ಬಾಯ್​ಫ್ರೆಂಡ್​ ಜೊತೆ ಒಟ್ಟಿಗೇ ಇದ್ದ ಆಮೀರ್​ ಪುತ್ರಿ ಇರಾ ಖಾನ್​ಗೆ ಈಗ ವಿವಾಹ ಯೋಗ

By Suvarna News  |  First Published Sep 16, 2023, 5:17 PM IST

 ಬಾಯ್​ಫ್ರೆಂಡ್​ ಜೊತೆ ಒಟ್ಟಿಗೇ ಇದ್ದ ಆಮೀರ್​ ಪುತ್ರಿ ಇರಾ ಖಾನ್​ಗೆ ಈಗ ವಿವಾಹ ಯೋಗ. ವಿವರ ಇಲ್ಲಿದೆ
 


ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಜೊತೆ ಮುಂಬೈನಲ್ಲಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ಮುಂಬೈನಲ್ಲಿ ಕಳೆದ ನವೆಂಬರ್​ನಲ್ಲಿ  ಈ ಸಮಾರಂಭ ನಡೆದಿತ್ತು.  ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಆಮೀರ್​ ಖಾನ್​  ಮಾಜಿ ಪತ್ನಿ ಕಿರಣ್ ರಾವ್, ಅಳಿಯ ಇಮ್ರಾನ್ ಖಾನ್ ಹಾಗೂ ನಿರ್ದೇಶಕ ಅಶುತೋಷ್ ಗೌರೀಕರ್ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಸೆಪ್ಟೆಂಬರ್​ನಲ್ಲಿ,  ನುಪೂರ್ ಶಿಖಾರೆ  ಸೈಕ್ಲಿಂಗ್ ಈವೆಂಟ್​ನಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮಕ್ಕೆ ಪ್ರೇಯಸಿ ಇರಾ ಖಾನ್ ಕೂಡ ಭಾಗಿಯಾಗಿದ್ದರು. ಆಗ ನುಪೂರ್ ಪ್ರೇಯಸಿ ಇರಾಗೆ ಪ್ರಪೋಸ್ ಮಾಡಿದ್ದರು. ಎಲ್ಲರ ಮುಂದೆಯೇ ಮಂಡಿಯೂರಿ ಪ್ರಪೋಸ್ ಮಾಡಿ, ರಿಂಗ್ ಹಾಕಿ ಲವ್ ಯು ಹೇಳಿ, ಲಿಪ್ ಕಿಸ್ ಮಾಡಿದ್ದರು. ನುಪೂರ್, ಮಂಡಿಯೂರಿ ನೀವು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದರು. ಆಗ ಇರಾ ಮೈಕ್ ತೆಗೆದುಕೊಂಡು ಹೌದು ಎಂದು ಹೇಳಿದರು. ಬಳಿಕ ಇಬ್ಬರು ಹಗ್ ಮಾಡಿ ಪ್ರೀತಿ ವ್ಯಕ್ತಪಡಿಸಿದರು. ನವ ಜೋಡಿಗೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ವಿಶ್ ಮಾಡಿದ್ದರು. ಇದಾದ ಬಳಿಕ ಎಂಗೇಜ್​ಮೆಂಟ್​ ಆಗಿತ್ತು.ನಿಶ್ಚಿತಾರ್ಥವಾಗಿ ವರ್ಷದ ಬಳಿಕ ಇದೀಗ ಮದುವೆಗೆ ಜೋಡಿ ಸಿದ್ಧವಾಗಿದೆ. 

