* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ
* ಸರಣಿಯ 10ನೇ ಸಂಚಿಕೆಯಲ್ಲಿ ಕಾಜಲ್ ಸಿಂಗ್(Kajal Singh) ಜೊತೆ ಸಂವಾದ
* ಮೂರೂ ಬಾರಿ ಪ್ರಿಲಿಮ್ಸ್‌ನಲ್ಲಿ ಫೇಲ್, ನಾಲ್ಕನೇ ಪ್ರಯತ್ನದಲ್ಲಿ UPSC ಟಾಪರ್ ಆದ ಕಾಜಲ್ ಸಿಂಗ್(Kajal Singh)
ನವದೆಹಲಿ(ಅ.21): ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್ ನ್ಯೂಸ್(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ ಸರಣಿಯ 10ನೇ ಸಂಚಿಕೆಯಲ್ಲಿ, ಉತ್ತರ ಪ್ರದೇಶದ(Uttar Pradesh) ಬಿಜ್ನೋರ್ ಜಿಲ್ಲೆಯ ಫತೇಪುರ್ ಕಲಾನ್ ನಿವಾಸಿಯಾದ ಕಾಜಲ್ ಸಿಂಗ್(Kajal Singh) ಅವರ ಸಂದರ್ಶನ ನೀಡಲಾಗಿದೆ. ಅವರು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಗೆ ತಯಾರಿ ಮುಂದುವರೆಸಿದರು. ಪ್ರತಿಯೊಂದು ಬಾರಿ ಹಿಂದಿಗಿಂತ ಹೆಚ್ಚು ಶ್ರಮ ವಹಿಸಿದರು. ಆದರೆ ಸತತ ಮೂರು ವರ್ಷಗಳ ಕಾಲ ಅವರು ಪ್ರಿಲಿಮ್ಸ್ ಪರೀಕ್ಷೆಯಲ್ಲೇ ಪಾಸಾಗಲು ಆಗಿರಲಿಲ್ಲ. ಆದರೆ ಅವರು ಪ್ರಯತ್ನ ಬಿಡಲಿಲ್ಲ. ನಿಮ್ಮ ಮುಂದೆ ಗುರಿ ದೊಡ್ಡದಾಗಿದ್ದರೆ, ನೀವು ಆ ದಿಕ್ಕಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರೆ, ಒಂದು ದಿನ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಎಂಬುವುದು ಕಾಜಲ್ ನಂಬಿಕೆ. ಇದೇ ಅವರ ಬದುಕಿನಲ್ಲಿ ನಡೆದಿದೆ. ಯುಪಿಎಸ್‌ಸಿ ಪರೀಕ್ಷೆಯ ನಾಲ್ಕನೇ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಕೇಡರ್ ಪಡೆಯುವ ನಿರೀಕ್ಷೆಯಿದೆ.
ಉದ್ಯೋಗ ಬಿಟ್ಟು UPSC ಬರೆದ ವಿಧು ಶೇಖರ್‌ಗೆ ಶಾಕ್, 4ನೇ ಪ್ರಯತ್ನದಲ್ಲಿ ಗೆಲುವು!
ತಂದೆ ರೈತ, ಮಗಳನ್ನೇ ಮಗನಂತೆ ಓದಿಸಿದ್ರು
ಕಾಜಲ್ ತನ್ನ ಆರಂಭಿಕ ಶಿಕ್ಷಣವನ್ನು ಬಿಜ್ನೋರ್‌ನ ಸೇಂಟ್ ಮೇರೀಸ್ ಶಾಲೆಯಲ್ಲಿ ಮಾಡಿದರು. ಇದರ ನಂತರ, ಆಕೆ ವನಸ್ಥಾಲಿ ರಾಜಸ್ಥಾನಕ್ಕೆ ಹೋದರು ಮತ್ತು ಅಲ್ಲಿಂದ 10 ನೇ ವರೆಗೂ ಅಧ್ಯಯನವನ್ನು ಪೂರೈಸಿ, ಬಳಿಕ ಕೋಟಾದಲ್ಲಿ 12 ನೇ ತರಗತಿವರೆಗೆ ಓದಿದರು. ಅವರ ತಂದೆ ದೇವೇಂದ್ರ ಸಿಂಗ್ ಕೃಷಿಕ ಮತ್ತು ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಕುಸುಮ್ ದೇವಿ ಗೃಹಿಣಿ. ಅವರ ತಂಗಿ ಅದಿತಿ ಸಿಂಗ್ ಪದವಿ ಮಾಡುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ದೇವೇಂದ್ರ ಸಿಂಗ್ ಅವರಿಗೆ ಯಾವುದೇ ಮಗನಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣದಿಂದ ಅವರು ತಮ್ಮ ಮಗಳನ್ನು ಮಗನಂತೆ ಬೆಳೆಸಿ, ಓದಿಸಿದ್ರು. ಮಗಳು ಕೂಡ ತಂದೆಗೆ ನಿರಾಸೆಯುಂಟು ಮಾಡಲಿಲ್ಲ. ಅವರ ಹೆಸರನ್ನು ಜಿಲ್ಲೆಯಲ್ಲಿ ಬೆಳಗುವಂತೆ ಮಾಡಿದಳು. ಸ್ಕೆಚಿಂಗ್, ಡೈರಿ ಬರವಣಿಗೆ ಮತ್ತು ಶಾಸ್ತ್ರೀಯ ನೃತ್ಯ ಕಾಜಲ್ ಅವರ ಹವ್ಯಾಸವಾಗಿದೆ.
