ಸ್ಟಾಫ್ ಸೆಲೆಕ್ಷನ್ ಕಮಿಷನ್ 26146 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ

By Suvarna NewsFirst Published Dec 22, 2023, 4:12 PM IST
Highlights

ಸ್ಟಾಫ್ ಸೆಲೆಕ್ಷನ್ ಕಮಿಷನ್ ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 26146  ಕಾನ್ಸ್‌ಟೇಬಲ್ (ಜಿಡಿ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ ಎಸ್‌ ಸಿ ) ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿ ಎ ಪಿ ಎಫ್‌ ), ಎಸ್‌ ಎಸ್‌ ಎಫ್‌ ಮತ್ತು ರೈಫಲ್‌ಮ್ಯಾನ್ (ಜಿಡಿ), ಗಡಿ ಭದ್ರತಾ ಪಡೆ , ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ಬಲ್‌ , ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್, ಅಸ್ಸಾಂ ರೈಫಲ್ಸ್, ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ ಗಳಲ್ಲಿ ಖಾಲಿ ಇರುವ ಕಾನ್ಸ್‌ಟೇಬಲ್ (ಜಿಡಿ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಕಾನ್ಸ್‌ಟೇಬಲ್‌ ಹುದ್ದೆ ನೇಮಕಾತಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸತ್ಗುತ್ತದೆ. ಜನರಲ್ ಇಂಟೆಲಿಜೆನ್ಸ ಮತ್ತು ರೀಸನಿಂಗ್, ಸಾಮಾನ್ಯ ಜ್ಞಾನ, ಸಾಮಾನ್ಯ ಅರಿವು, ಪ್ರಾಥಮಿಕ ಗಣಿತ, ಇಂಗ್ಲೀಷ್/ ಹಿಂದಿ ವಿಷಯಗಳಿಗೆ ಸಂಬಂಧಿಸಿದ 80 ಪ್ರಶ್ನೆಗಳನ್ನು ಒಳಗೊಂಡಿರುವ ಒಂದು ವಸ್ತುನಿಷ್ಠ ಮಾದರಿಯ ಕಂಪ್ಯೂಟರ್ ಆಧಾರಿತ ಪರೀಕ್ಷೆಯು 160 ಅಂಕಗಳಿಗೆ ಒಂದು ಗಂಟೆ ಅವಧಿಯಲ್ಲಿ ನಡೆಸಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.50 ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-12-2023.

ಗಗನಸಖಿ ಆಗೋ ಕನಸು ನಿಮ್ಮದೇ, ಏರ್‌ ಹೋಸ್ಟೆಸ್‌ ಆಗುವುದು ಹೇಗೆ?

ಹುದ್ದೆಯ ವಿವರ

ಕಾನ್ಸ್‌ಟೇಬಲ್ (ಜನರಲ್‌ ಡ್ಯೂಟಿ)

26146 ಹುದ್ದೆಗಳು ( ವಿಭಾಗವಾರು ಹುದ್ದೆಗಳ ವರ್ಗೀಕರಣ ಹೀಗಿದೆ)

1. ಗಡಿ ಭದ್ರತಾ ಪಡೆ (ಬಿ ಎಸ್‌ ಎಫ್)

6174 ಹುದ್ದೆ

2. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿ ಎ ಪಿ ಎಫ್‌ )

11025 ಹುದ್ದೆ

3. ಕೇಂದ್ರೀಯ ಮೀಸಲು ಪೊಲೀಸ್ ಪಡೆ ( ಸಿ ಆರ್‌ ಪಿ ಎಫ್)

3337 ಹುದ್ದೆ

4. ಸಶಸ್ತ್ರ ಸೀಮಾ ಬಲ್‌ (ಎಸ್‌ ಎಸ್‌ ಬಿ)

635 ಹುದ್ದೆ

5. ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐ ಟಿ ಬಿ ಪಿ)

3189 ಹುದ್ದೆ

6. ಅಸ್ಸಾಂ ರೈಫಲ್ಸ್ (ಎ ಆರ್)

1490 ಹುದ್ದೆ

7. ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (ಎಸ್‌ ಎಸ್‌ ಎಫ್)‌

296 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು

ಪ್ರಾರಂಭ ದಿನಾಂಕ

24-11-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು

ಕೊನೆಯ ದಿನಾಂಕ

31-12-2023

ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ

ಫೆಬ್ರವರಿ-ಮಾರ್ಚ್, 2024

ವಯಸ್ಸಿನ ಮಿತಿ (01-01-2024 ರಂತೆ)