ವರದಿಯ ಪ್ರಕಾರ, "ಇರಾ ಮತ್ತು ನೂಪುರ್ ಶಿಖರೆ ಅವರು ಮೊದಲು ಡಿಸೆಂಬರ್ ಅಂತ್ಯದಲ್ಲಿ  ಮುಂಬೈ ನ್ಯಾಯಾಲಯದಲ್ಲಿ ರಿಜಿಸ್ಟ್ರರ್​ ಮಾಡಿಕೊಳ್ಳಲಿದ್ದಾರೆ.  ನಂತರ ಅವರು ಜನವರಿ ಮೊದಲ ವಾರದಲ್ಲಿ ಉದಯಪುರದಲ್ಲಿ ಮದುವೆಯಾಗಲಿದ್ದಾರೆ.  ಒಟ್ಟು ಮೂರು ದಿನಗಳ ಕಾಲ ಈ ಮದುವೆ ನಡೆಯಲಿದೆ. ಇದಾಗಲೇ ಈ ಜೋಡಿ  ಹಲವು ಟ್ರಿಪ್​ಗಳನ್ನು ಮಾಡಿದೆ.  ಒಂದೇ ಮನೆಯಲ್ಲೇ ಹಲವು ದಿನಗಳಿಂದ ವಾಸಿಸುತ್ತಿದ್ದರು. ಇದೊಂದು ಸಹಜೀವನ ಎಂದೇ ಬಾಲಿವುಡ್ ಮಾತಾಡಿಕೊಂಡಿತ್ತು. ಅದಕ್ಕೀಗ ಫುಲ್ ಸ್ಟಾಪ್ ಸಿಕ್ಕಿದೆ. ಅಂದಹಾಗೆ, ಇರಾ ಖಾನ್, ಆಮೀರ್ ಖಾನ್ ಮತ್ತು ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ. ಆಮೀರ್- ರೀನಾ ದಾಂಪತ್ಯಕ್ಕೆ ಜುನೈದ್ ಖಾನ್ ಎನ್ನುವ ಮತ್ತೋರ್ವ ಮಗನಿದ್ದಾನೆ. ಆಮೀರ್ ಖಾನ್ ಬಳಿಕ ಕಿರಣ್ ರಾವ್ ಅವರನ್ನು ಮದುವೆಯಾದರು ಆದರೆ ಕಿರಣ್ ಜೊತೆಯೂ ದಾಂಪತ್ಯ ಜೀವನ ಕಡಿದುಕೊಂಡು ಒಂಟಿಯಾಗಿದ್ದಾರೆ. ಆದರೆ ಮೊದಲ ಪತ್ನಿ ಹಾಗೂ ಎರಡನೇ ಪತ್ನಿ ಇಬ್ಬರ ಜೊತೆಯೂ ಸ್ನೇಹದಿಂದ ಇದ್ದಾರೆ.  

Tap to resize

Latest Videos

ಮಾನಸಿಕ ಆರೋಗ್ಯದ ಸಮಸ್ಯೆ ಇದೆ: ಆಮೀರ್‌ ಪುತ್ರಿ ಇರಾ ಖಾನ್‌ ಹೇಳಿದ್ಯಾಕೆ?

 ನೂಪುರ್ ಶಿಕ್ರೆ ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ರು. ಶಿಕ್ರೆ ಫಿಟ್​ನೆಸ್​ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್​ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದಾರೆ.  

 ಇತ್ತೀಚಿನ ಸಂದರ್ಶನವೊಂದರಲ್ಲಿ,  ಇರಾ ಖಾನ್ ಅವರು ಖಿನ್ನತೆಯೊಂದಿಗೆ ತಮ್ಮ ದೀರ್ಘಕಾಲದ ಹೋರಾಟದ ಬಗ್ಗೆ ಚರ್ಚಿಸಿದ್ದರು ಮತ್ತು ಕುಟುಂಬದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿದ್ದರು. ಇರಾ ಖಾನ್ ಖಿನ್ನತೆಯೊಂದಿಗಿನ ತನ್ನ ಅನುಭವಗಳ ಪರಿಣಾಮವಾಗಿ ತನ್ನ ನಡವಳಿಕೆಯು ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು. ಅವರು ಆಗಾಗ್ಗೆ ಅಳುತ್ತಿದ್ದರು ಮತ್ತು ದಿನಗಟ್ಟಲೆ ಉಪವಾಸ ಇರುತ್ತಿದ್ದರು ಎಂದು ಹೇಳಿಕೊಂಡಿದ್ದರು. 'ನಾನು ಜೀವಂತವಾಗಿರಲು ಬಯಸುವುದಿಲ್ಲ ಎಂಬ ವಿಷಯವನ್ನು ನನ್ನ ತಾಯಿ ಕಂಡುಕೊಂಡರು.ದಿನದಲ್ಲಿ ಕಡಿಮೆ ಅವಧಿ ಜೀವಂತ ಇರಬಹುದು ಎಂದು ನಾನು ದಿನದ ಹೆಚ್ಚು ಕಾಲ ಮಲಗುತ್ತಿದ್ದೆ' ಎಂದು ಇರಾ ಖಾನ್‌ TOI ಜೊತೆಗಿನ ತನ್ನ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದರು.

ಮಗಳ ಮದ್ವೆಗೆ ಮೊದಲ ಪತ್ನಿ ಜೊತೆ ಚಿನ್ನದಂಗಡಿಗೆ ಹೋದ ಆಮೀರ್: ಹಳೇ ಹೆಂಡ್ತಿ ಪಾದವೇ ಗತಿ ಎಂದ ನೆಟ್ಟಿಗರು!

click me!