26 ವರ್ಷದ ನಟಿ ಗಾಯತ್ರಿ ಕಾರು ಅಪಘಾತದಲ್ಲಿ ನಿಧನ

Suvarna News   | Asianet News
Published : Mar 21, 2022, 12:56 PM ISTUpdated : Mar 21, 2022, 01:19 PM IST
26 ವರ್ಷದ ನಟಿ ಗಾಯತ್ರಿ ಕಾರು ಅಪಘಾತದಲ್ಲಿ ನಿಧನ

ಸಾರಾಂಶ

26 ವರ್ಷದ ಯೂಟ್ಯೂಬರ್ ಮತ್ತು ನಟಿ ಗಾಯತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೋಳಿ ಆಚರಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. 

ಖ್ಯಾತ ಯೂಟ್ಯೂಬರ್ ಮತ್ತು ತೆಲುಗು ನಟಿ ಗಾಯತ್ರಿ(26 year old Actress Gayathri) ರಸ್ತೆ ಅಪಘಾತದಲ್ಲಿ(Road Accident) ದುರಂತ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಹೋಳಿ ಆಚರಣೆ(Holi Celebration) ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ದರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ನೇಹಿತ ರಾಥೋಡ್ ಎನ್ನುವವರ ಜೊತೆ ಕಾರಿನಲ್ಲಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಾಥೋಡ್ ಅವರೇ ಕಾರು ಚಲಾಯಿಸುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಗಾಯತ್ರಿ ಚಲಾಯಿಸುತ್ತಿದ್ದ ಕಾರು ಗಚ್ಚಿಬೌಲಿ(Gachibowli) ಪ್ರದೇಶದ ಬಳಿ ಬಂದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಈ ಅಪಘಾತದಲ್ಲಿ 26 ವರ್ಷದ ನಟಿ ಗಾಯತ್ರಿ ಸ್ಥಳದಲ್ಲೇ ಸಾವನ್ನಪ್ಪಿದರು. ರಾಥೋಡ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ರಾಥೋಡ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿದೆ. ಇನ್ನು ಅಪಘಾತದ ವೇಳೆ ವಾಹನದ ಕೆಳಗೆ ಸಿಲುಕಿ 38 ವರ್ಷದ ಮಹಿಳೆಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಅಪಘಾತದದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಗಾಯತ್ರಿ ಅವರ ನಿಜವಾದ ಹೆಸರು ಡಾಲಿ ಡಿ ಕ್ರೂಜ್ ( Dolly D Cruze). ಅವರು ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಖ್ಯಾತಿಗಳಿಸಿದ್ದರು. ಸುಂದರವಾದ ಪೋಸ್ಟ್ ಗಳ ಮೂಲಕ ಗಾಯತ್ರಿ ಪ್ರಸಿದ್ಧಿಗಳಿಸಿದ್ದರು. ಈ ಖ್ಯಾತಿ ಅವರನ್ನು ನಟನೆಯತ್ತಾ ಸಹ ಕರೆದುಕೊಂಡು ಹೋಗಿತ್ತು. ತೆಲುಗಿನ ಮೇಡಂ ಸರ್ ಮೇಡಂ ಅಂಥೆ ಎನ್ನುವ ವೆಬ್ ಸೀರಿಸ್ ನಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು ಗಾಯತ್ರಿ. ಅಲ್ಲದೆ ಅನೇಕ ಕಿರುಚಿತ್ರಗಳಲ್ಲಿ ಗಾಯತ್ರಿ ನಟಿಸಿದ್ದಾರೆ. 

Road Accident: ಅಮೃತಾ ಕೈಯಿಂದ ಇಬ್ಬರು ಮಕ್ಕಳನ್ನು ಕಸಿದುಕೊಂಡ  ಕ್ರೂರ ವಿಧಿ

ನಟಿ ಗಾಯತ್ರಿ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಸ್ನೇಹಿತರು, ಆಪ್ತರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. ನಟಿ ಸುರೇಖಾ ವಾಣಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಾಪ ಸೂಚಿಸಿದ್ದಾರೆ. 'ಇದು ತುಂಬಾ ಅನ್ಯಾಯ. ಈ ಸುದ್ದಿಯನ್ನು ಅರಗಿಸಿಕೊಳ್ಳಲು ಕಷ್ಟ. ನಿಮ್ಮೊಂದಿಗೆ ಉತ್ತಮ ನೆನಪುಗಳಿವೆ. ಹೇಳಲು ಪದಗಳೇ ಬರುತ್ತಿಲ್ಲ' ಎಂದಿದ್ದಾರೆ. ಅನೇಕ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

'ನನ್ನಮ್ಮ ಸೂಪರ್ ಸ್ಟಾರ್' Samanvi ದುರ್ಮರಣ; CCTV ವಿಡಿಯೋ ವೈರಲ್!

ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ನಿಧನ

ಇತ್ತೀಚಿಗಷ್ಟೆ ಭೀಕರ ದುರಂತದಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋದಲ್ಲಿ (Reality Show) ಕಾಣಿಸಿಕೊಳ್ಳುತ್ತಿದ್ದ ಪುಟಾಣಿ  ದಾರುಣ ಸಾವು ಕಂಡಿದ್ದರು. ಅತಿ ವೇಗದಿಂದ ಬಂದು ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿಯಾಗಿ  ತಾಯಿ ಜೊತೆ ಸ್ಕೂಟರ್ ನ ಹಿಂಬದಿ  ಕುಳಿತಿದ್ದ ಆರು ವರ್ಷದ ಬಾಲಕಿ ಸಮನ್ವಿ(6) ಸಾವನ್ನಪ್ಪಿದ್ದಳು. ವಾಹನ ಚಾಲನೆ ಮಾಡುತ್ತಿದ್ದ ತಾಯಿಗೆ ಸಹ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಲಾಗಿತ್ತು. ಕಿರುತೆರೆ ಕಲಾವಿದೆ ಅಮೃತ ನಾಯ್ಡು ಖ್ಯಾತ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಮೊಮ್ಮಗಳು. ಅಮೃತ ತಾಯಿ ಸಹ ಶೋಭಾ ಗುರುರಾಜುಲು ನಾಯ್ಡು ಹರಿಕಥಾ ವಿದ್ವಾಂಸರು. ಅಮೃತಾ ಮತ್ತು ಮಗಳು ಸಮನ್ವಿ ಇಬ್ಬರು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!