ಅತ್ತ ತಂದೆ ನಿಧನ, ಇತ್ತ UPSC ಸಂದರ್ಶನ: ಕನಸು ನನಸಾಗಿಸಿದ ದಿವ್ಯಾಂಶು!
2019 ರ ಪರೀಕ್ಷೆಯಲ್ಲಿ 13 ನೇ Rank ಪಡೆದಿದ್ದಾರೆ
ದೆಹಲಿಯ ಐಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ನಂತರ, ಕಾಜಲ್ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಕೆಲವು ದಿನಗಳವರೆಗೆ ತರಬೇತಿ, ನಂತರ ಸ್ವಯಂ ಅಧ್ಯಯನ. 2017, 2018 ಮತ್ತು 2019 ರ ಯುಪಿಎಸ್‌ಸಿ ಪರೀಕ್ಷೆಗಳನ್ನು ಅವರು ಎದುರಿಸಿದರು. ಆದರೆ ಈ ಮೂರೂ ಪ್ರಯತ್ನಗಳಲ್ಲಿ ಅವರು ಪೂರ್ವಭಾವಿ ಪರೀಕ್ಷೆಯಲ್ಲಿ ಯಶಶ್ವಿಯಾಗಲಿಲ್ಲ. ಯುಪಿಎಸ್‌ಸಿ 2020 ರ ನಾಲ್ಕನೇ ಪ್ರಯತ್ನದಲ್ಲಿ ಅವರು 202 ನೇ Rank ಪಡೆದರು. ಈ ಸಂಪೂರ್ಣ ಸಿದ್ಧತೆಯು ಏರಿಳಿತಗಳಿಂದ ಕೂಡಿದೆ ಎಂದು ಅವರು ಹೇಳುತ್ತಾರೆ. ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟ ಕೂಡ ಒಂದು ಅಂಶವಾಗಿದೆ. ಅಷ್ಟೇ ಅಲ್ಲ, ಅವರು 2019 ರಲ್ಲಿ ಭಾರತೀಯ ಇಂಜಿನಿಯರಿಂಗ್ ಸರ್ವೀಸ್ (ಐಇಎಸ್) ಪರೀಕ್ಷೆಯಲ್ಲಿ 13 ನೇ Rank ಪಡೆದಿದ್ದರು. ಅವರು 2020 ರಲ್ಲಿ UPPCS ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದು, 46 ನೇ Rank ಪಡೆದರು. ಈ ಮೂಲಕ ಡೆಪ್ಯುಟಿ ಕಲೆಕ್ಟರ್ ಹುದ್ದೆಯನ್ನು ಪಡೆದರು. ಇದಾದ ಬಳಿಕ ಭಾರತೀಯ ಎಂಜಿನಿಯರಿಂಗ್ ಸೇವೆಯೇ ಉತ್ತಮವೆಂದು ಪರಿಗಣಿಸಿದ ಅವರು ಪ್ರಸ್ತುತ ಅವರು ತರಬೇತಿ ಪಡೆಯುತ್ತಿದ್ದಾರೆ.
ಇದು ನಾಗರಿಕ ಸೇವೆಗೆ ಬರಲು ಪ್ರೇರಣೆ ಏನು?
