ವಾಣಿಜ್ಯ ನಗರಿಯಲ್ಲಿರುವ ಶಾರುಖ್ ಖಾನ್ ಬಂಗಲೆ ಸಮೀಪದ ಕಟ್ಟಡದಲ್ಲಿ ಅಗ್ನಿ ಅವಘಡ. ದುರಂತದಲ್ಲಿ 20 ವರ್ಷದ ಯುವತಿ ಸಾವು....
(ಮುಂಬೈ ಮಾ.20): ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಿವಾಸ ಅಂದ್ರೆ ಎಲ್ಲರಿಗೂ ಮೊದಲು ಜ್ಞಾಪಕ ಬರುವುದು ಮುಂಬೈನ 'ಮನ್ನತ್' ಬಂಗಲೆ. ಈ ಬಂಗಲೆ ಎದುರು ಆಕಸ್ಮಿಕ ಅಗ್ನಿ ಅವಘಡವೊಂದು ಸಂಭವಿಸಿದೆ. ದುರಂತವೂ ವರದಿಯಾಗಿದೆ.
ಹೌದು! ಶಾರುಖ್ ನಿವಾಸಕ್ಕೆ ಸಮೀಪದಲ್ಲಿರುವ 6 ಅಂತಸ್ತಿನ ಅಪಾರ್ಟ್‌ಮೆಂಟ್‌ವೊಂದರ 5ನೇ ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ದುರಂತ ಘಟನೆಯಲ್ಲಿ 20 ವರ್ಷದ ಯುವತಿ ಸಾವಿಗೀಡಾಗಿದ್ದಾರೆ.
ಅಗ್ನಿ ಶಾಮಕ ದಳದವರು ಅಗ್ನಿ ನಂದಿಸಿ ಯುವತಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಿಗೆಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಿಲ್ಲ. ತೀವ್ರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಕೊನೆಯುಸಿರೆಳೆದಿದ್ದಾರೆ. ಆದರೆ ಈ ಘಟನೆಯಲ್ಲಿ 38 ವರ್ಷದ ಮತ್ತೊಂದು ಮಹಿಳೆಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರ್ಚ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