ಚಾಮರಾಜನಗರ: ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತ

By Kannadaprabha NewsFirst Published Nov 13, 2019, 2:06 PM IST
Highlights

ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಜಿಪಂ, ತಾಪಂ, ಗ್ರಾಪಂ ಹಾಗೂ ನಗರಸಭೆಯ ಸದಸ್ಯ ಸ್ಥಾನಕ್ಕೆ ಮಂಗಳವಾರ ಶಾಂತಿಯುತ ಚುನಾವಣೆ ನಡೆಯಿತು. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು.

ಚಾಮರಾಜನಗರ(ನ.13): ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಜಿಪಂ, ತಾಪಂ, ಗ್ರಾಪಂ ಹಾಗೂ ನಗರಸಭೆಯ ಸದಸ್ಯ ಸ್ಥಾನಕ್ಕೆ ಮಂಗಳವಾರ ಶಾಂತಿಯುತ ಚುನಾವಣೆ ನಡೆಯಿತು.

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ, ಯಳಂದೂರು ತಾಲೂಕು ಪಂಚಾಯಿತಿಯ ಯರಿಯೂರು ಕ್ಷೇತ್ರ ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್, ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮ ಪಂಚಾಯಿತಿಯ ಬಾಣೂರು ಕ್ಷೇತ್ರ, ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿಯ ಚಿಕ್ಕಮಾಲಾಪುರ ಕ್ಷೇತ್ರ, ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಯ ಬಂಡೀಪುರ ಕ್ಷೇತ್ರ, ರಾಘವಾಪುರ ಗ್ರಾಮ ಪಂಚಾಯಿತಿಯ ಹಸಗೂಲಿ ಕ್ಷೇತ್ರಗಳಿಗೆ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು.

ಚಾಮರಾಜನಗರ: ಮಳೆಗೆ ಕೊಚ್ಚಿಹೋದ ಸೇತುವೆ ತಡೆಗೋಡೆ

ಹರದನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೩೮ ಮತಗಟ್ಟೆಗಳಿದ್ದು, 29,602 ಮತದಾರರಿದ್ದಾರೆ. ಈ ಪೈಕಿ 14,512 ಪುರುಷರು, 15,088 ಮಹಿಳೆಯರು, ಇತರೆ 2 ಪೈಕಿ ಪುರುಷರು 9,136, ಮಹಿಳೆಯರು 9,907 ಸೇರಿದಂತೆ ಒಟ್ಟು 19,033 ಮತದಾರರು ಮತ ಚಲಾಯಿಸಿದ್ದು, ಶೇ. 64.33 ಮತಚಲಾವಣೆಯಾಗಿದೆ.

ಯಳಂದೂರು ತಾಲೂಕು ಪಂಚಾಯಿತಿಯ ಯರಿಯೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಒಟ್ಟು 7 ಮತಗಟ್ಟೆಗಳಿದ್ದು, 6360 ಮತದಾ ರರಿದ್ದು, ಈ ಪೈಕಿ 3190 ಪುರುಷರು ಮತ್ತು 3170 ಮಹಿಳಾ ಮತದಾರದಿದ್ದಾರೆ. ಈ ಪೈಕಿ 2008 ಪುರುಷರು ಮತ್ತು 1972 ಮಹಿಳೆಯರು ಸೇರಿ 3980 ( ಶೇ. 63.6) ಮತದಾನವಾಗಿದೆ.

ಮೈಸೂರು- ಬೆಂಗಳೂರು ನಡುವೆ ರೈಲ್ವೆ ಸಂಚಾರದಲ್ಲಿ 30 ನಿಮಿಷ ಉಳಿತಾಯ

ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡಿಗೆ ಸಂಬಂಧಿಸಿದಂತೆ, 1 ಮತಗಟ್ಟೆ ಯಿದ್ದು, 1434 ಮತದಾರರಿದ್ದು, ಈ ಪೈಕಿ 724 ಪುರುಷರು ಮತ್ತು 700 ಮಹಿಳಾ ಮತದಾರ ಪೈಕಿ 529 ಮಂದಿ ಪುರುಷರು, 505 ಮಂದಿ ಮಹಿಳೆಯರು ಸೇರಿ 1024 (ಶೇ. 71.41 )ಮತದಾನವಾಗಿದೆ.

ಮತದಾನದ ನಂತರ ಮತದಾನವಾದ ವಿದ್ಯುನ್ಮಾನ ಮತಯಂತ್ರಗಳನ್ನು ಆಯಾ ತಾಲೂಕು ಕೇಂದ್ರದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಬಂದೋಬಸ್ತ್ ನೊಡನೆ ಸುರಕ್ಷಿತವಾಗಿದೆ. ನ. 14 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯವು ಆಯಾ ತಾಲೂಕು ಕೇಂದ್ರದಲ್ಲಿ ನಡೆಸಲಾ ಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.

click me!