ನನ್ನ ಅಜ್ಜ ದಿವಂಗತ ಗಂಭೀರ್ ಸಿಂಗ್ ಬಾಲ್ಯದಿಂದಲೇ ಯಾವತ್ತೂ ತಮಾಷೆ ಎಂಬಂತೆ ನನ್ನ ಮೊಮ್ಮಗಳು ಎಸ್‌ಡಿಎಂ-ಡಿಎಂ ಆಗುತ್ತಾಳೆ ಎನ್ನುತ್ತಿದ್ದರೆಂದು ಕಾಜಲ್ ಹೇಳಿದ್ದಾರೆ. ಈ ವಿಚಾರ ನನ್ನ ಮನದಲ್ಲಿತ್ತು. ಕಾಲೇಜಿನ ನಂತರ, ನಾಗರಿಕ ಸೇವೆ ಸಮಾಜದಲ್ಲಿ ಒಂದು ದೊಡ್ಡ ಬದಲಾವಣೆ ತರಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಯಲು ಅವಕಾಶ ಸಿಕ್ಕಿದಾಗ. ಅದುವೇ ನನಗೆ ಪ್ರೇರಣೆಯಾಯಿತು. ಆಡಳಿತಾತ್ಮಕ ಸೇವೆಯಲ್ಲಿನ ಕೆಲಸದ ಪರಿಣಾಮವು ನೇರವಾಗಿ ಗೋಚರಿಸುತ್ತದೆ ಎಂದು ಅವರು ಹೇಳುತ್ತಾರೆ.
ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ!
ಸಾಮಾಜಿಕ ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಸಿ
ಇದು ಸಾಮಾಜಿಕ ಮಾಧ್ಯಮದ ಬಳಕೆದಾರರ ಮೇಲೆ ಆತ ಅದನ್ನು ಹೇಗೆ ಬಳಸಬೇಕೆಂಬುವುದು ಅವಲಂಭಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಪರೀಕ್ಷೆಯ ತಯಾರಿ ಆನ್‌ಲೈನ್ ಮಾಧ್ಯಮವನ್ನು ತಲುಪಿದೆ. ಹೆಚ್ಚಿನ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಪಡೆಯಲಾಗುತ್ತದೆ. ಇದು ಜೀವನದ ಒಂದು ಪ್ರಮುಖ ಭಾಗವಾಗಿ ಮಾರ್ಪಟ್ಟಿದೆ. ನಾನು ಅದನ್ನು ನಿರ್ಲಕ್ಷಿಸುವುದಲ್ಲ, ಅಥವಾ ನಿಮ್ಮನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ಎನ್ನುತ್ತಿಲ್ಲ. ಆದರೆ ಸಾಮಾಜಿಕ ಮಾಧ್ಯಮವನ್ನು ಧನಾತ್ಮಕವಾಗಿ ಬಳಸಿ. ಇದು ನಮ್ಮ ಸಿದ್ಧತೆಗೆ ಸಹಾಯ ಮಾಡುತ್ತದೆ ಮತ್ತು ಗಮನವನ್ನು ಸೆಳೆಯದಂತೆ ಹಿಡಿತ ಹೊಂದಿರಬೇಕು. ಒಬ್ಬ ವ್ಯಕ್ತಿಯು ಅವನು/ಅವಳು ಏನು ಬಳಸುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
1 ಹಾಗೂ 2ನೇ ಬಾರಿ ವಿಫಲ, ಮರಳಿ ಪ್ರಯತ್ನಿಸಿದ ವರುಣಾ UPSC ಟಾಪರ್ ಆಗಿದ್ದು ಹೀಗೆ!
