
ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ನೈಜ ಘಟನೆಗಳಾಧರಿತ ಸಿನಿಮಾಗಳು ಬರುತ್ತಿವೆ. ಕೆಲವು ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ದಾಖಲೆ ಬರೆದ್ರೆ, ಒಂದಿಷ್ಟು ಚಿತ್ರಗಳು ಮೊದಲೇ ದಿನವೇ ನೀರಸ ಪ್ರತಿಕ್ರಿಯೆ ಪಡೆದುಕೊಂಡು ಚಿತ್ರಮಂದಿರದಿಂದ ಹೊರಗೆ ಬೀಳುತ್ತವೆ. ಹೊಸತನದ ಕಥೆಯುಳ್ಳ ಸಿನಿಮಾಗಳನ್ನು ಪ್ರೇಕ್ಷಕರು ಕೈ ಬಿಡಲ್ಲ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿಯಾಗಿದೆ. ಕೇವಲ 15 ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬರೋಬ್ಬರಿ 858 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾ ನಿರ್ಮಾಪಕರಿಗೆ 12 ರಿಂದ 14 ಲಾಭವನ್ನು ನೀಡಿದೆ. ಈವರೆಗಿನ ಅತ್ಯಧಿಕ ಲಾಭ ನೀಡಿದ ಸಿನಿಮಾ ಎಂಬ ಹೆಗ್ಗಳಿಗೆ ಈ ಚಿತ್ರ ಪಾತ್ರವಾಗಿದೆ.
ಈ ಸಿನಿಮಾದಲ್ಲಿ 19 ವರ್ಷದ ನಟಿಯೇ ನಾಯಕಿ ಮತ್ತು ಹೀರೋ. ಯಾವುದೇ ಹೆಚ್ಚು ಪ್ರಚಾರವಿಲ್ಲದೇ ಬಿಡುಗಡೆಯಾದ ಈ ಸಿನಿಮಾ ತನ್ನ ಗಟ್ಟಿಯಾದ ಕತೆಯೊಂದಿಗೆ ಪ್ರೇಕ್ಷಕರನ್ನು ಸೆಳೆದಿತ್ತು. ವಿಶ್ವದಾದ್ಯಂತ 800 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ದಿಗ್ಗಜರನ್ನು ಅಚ್ಚರಿಗೊಳಿಸಿತ್ತು. ಯಾವುದು ಈ ಸಿನಿಮಾ ಎಂದು ಕೇಳುತ್ತಿದ್ದೀರಾ? ಆ ಕುರಿತ ಮಾಹಿತಿ ಇಲ್ಲಿದೆ.
ಯಾವುದು ಈ ಸಿನಿಮಾ?
ಸೀಕ್ರೆಟ್ ಸೂಪರ್ ಸ್ಡಾರ್ ಸಿನಿಮಾ 19ನೇ ಅಕ್ಟೋಬರ್ 2017ರಂದು ಬಿಡುಗಡೆಯಾಗಿತ್ತು. ಕಿರಣ್ ರಾವ್ ಮತ್ತು ಆಮಿರ್ ಖಾನ್ ಜಂಟಿಯಾಗಿ 'ಸೀಕ್ರೆಟ್ ಸೂಪರ್‌ಸ್ಟಾರ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಜೈರಾ ವಾಸೀಮ್ ತಮ್ಮ ನಟನೆಯ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದರು. ಭಾರತದಲ್ಲಿ 'ಸೀಕ್ರೆಟ್ ಸೂಪರ್‌ಸ್ಟಾರ್' ಬಾಕ್ಸ್‌ಆಫಿಸ್‌ನಲ್ಲಿ 62 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದಾದ ಬಳಿಕ 19 ಜನವರಿ 2018ರಂದು ಚೀನಾದಲ್ಲಿ 'ಸೀಕ್ರೆಟ್ ಸೂಪರ್‌ಸ್ಟಾರ್' ಬಿಡುಗಡೆಯಾಯ್ತು. ಚೀನಿಯರಿಗೆ ಈ ಸಿನಿಮಾ ಎಷ್ಟು ಇಷ್ಟಪಟ್ಟರು ಅಂದ್ರೆ ಭಾರತದಲ್ಲಿ ಗಳಿಸಿದ ಹಣಕ್ಕಿಂತ 14 ಪಟ್ಟು ನೀಡಿದರು. ಒಟ್ಟು 858 ಕೋಟಿ ರೂಪಾಯಿ ಗಳಿಸವವ ಮೂಲಕ ಸೀಕ್ರೆಟ್ ಸೂಪರ್‌ಸ್ಟಾರ್ ಭಾರತದ ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಇಳಯರಾಜ ಹಾಗೂ ಯುವನ್ ಟ್ಯೂನ್ ಕಥೆ: ತಂದೆ-ಮಗನ ಸಂಗೀತ ಸಂಬಂಧದ ಅಪರೂಪದ ಘಟನೆ
ಸೀಕ್ರೆಟ್ ಸೂಪರ್‌ಸ್ಟಾರ್ ಕಥೆ ಏನು?
