲ್ಲಿದ್ದ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದರಲ್ಲಿನ ತಮ್ಮ ಮನೆಯನ್ನು 45.75 ಕೋಟಿ ರು.ಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ವೋರ್ಲಿಯಲ್ಲಿರುವ 37ನೇ ಅಂತಸ್ತಿನಲ್ಲಿರುವ 5,527 ಚ.ಅಡಿ ವಿಸ್ತಾರದ ಫ್ಲ್ಯಾಟ್ ಅನ್ನು 45.75 ಕೋಟಿಗೆ ಮಾರಾಟ ಮಾಡಿದ್ದಾರೆ. ಅಭಿಷೇಕ್ ಈ ಫ್ಲ್ಯಾಟ್ ಅನ್ನು 2014ರಲ್ಲಿ 41.14 ಕೋಟಿ ರು. ಗೆ ಕೊಂಡುಕೊಂಡಿದ್ದರು. ಈ ನಡುವೆ ಕಳೆದ ಮೇನಲ್ಲಿ ಅಭಿಷೇಕ್ ತಂದೆ ಅಮಿತಾಭ್ ಬಚ್ಚನ್ ಮುಂಬೈನಲ್ಲಿ 31 ಕೋಟಿ ರು. ಭೂಮಿಯನ್ನು ಖರೀಸಿದ್ದರು.
ಈ ಅಪಾರ್ಟ್ಮೆಂಟ್ ವರ್ಲಿಯ ಒಬೆರಾಯ್ 360 ವೆಸ್ಟ್ ಪ್ರಾಜೆಕ್ಟ್ನ 37 ನೇ ಮಹಡಿಯಲ್ಲಿದೆ. ಇದು 7,527 ಚದರ ಅಡಿ ವಿಸ್ತಾರವಾಗಿದೆ. ಇದರಲ್ಲಿ ನಾಲ್ಕು ಕಾರ್ ಪಾರ್ಕಿಂಗ್ ವ್ಯವಸ್ಥೆಯೂ ಒಳಗೊಂಡಿದೆ. ರೂ 2.28 ಕೋಟಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ ವ್ಯಕ್ತಿಗೆ ಮಾರಾಟ ಮಾಡಲಾಗಿದೆ. 2014 ರಲ್ಲಿ ಅಭಿಷೇಕ್ ಬಚ್ಚನ್ 41.14 ಕೋಟಿ ರೂ.ಗೆ ಅಪಾರ್ಟ್ ಮೆಂಟ್ ಖರೀದಿಸಿದ್ದರು.
ಚಿತ್ರಗಳಲ್ಲಿ ನಟಿಸಿದ್ದು ಅಷ್ಟಕ್ಕಷ್ಟೇ, ಆದರೂ ಶಮಿತಾ ಶೆಟ್ಟಿ ಇನ್‌ಕಮ್ ಇಷ್ಟಾಗಿದ್ದು ಹೇಗೆ?
ಕೆಲಸದ ವಿಚಾರವಾಗಿ ಅಭಿಷೇಕ್ ಬಚ್ಚನ್ ಕೊನೆಯ ಬಾರಿಗೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ಪ್ರದರ್ಶನಗೊಂಡ ದಿ ಬಿಗ್ ಬುಲ್‌ನಲ್ಲಿ ಕಾಣಿಸಿಕೊಂಡರು. ಈ ನಟ ಮುಂದೆ ದಾಸ್ವಿಯಲ್ಲಿ ನಟಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.