ಯಶಸ್ಸಿನಲ್ಲಿ ಕುಟುಂಬ ಮತ್ತು ಸ್ನೇಹಿತರ ಪ್ರಮುಖ ಕೊಡುಗೆ
ಕಾಜಲ್ ಅವರ ಕುಟುಂಬ ಸದಸ್ಯರು ಆಕೆಯ ತಯಾರಿಗೆ ಸಾಕಷ್ಟು ಬೆಂಬಲ ನೀಡಿದರು. 2017 ರಲ್ಲಿ ಅವರ ಪದವಿ ಪೂರ್ಣಗೊಂಡಾಗ ಅವರ ಕುಟುಂಬದಿಂದ ಯಾವುದೇ ಕೆಲಸಕ್ಕೆ ಸೇರಲು ಯಾವುದೇ ಒತ್ತಡ ಹಾಕಲಿಲ್ಲ. ಅವರು ಕಾಜಲ್‌ಗೆ ಪರೀಕ್ಷೆಗೆ ತಯಾರಿ ಮಾಡಲು ಸಾಕಷ್ಟು ಸಮಯವನ್ನು ನೀಡಿದರು. ಕಾಜಲ್ ತನ್ನ ಯಶಸ್ಸಿನಲ್ಲಿ ತನ್ನ ಜೊತೆಯಲ್ಲಿ ಪರೀಕ್ಷೆಗೆ ತಯಾರಿ ಮಾಡುವ ಸ್ನೇಹಿತರ ಕೊಡುಗೆಯನ್ನು ಪರಿಗಣಿಸಿದ್ದಾರೆ. ನಾವು ತಯಾರಿ ಮಾಡುವಾಗ, ನಮ್ಮೊಂದಿಗೆ ತಯಾರಾಗುವ ಸ್ನೇಹಿತರಿಂದ ನಾವು ಕಲಿಯುತ್ತೇವೆ ಎಂದು ಅವರು ಹೇಳುತ್ತಾರೆ. ಪ್ರತಿದಿನ ತಯಾರಿ ಸಮಯದಲ್ಲಿ ಅನೇಕ ತೊಂದರೆಗಳು ಬರುತ್ತವೆ. ನೀವು ಅವರ ಸಹಾಯವನ್ನು ಪಡೆಯುತ್ತೀರಿ ಮತ್ತು ಅವರು ನಿಮ್ಮ ಸಮಸ್ಯೆಯನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದಾರೆ.
ಯುವಕರಿಗೆ ಕೊಟ್ಟ ಸಂದೇಶವಿದು
ಮೊದಲು ನಮ್ಮ ಆಕಾಂಕ್ಷೆ ಬಹಳ ದೊಡ್ಡದಾಗಿರಬೇಕು ಎಂದು ಕಾಜಲ್ ಹೇಳುತ್ತಾರೆ. ನಾವು ಏನಾದರೂ ದೊಡ್ಡದನ್ನು ಮಾಡಲು ಯೋಚಿಸಿದರೆ ಮತ್ತು ದೊಡ್ಡದನ್ನು ಮಾಡಲು ನಿರ್ಧರಿಸಿದರೆ ಮಾತ್ರ ನಾವು ಆ ದಾರಿಯಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಲೇ ಇರುತ್ತೇವೆ, ಆಗ ನಾವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೇವೆ. ಎರಡನೆಯದಾಗಿ, ನಾವು ಏನು ಮಾಡಲು ಬಯಸುತ್ತೇವೆಯೋ ಅದಕ್ಕಾಗಿ ನಾವು ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು. ಇದು ಯಾರಿಗೂ ಸುಲಭದ ಮಾರ್ಗವಾಗಿರಲಿಲ್ಲ. ಪ್ರತಿಯೊಬ್ಬರೂ ವಿಭಿನ್ನ ರೀತಿಯ ತೊಂದರೆಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರೂ ಒಂದಿಲ್ಲೊಂದು ತೊಂದರೆ ಎದುರಿಸುತ್ತಾರೆ. ಆ ಕಷ್ಟಗಳನ್ನು ಸೋಲಿಸುವ ಮೂಲಕ ನೀವು ಮುಂದೆ ಸಾಗಬೇಕು. ಮೂರನೆಯ ವಿಷಯವೆಂದರೆ ನೀವು ಯಾವಾಗಲೂ ನಿಮ್ಮನ್ನು ಸ್ವಯಂ ಪ್ರೇರಣೆಯಿಂದ ಇಟ್ಟುಕೊಳ್ಳಬೇಕು. ವೈಫಲ್ಯ ನಿಮ್ಮ ಮುಂದೆ ಬರುತ್ತದೆ. ಅದನ್ನು ಕಲಿಕೆಯ ಅವಕಾಶವಾಗಿ ಪರಿಗಣಿಸಿ ಅದರಿಂದ ಕಲಿಯಿರಿ ಮತ್ತು ಮುಂದುವರಿಯಿರಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇದು ಹೆಚ್ಚು ಮಹತ್ವದ್ದಾಗಿದೆ ಏಕೆಂದರೆ ಈ ಪರೀಕ್ಷೆಯು ಅನಿಶ್ಚಿತತೆಗಳಿಂದ ಕೂಡಿದೆ. ಈ ಪರೀಕ್ಷೆಗೆ ಗಂಭೀರವಾಗಿ ತಯಾರಿ ನಡೆಸುತ್ತಿರುವ ಎಲ್ಲಾ ಆಕಾಂಕ್ಷಿಗಳು. ಪ್ರತಿಯೊಬ್ಬರ ಫಲಿತಾಂಶವು ಸಕಾರಾತ್ಮಕವಾಗಿರಬೇಕು ಎಂಬುದು ಅನಿವಾರ್ಯವಲ್ಲ. ಪರಿಶ್ರಮವನ್ನು ಮುಂದುವರಿಸಿ, ಕೆಲವೊಮ್ಮೆ ಫಲಿತಾಂಶವು ಸಕಾರಾತ್ಮಕವಾಗಿರುತ್ತದೆ.