ಇಂಸಿಯಾ ಮಲೀಕ್ ಎಂಬ ಮುಸ್ಲಿಂ ಬಾಲಕಿ ತನ್ನ ಗುರುತು ಮರೆಮಾಚಿ ಯುಟ್ಯೂಬ್‌ನಲ್ಲಿ ತನ್ನ ಹಾಡುಗಳನ್ನು ಅಪ್ಲೋಡ್ ಮಾಡುತ್ತಿರುತ್ತಾಳೆ. ಬುರ್ಖಾ ಧರಿಸಿರುವ ಕಾರಣ ಯಾರು ಈ ಕಲಾವಿದೆ ಎಂಬ ವಿಷಯ ಯಾರಿಗೂ ಗೊತ್ತಾಗಲ್ಲ. ಈ ವಿಡಿಯೋ ನೋಡಿದ ಖ್ಯಾತ ಸಂಗೀತ ನಿರ್ದೇಶಕ ಶಕ್ತಿ ಕುಮಾರ್ ಎಂಬಾತ ಈಕೆಯನ್ನು ಸಂಪರ್ಕಿಸಿ ಸಿನಿಮಾದಲ್ಲಿ ಹಾಡು ಅವಕಾಶವನ್ನು ನೀಡುತ್ತಾನೆ. ಈ ವಿಷಯವನ್ನು ಬಾಲಕಿ ಮನೆಯಲ್ಲಿ ಯಾರಿಗೂ ತಿಳಿಸಿರಲ್ಲ. ತಂದೆಯ ದೌರ್ಜನ್ಯಕ್ಕೆ ಬಾಲಕಿಯ ಇಡೀ ಕುಟುಂಬ ನಲುಗಿರುತ್ತದೆ. ಮುಂದೆ ಇಡೀ ಕುಟುಂಬ ರಿಯಾದ್‌ಗೆ ಶಿಫ್ಟ್ ಆಗಲು ನಿರ್ಧರಿಸುತ್ತದೆ. ಈ ವೇಳೆ ಬಾಲಕಿ ವಿದೇಶಕ್ಕೆ ತೆರಳದೇ ಮುಂಬೈಗೆ ತೆರಳುತ್ತಾಳೆ.
ಮುಂಬೈನಲ್ಲಿ ನಡೆಯುತ್ತಿರುವ ಪ್ರಶಸ್ತಿ ಸಮಾರಂಭಕ್ಕೆ ತೆರಳುತ್ತಾಳೆ. ಅಲ್ಲಿ ಉತ್ತಮ ಗಾಯಕಿ ಪ್ರಶಸ್ತಿಗೆ ಬಾಲಕಿಯ ಹೆಸರು ನಾಮಿನೇಟ್ ಆಗಿರುತ್ತದೆ. ಆ ಪ್ರಶಸ್ತಿ ಆಯ್ಕೆಗೆ ಸಿಗುತ್ತಾ ಇಲ್ಲ ಅನ್ನೋದು ಚಿತ್ರದ ಸಸ್ಪೆನ್ಸ್. ಈ ಚಿತ್ರಕ್ಕೆ ಬಂಡವಾಳ ಹಾಕಿರುವ ಆಮಿರ್ ಖಾನ್ ಸಿನಿಮಾದಲ್ಲಿ ಶಕ್ತಿ ಕುಮಾರ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿದ್ದ ಜೈರಾ ವಾಸಿಂ ಸಿನಿಮಾ ಲೋಕಕ್ಕೆ ಗುಡ್‌ಬೈ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮೆಲ್ಲಾ ಫೋಟೋಗಳನ್ನು ಡಿಲೀಟ್ ಸಹ ಮಾಡಿದ್ದಾರೆ.
ಇದನ್ನೂ ಓದಿ: ಟೈಟ್ ಸೆಕ್ಯೂರಿಟಿ ನಡುವೆ ಸ್ಟಾರ್ ನಟರ ಸಿನಿಮಾ ಶೂಟಿಂಗ್, ಡೆವಿಲ್, BRB ಸೆಟ್‌ನಲ್ಲಿ ಸೆಕ್ಯೂರಿಟಿ ಕೋಟೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.