ಚಾಮರಾಜನಗರ: ಗಂಡು ಮಗುವಿಗೆ ನೆಹರು ಹೆಸರು ನಾಮಕರಣ

By Kannadaprabha NewsFirst Published Nov 15, 2019, 3:06 PM IST
Highlights

ಚಾಮರಾಜನಗರದಲ್ಲಿ ನ. 14ರಂದು ಹುಟ್ಟಿದ 8 ಮಕ್ಕಳಿಗೆ ವಿಶೇಷ ಕೊಡುಗೆಯನ್ನು ನೀಡುವ ಜೊತೆಗೆ ಇಬ್ಬರು ಗಂಡು ಮಗುವಿಗೆ ನೆಹರು ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ. 

ಚಾಮರಾಜನಗರ(ನ.15): ಜವಾಹರಲಾಲ್‌ ನೆಹರು ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ಚಾಮರಾಜನಗರದಲ್ಲಿ ನ. 14ರಂದು ಹುಟ್ಟಿದ 8 ಮಕ್ಕಳಿಗೆ ವಿಶೇಷ ಕೊಡುಗೆಯನ್ನು ನೀಡುವ ಜೊತೆಗೆ ಇಬ್ಬರು ಗಂಡು ಮಗುವಿಗೆ ನೆಹರು ಎಂಬ ಹೆಸರನ್ನು ನಾಮಕರಣ ಮಾಡುವ ಮೂಲಕ ವಿಶಿಷ್ಟವಾದ ಕಾರ್ಯಕ್ರಮವನ್ನು ನಗರದ ಜಿಲ್ಲಾ ಅಸ್ಪತ್ರೆಯಲ್ಲಿ ಅಚರಣೆ ಮಾಡಲಾಯಿತು.

ಭಾರತ್‌ ಯುವ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಜಿಲ್ಲಾ ಅಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಣೆ ನಡೆಯಿತು.

ರಾಜ್ ಸಹೋದರಿ ನಾಗಮ್ಮ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ನ. 14ರಂದು ಜನಿಸಿದ 8 ಮಕ್ಕಳಿಗೂ ಸಹ ಬೇಬಿ ಕಿಟ್‌ ನೀಡಲಾಯಿತು. ತಾಯಿಂದಿಗೆ ಗುಲಾಬಿ ಗಿಡ, ಹಣ್ಣು ಹಂಪಲು, ಉಳಿತಾಯ ಗೋಲಕವನ್ನು ಸಂಸ್ಥೆಯ ಅಧ್ಯಕ್ಷ ಎಲ್‌.ಸುರೇಶ್‌, ರಾಜಯೋಗಿನಿ ಬಿ.ಕೆ. ದಾನೇಶ್ವರಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್‌, ಎಸ್‌ಬಿಐ ಮ್ಯಾನೇಜರ್‌ ವೆಂಕಟರಾಜು, ಬಿವಿಎಸ್‌ ಪ್ರತಿಷ್ಠಾನದ ಅಧ್ಯಕ್ಷ ಬಾಬು, ಡಾ. ಸುರೇಂದ್ರಕುಮಾರ್‌ ವಿತರಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಲ್‌. ಸುರೇಶ್‌, ಮಕ್ಕಳು ದೇವರ ಸಮಾನ. ಚಿಕ್ಕನಿಂದಲೇ ಮಕ್ಕಳಿಗೆ ಸಂಸ್ಕಾರ ಮತ್ತು ಗುರು ಹಿರಿಯ ಬಗ್ಗೆ ಗೌರವ ಭಾವನೆಯನ್ನು ಮೂಡಿಸಬೇಕು. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ತಂದೆ, ತಾಯಿ ಮತ್ತು ಸಮಾಜದ ಜವಾಬ್ದಾರಿ ಇದೆ. ಮಕ್ಕಳ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವರ ಭವಿಷ್ಯವನ್ನು ಉತ್ತಮಗೊಳಿಸಬೇಕು ಎಂದಿದ್ದಾರೆ.

ಚಾಮರಾಜನಗರ: ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತ

ರಾಜಯೋಗಿನಿ ಬಿ.ಕೆ. ದಾನೇಶ್ವರಿ ಮಾತನಾಡಿ, ಮಕ್ಕಳು ಭಗವಂತನ ಪ್ರೇರಣೆಯಾಗಿದೆ. ನಮ್ಮ ಹಿರಿಯರು ಮಕ್ಕಳಲ್ಲಿ ದೇವರನ್ನು ಕಾಣು ಎನ್ನುತ್ತಿದ್ದರು. ಅದರೆ, ಜವಾಹರಲಾಲ್‌ ನೆಹರು ಅವರಿಗೆ ಮಕ್ಕಳ ಬಗ್ಗೆ ಹೆಚ್ಚು ಪ್ರೀತಿ ಇತ್ತು. ಆದ್ದರಿಂದ ಅವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು. ಅವರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಿ ಎಂದು ಹೇಳಿದ್ದರು. ಅದರಂತೆ ನ. 14 ರಾಷ್ಟಾ್ರದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಓದಿನ ಜೊತೆಗೆ ಇತರೆ ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ರೂಢಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದಿದ್ದಾರೆ.

ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್‌ ವೆಂಕಟರಾಜು ಅವರು ಮಗುವಿನ ತಾಯಿಂದಿರಿಗೆ ಗೋಲಕವನ್ನು ನೀಡುವ ಮೂಲಕ ಇಂದಿನಿಂದ ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದನ್ನು ರೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

ಕೋಲಾರ: ಒಂದೇ ಕುಟುಂಬದ ಮೂವರ ಮೇಲೆ ಮಾರಣಾಂತಿಕ ಹಲ್ಲೆ

ಕಾರ್ಯಕ್ರಮದಲ್ಲಿ ಬಿ.ಕೆ. ಆರಾಧ್ಯ, ಶಾಂಭವಿ, ಅಸ್ಪತ್ರೆಯ ಶುಶ್ರೂಷಕರು ಪೋಷಕರು ಭಾಗವಹಿಸಿದ್ದರು.

click me!