ನಿರಾಶೆಯಿಂದ ಚೇತರಿಸಿಕೊಂಡ ನಂತರವೇ ಉತ್ತಮ ಪ್ರದರ್ಶನ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕಾಜಲ್ ಮೂರು ಪ್ರಯತ್ನಗಳಲ್ಲಿ ವಿಫಲರಾದರು, ಆದ್ದರಿಂದ ಅವರ ಫಲಿತಾಂಶವು ನಕಾರಾತ್ಮಕವಾಗಿದ್ದಾಗಲೆಲ್ಲಾ ಅವರು ನಿರಾಶೆಗೊಂಡರು. ಅವರು ಪರೀಕ್ಷೆಯಲ್ಲಿ ಪ್ರತಿ ಬಾರಿಯೂ ಕಷ್ಟಪಟ್ಟು ಅಧ್ಯಯನ ನಡೆಸಿದ್ದರು. ಪ್ರತೀ ಬಾರಿ ಹಿಂದಿನ ಬಾರಿಗಿಂತ ಹೆಚ್ಚು ಶ್ರಮವಹಿಸಿದೆ. ಮುಂದೆ ದೊಡ್ಡ ಗುರಿ ಇದ್ದಾಗ, ಅದನ್ನು ಸಾಧಿಸಲು, ಕಷ್ಟಗಳನ್ನು ಸೋಲಿಸಬೇಕು ಎಂದು ಕಾಜಲ್ ಹೇಳುತ್ತಾರೆ. ಈ ಬಾರಿ ಇಲ್ಲದಿದ್ದರೆ ಮುಂದಿನ ಬಾರಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಮತ್ತು ಅದೇ ಭರವಸೆಯಲ್ಲಿ ನೀವು ಹೆಚ್ಚು ಶ್ರಮವಹಿಸಬೇಕು ಎಂದು ನೀವು ನಿಮ್ಮನ್ನು ಪ್ರೇರೇಪಿಸಬೇಕು. ನಿರಾಶೆಯನ್ನು ಜಯಿಸುವುದು ಬಹಳ ಮುಖ್ಯ, ಆಗ ನಾವು ಮುಂದಿನ ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಈ ಪ್ರಯಾಣ ಎಲ್ಲರಿಗೂ ವಿಭಿನ್ನವಾಗಿದೆ ಎಂದು ಅವರು ಹೇಳುತ್ತಾರೆ. ವಿಭಿನ್ನ ರೀತಿಯ ಸಮಸ್ಯೆಗಳು ಎಲ್ಲರ ಮುಂದೆ ಬರುತ್ತವೆ. ಅವರಿಗೆ, ಇದು ಪ್ರಾಥಮಿಕ ಪರೀಕ್ಷೆಯಾಗಿತ್ತು ಎಂದಿದ್ದಾರೆ.
UPSC ಟಾಪರ್ ಆಗಿ 'ನಿನ್ನಿಂದಾಗಲ್ಲ' ಎಂದವರ ಬಾಯಿ ಮುಚ್ಚಿಸಿದ ಭಾನು ಪ್ರತಾಪ್!
ಅವರು ಬರುವ ಪರಿಸರ, ಅಧ್ಯಯನಕ್ಕೆ ಪೂರಕ ವಾತಾವರಣವಿಲ್ಲ
ಕಾಜಲ್ ಬಂದ ಪರಿಸರದಲ್ಲಿ ಹೆಚ್ಚಿನ ಅಧ್ಯಯನದ ವಾತಾವರಣ ಇರಲಿಲ್ಲ. ಆದರೆ ಅವರಿಗೆ ಕುಟುಂಬದಿಂದ ಸಂಪೂರ್ಣ ಬೆಂಬಲವಿತ್ತು. ಇದೇ ಅವರಿಗೆ ಪ್ರೇರಣೆಯಾಯ್ತು.