UPSC ನೇಮಕಾತಿ: ಕೇಂದ್ರದಲ್ಲಿ ಖಾಲಿ ಇರುವ 56 ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Oct 19, 2021, 4:03 PM IST

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುವ ಕೇಂದ್ರ ಲೋಕ ಸೇವಾ ಆಯೋಗ (Union Public Service Commission- UPSC)ವು 56 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 28 ಕೊನೆಯ ದಿನವಾಗಿದೆ. ಆಸಕ್ತರ ಸಂಸ್ಥೆಯ ಅಧಿಕೃತ  ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು.


ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC )ವು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕಾರ್ಯದರ್ಶಿ ಜೂನಿಯರ್ ಟೈಮ್ ಸ್ಕೇಲ್ (JTS) ಹಾಗೂ ಸೀನಿಯರ್ ಗ್ರೇಡ್ ಸರ್ವೀಸ್ ಸೇರಿ ಒಟ್ಟು 56 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಯುಪಿಎಸ್‌ಸಿ ಕರೆದಿರುವ ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021ರ ಅಕ್ಟೋಬರ್ 28 ಕೊನೆಯ ದಿನವಾಗಿದೆ. ಹಾಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಡ ಮಾಡದೇ ಅರ್ಜಿಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ಜಾಲತಾಣವಾದ upsconline.nic.in ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. 

Tap to resize

Latest Videos

undefined

BELನಲ್ಲಿ ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ 

ಡೇಟಾ ಪ್ರೊಸೆಸಿಂಗ್ ಅಸಿಸ್ಟೆಂಟ್ (Data Processing Assistant) ಹುದ್ದೆ- 01, ಪ್ರೈವೇಟ್ ಸೆಕ್ರೆಟರಿ ಇನ್ ಕಮಿಷನ್ ಫಾರ್ ಅಗ್ರಿಕಲ್ಚರಲ್ ಕಾಸ್ಟ್ಸ್ ಮತ್ತು ಪ್ರೈಸ್ (Private Secretary in Commission for Agricultural Costs & Prices -CACP))- 01 ಹುದ್ದೆ, ಸೀನಿಯರ್ ಗ್ರೇಡ್ ಆಫ್ ಇಂಡಿಯನ್ ಇನ್ಫಾರ್ಮೇಶನ್ ಸರ್ವಿಸ್ (Senior Grade of Indian Information Service)-  20 ಹುದ್ದೆಗಳು,  ಜೂನಿಯರ್ ಟೈಮ್ ಸ್ಕೇಲ್ (Junior Time Scale - JTS)- 29 ಹುದ್ದೆ, ಯೂತ್ ಆಫೀಸರ್ ಇನ್ ನ್ಯಾಷನಲ್ ಸರ್ವಿಸ್ ಸ್ಕೀಮ್ ಅರ್ಗನೈಸೇಷನ್ (Youth Officer in National Service Scheme Organization) -05  ಹುದ್ದೆ ಸೇರಿ ಒಟ್ಟು 56 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
     
ಡೇಟಾ ಪ್ರೊಸೆಸಿಂಗ್ ಅಸಿಸ್ಟೆಂಟ್ (Data Processing Assistant) ಅಭ್ಯರ್ಥಿಗಳು ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಮಾಹಿತಿ ತಂತ್ರಜ್ಞಾನ ಅಥವಾ ಕಂಪ್ಯೂಟರ್ ಅಥವಾ ಬಿಒ ಪದವಿ ಮಾಡಿರಬೇಕು. ಅಥವಾ ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಕಂಪ್ಯೂಟರ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದಿರಬೇಕು. ಇನ್ನು ಡಿಕ್ಟೇಷನ್: 10 ನಿಮಿಷಗಳು @ ನಿಮಿಷಕ್ಕೆ 100 ಪದಗಳು. (iii) ಪ್ರತಿಲೇಖನ: 40 ನಿಮಿಷಗಳು (ಇಂಗ್ಲಿಷ್), 55 ನಿಮಿಷಗಳು (ಹಿಂದಿ) ಭಾಷೆಯಲ್ಲಿ ಉತ್ತರ ಬರೆಯಬೇಕು. ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸಿನ ಮಿತಿ 30 ವರ್ಷ ಆಗಿರುತ್ತದೆ.

11 ಬ್ಯಾಂಕುಗಳ 7855 ಹುದ್ದೆಗಳಿಗೆ IBPS ನೇಮಕಾತಿ, ಅರ್ಜಿ ಸಲ್ಲಿಸಿ 

ಖಾಸಗಿ ಕಾರ್ಯದರ್ಶಿ (Private Secretary) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿರಬೇಕು. ವಯಸ್ಸಿನ ಮಿತಿ 35 ವರ್ಷ ಆಗಿರುತ್ತದೆ. ಹಿರಿಯ ಶ್ರೇಣಿ (senior grade)ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಪತ್ರಿಕೋದ್ಯಮ / ಸಮೂಹ ಸಂವಹನದಲ್ಲಿ ಡಿಪ್ಲೊಮಾ / ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು.  

ಜೂನಿಯರ್ ಟೈಮ್ ಸ್ಕೇಲ್ (Junior time scale -JTS) ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆಯದಿರಬೇಕು. ಸಾಮಾಜಿಕ ಕೆಲಸ ಅಥವಾ ಕಾರ್ಮಿಕ ಕಲ್ಯಾಣ ಅಥವಾ ಕೈಗಾರಿಕಾ ಸಂಬಂಧಗಳು ಅಥವಾ ಸಿಬ್ಬಂದಿ ನಿರ್ವಹಣೆ ಅಥವಾ ಕಾರ್ಮಿಕ ಕಾನೂನಿನಲ್ಲಿ ಡಿಪ್ಲೊಮಾ ಮಾಡಿರಬೇಕು. ಇವರ ಗರಿಷ್ಟ ವಯೋಮಿತಿ 35 ವರ್ಷ. ಯುವ ಅಧಿಕಾರಿ ( youth officer) ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಮತ್ತು ಎರಡು ವರ್ಷಗಳ ಅನುಭವ ಹೊಂದಿರಬೇಕು. 

FSSAIನಲ್ಲಿ 223 ಹುದ್ದೆಗಳಿಗೆ ನೇರ ನೇಮಕಾತಿ 

ಜನರಲ್/ ಒಬಿಸಿ/ ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳಿಗೆ ಅರ್ಜಿಯ ಶುಲ್ಕ  25 ರೂ. ಪಾವತಿಸಬೇಕು. ಇನ್ನು SC/ ST/ PwBD/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಕಂಪ್ಯೂಟರ್ ಮೂಲಕವೇ ಅಭ್ಯರ್ಥಿಗಳು ಪರೀಕ್ಷೆ ಎದುರಿಸಬೇಕಾಗುತ್ತದೆ. ಯುಪಿಎಸ್ ಸಿ (UPSC) ಸಂದರ್ಶನದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ.

click me!