ಮೃತ ದೇಹ ಸ್ವೀಕರಿಸಲು ಕುಟುಂಬದ ಹಿಂದೇಟು; ಅಂತಿಮ ವಿಧಿ ವಿಧಾನ ನೇರವೇರಿಸಿದ ಪೊಲೀಸ್!

By Suvarna NewsFirst Published May 9, 2020, 7:51 PM IST
Highlights

ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಪೋಸ್ಟ್ ಮಾರ್ಟಮ್ ಬಳಿಕ ಮೃತ ದೇಹ ಸ್ವೀಕರಿಸಲು ಕುಟುಂಬ ಸದಸ್ಯರು ಹಿಂದೇಟು ಹಾಕಿದ್ದಾರೆ. ಹೀಗಾಗಿ ಪೊಲೀಸರೇ ಅಂತಿ ವಿಧಿ ವಿಧಾನ ನೇರವೇರಿಸಿದ್ದಾರೆ. 
 

ಚಾಮರಾಜನಗರ(ಮೇ.09): ಎಲ್ಲೆಡೆ ಕೊರೋನಾ ಭಯ ಆವರಿಸಿದೆ ನಿಜ. ಕೊರೋನಾ ವೈರಸ್‌ನಿಂದ ಮಾನವೀಯತೆ ಕೂಡ ಸತ್ತು ಹೋಗುತ್ತಿದೆಯಾ ಅನ್ನೋ ಅನುಮಾನ ಕಾಡತೊಡಗಿದೆ. ಕಾರಣ ತನ್ನ ಕುಟುಂಬದ ಸದಸ್ಯನಾಗಿದ್ದ, ನೋವು ನಲಿವುಗಳಲ್ಲಿ ಪಾಲುದಾರನಾಗಿದ್ದ. ಆದರೆ ಆತ ಮೃತಪಟ್ಟಾಗ ಕೊರೋನಾ ಭಯದಿಂದ ಮೃತ ದೇಹ ಸ್ವೀಕರಿಸಲು ಹಿಂದೇಟು ಹಾಕಿದ ಘಟನೆ ನಡೆದಿದೆ. ಬಳಿಕ ಪೊಲೀಸರ ಅಂತಿಮ ವಿಧಿ ವಿಧಾನ ಮಾಡಿದ್ದಾರೆ. 

"

ಗ್ರೀನ್‌ ಝೋನ್‌ನಲ್ಲಿದ್ದ ಚಾಮರಾಜನಗರ ಜಿಲ್ಲೆಗೆ ಕೊರೋನಾ ಟೆನ್ಷನ್‌..!..

ನಾಲ್ಕು ದಿನದ ಹಿಂದೆ ಚಾಮರಾಜನಗರ ಜಿಲ್ಲೆಯ 44 ವರ್ಷದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿತ್ತು. ಮಾನಸಿಕ ಅಸ್ವಸ್ಥನಾಗಿದ್ದ ಈ ವ್ಯಕ್ತಿಗೆ ಆನೆ ದಾಳಿ ಮಾಡುವಾಗ ತಪ್ಪಿಸಿಕೊಳ್ಳಬೇಕು, ಕಿರುಚಾಡಬೇಕು ಅನ್ನೋ ಅರಿವೇ ಇರಲಿಲ್ಲ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ. ಈತನನ್ನು ಆಸ್ಪತ್ರೆ ದಾಖಲಿಸಿದ್ದರು, ಪ್ರಯೋಜನವಾಗಿರಲಿಲ್ಲ.

ಸ್ಥಳದಲ್ಲೇ ಮಾನಸಿಕ ಅಸ್ವಸ್ಥ ವ್ಯಕ್ತಿ ಮೃತಪಟ್ಟಿದ್ದ. ಬಳಿಕ ಮೃತದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆ ಬಳಿಕ ಮೃತ ದೇಹ ಸ್ವೀಕರಿಸಲು ಕುಟುಂಬ ಸದಸ್ಯರು ಹಿಂದೇಟು ಹಾಕಿದ್ದಾರೆ. ಕೊರೋನಾ ವೈರಸ್ ಕಾರಣ ತಮಗೆಲ್ಲಿ ಹರಡುತ್ತೆ ಅನ್ನೋ ಕಾರಣದಿಂದ ಮೃತ ದೇಹ ಸ್ವೀಕರಿಸಿಲ್ಲ. ಬಳಿಕ ಚಾಮರಾಜನಗರ ಸಬ್ ಇನ್ಸ್‌ಪೆಕ್ಟರ್ ಮಾದೇಗೌಡ ಹಾಗೂ ಇಬ್ಬರು ಪೊಲೀಸರು ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

ಜೆಸಿಬಿ ಮೂಲಕ ಮೃತ ದೇಹಕ್ಕೆ ಗುಂಡಿ ತೆಗಿದಿದ್ದಾರೆ. ಬಳಿಕ ತಾವೇ ಬಿಳಿ ವಸ್ತ, ಹೂವು ಹಾಗೂ ಅಂತಿ ಕ್ರಿಯಾವಿಧಾನಕ್ಕೆ ಬೇಕಾದ ವಸ್ತುಗಳನ್ನು ತಂದು, ತಾವೇ ಖುದ್ದಾಗಿ ವಿಧಿ ವಿಧಾನ ಮಾಡಿದ್ದಾರೆ. 

click me!