
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಯಾವಾಗಲೂ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಮುಖ್ಯಾಂಶಗಳಲ್ಲಿರುತ್ತಾರೆ. ಅಮೀರ್ ಖಾನ್ 21 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿವಾಹವಾದರು. ಅಮೀರ್ ಖಾನ್ ಅವರ ಮೊದಲ ಮದುವೆ ರೀನಾ ದತ್ತಾ ಅವರೊಂದಿಗೆ- ಇವರ ಪ್ರೇಮಕಥೆ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಅಮೀರ್ ಮತ್ತು ರೀನಾ ಮದುವೆಯಾದಾಗ, ನಟಿಗೆ ಕೇವಲ 19 ವರ್ಷ. ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದರು.
ತನ್ನ ಮೊದಲ ಮದುವೆಗೆ 10 ರೂಪಾಯಿ ಕೂಡಾ ಖರ್ಚು ಮಾಡಿಲ್ಲ ಎಂದು ಅಮೀರ್ ಖಾನ್ ಒಮ್ಮೆ ಬಹಿರಂಗಪಡಿಸಿದರು. ಅಮೀರ್ ಮತ್ತು ರೀನಾ ಹೇಗೆ ಮದುವೆಯಾದರು ಎಂದು ತಿಳಿಯೋಣ.
ಅಮೀರ್ ಖಾನ್ ಮತ್ತು ರೀನಾ ದತ್ತಾ ಲವ್ ಸ್ಟೋರಿ ತುಂಬಾ ಆಸಕ್ತಿದಾಯಕವಾಗಿದೆ. ಇವರಿಬ್ಬರ ಪ್ರೇಮಕಥೆ ಶುರುವಾಗಿದ್ದು ಮನೆಯ ಕಿಟಕಿಯಿಂದ. ಅದರ ನಂತರ, ರೀನಾ ಅಮೀರ್ ಅವರ ಚೊಚ್ಚಲ ಚಿತ್ರ ಖಯಾಮತ್ ಸೆ ಖಯಾಮತ್ ತಕ್ ನಲ್ಲಿ ಕೆಲಸ ಮಾಡಿದರು.
10 ರೂಪಾಯಿಗಿಂತ ಕಡಿಮೆ ಖರ್ಚಿನಲ್ಲಿ ಮದುವೆ
ಅಮೀರ್ ಖಾನ್ ಮತ್ತು ರೀನಾ ದತ್ತಾ ಅವರ ಮದುವೆಗೆ ಬಹಳ ಕಡಿಮೆ ಖರ್ಚು ಮಾಡಲಾಗಿದೆ. ಸಂದರ್ಶನವೊಂದರಲ್ಲಿ ಅಮೀರ್ ಖಾನ್ ತಮ್ಮ ಮದುವೆಗೆ 10 ರೂಪಾಯಿ ಖರ್ಚು ಮಾಡಿಲ್ಲ ಎಂದು ಹೇಳಿದ್ದರು. ತಾವು ರಹಸ್ಯವಾಗಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದೇವೆ ಎಂದು ಅಮೀರ್ ಹೇಳಿದ್ದರು. ನಮ್ಮ ಮದುವೆಯಲ್ಲಿ ಮೂರು ಜನ ಮಾತ್ರ ಹಾಜರಿದ್ದರು. ನಾವು ಬಸ್ ನಂ.211ರಲ್ಲಿ ಮದುವೆಯಾಗುವ ತಾಣಕ್ಕೆ ಹೋಗಲು ಬಸ್ಸಿನ ಟಿಕೆಟ್ 50 ಪೈಸೆ ಇತ್ತು. ನಾವು ಬಾಂದ್ರಾ ಪಶ್ಚಿಮ ನಿಲ್ದಾಣದಲ್ಲಿ ಇಳಿದೆವು, ಸೇತುವೆಯನ್ನು ದಾಟಿದೆವು. ಆಮೇಲೆ ಸ್ವಲ್ಪ ಹೊತ್ತು ನಡೆದು ಗೃಹ ನಿರ್ಮಾಣ ಭವನ ತಲುಪಿ ಅಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡೆವು. ಇದರಿಂದ ಮದುವೆಗೆ 10 ರೂಪಾಯಿ ಕೂಡಾ ಖರ್ಚು ಮಾಡಿಲ್ಲ ಎಂದಿದ್ದಾರೆ.
ಅಮೀರ್ ಮತ್ತು ರೀನಾ 1986ರಲ್ಲಿ ವಿವಾಹವಾದರು. ಅವರಿಗೆ ಐರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ದಂಪತಿ ಬೇರ್ಪಟ್ಟರು.
ನಂತರ ಅಮೀರ್ ಕಿರಣ್ ರಾವ್ ಅವರನ್ನು ವಿವಾಹವಾದರು. ಈಗ ಅಮೀರ್ ಮತ್ತು ಕಿರಣ್ ಕೂಡ ಬೇರ್ಪಟ್ಟಿದ್ದಾರೆ. ಆದರೆ ಅಮೀರ್ ಯಾವಾಗಲೂ ತನ್ನ ಮೂರು ಮಕ್ಕಳಿಗಾಗಿ ಇಡೀ ಕುಟುಂಬದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಮೀರ್ ಮತ್ತು ರೀನಾ ಅವರ ಪುತ್ರಿ ಐರಾ ವಿವಾಹವಾದರು, ಇದರಲ್ಲಿ ಕಿರಣ್ ರಾವ್ ಕೂಡ ಭಾಗವಹಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.