ಕನಿಷ್ಠ ವಯಸ್ಸು

18 ವರ್ಷಗಳು

ಗರಿಷ್ಠ ವಯಸ್ಸು

23 ವರ್ಷಗಳು

ಅರ್ಜಿ ಶುಲ್ಕ

ಎಲ್ಲಾ ಅಭ್ಯರ್ಥಿಗಳಿಗೆ

ರು. 100

ಮಹಿಳೆಯರಿಗೆ/ ಎಸ್‌ ಸಿ/ ಎಸ್‌ ಟಿ/

ಮಾಜಿ ಸೈನಿಕ ಅಭ್ಯರ್ಥಿಗಳಿಗೆ

ಅರ್ಜಿ ಶುಲ್ಕ ಇಲ್ಲ

ವೇತನ ಶ್ರೇಣಿ

ರು. 18,000 ರಿಂದ 69,100

ಬ್ಯಾಂಕ್‌ ಕೆಲಸ ಹುಡುಕುತ್ತಿದ್ದೀರಾ? ಬ್ಯಾಂಕ್ ಆಫ್ ಬರೋಡಾನಲ್ಲಿ 250 ಸೀನಿಯರ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ

1.ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2.ಎನ್‌ಸಿಸಿ ಪ್ರಮಾಣ ಪತ್ರ ಹೊಂದಿರುವವರಿಗೆ ವಿಶೇಷ ಮಾನ್ಯತೆಯನ್ನು ಬೋನಸ್ ಅಂಕಗಳ ರೂಪದಲ್ಲಿ ಈ ಕೆಳಗಿನ ಮಾಪಕಗಳಲ್ಲಿ ನೀಡಲಾಗುವುದು.

* ಎನ್‌ ಸಿ ಸಿ "ಸಿ" ಪ್ರಮಾಣಪತ್ರ ಹೊಂದಿರುವವರಿಗೆ ಶೇಕಡಾ 5 ಅಂಕ ನೀಡಲಾಗುತ್ತದೆ.

* ಎನ್‌ ಸಿ ಸಿ "ಬಿ" ಪ್ರಮಾಣಪತ್ರ ಹೊಂದಿರುವವರಿಗೆ ಶೇಕಡಾ 3 ಅಂಕ ನೀಡಲಾಗುತ್ತದೆ.

* ಎನ್‌ ಸಿ ಸಿ "ಎ" ಪ್ರಮಾಣಪತ್ರ ಹೊಂದಿರುವವರಿಗೆ ಶೇಕಡಾ 2 ಅಂಕ ನೀಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳು

ಪರೀಕ್ಷೆಯು ಎಲ್ಲಾ ರಾಜ್ಯಗಳ ಆಯ್ದ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಹಾಗೂ ಕರ್ನಾಟಕದಲ್ಲಿ ಬೆಳಗಾವಿ,

ಬೆಂಗಳೂರು, ಹುಬ್ಬಳ್ಳಿ , ಕಲಬುರಗಿ, ಮಂಗಳೂರು, ಮೈಸೂರು , ಶಿವಮೊಗ್ಗ , ಉಡುಪಿ ಕೇಂದ್ರಗಳಲ್ಲಿ ನಡೆಲಾಗುತ್ತದೆ.

ಪರೀಕ್ಷೆಯ ಯೋಜನೆ

1. ಕಂಪ್ಯೂಟರ್ ಆಧಾರಿತ ಪರೀಕ್ಷೆ

ಜನರಲ್ ಇಂಟೆಲಿಜೆನ್ಸ ಮತ್ತು ರೀಸನಿಂಗ್, ಸಾಮಾನ್ಯ ಜ್ಞಾನ, ಸಾಮಾನ್ಯ ಅರಿವು, ಪ್ರಾಥಮಿಕ ಗಣಿತ, ಇಂಗ್ಲೀಷ್/ ಹಿಂದಿ ವಿಷಯಗಳಿಗೆ ಸಂಬಂಧಿಸಿದ 80 ಪ್ರಶ್ನೆಗಳನ್ನು ಒಳಗೊಂಡಿರುವ ಒಂದು ವಸ್ತುನಿಷ್ಠ ಮಾದರಿಯ ಕಂಪ್ಯೂಟರ್ ಆಧಾರಿತ ಪರೀಕ್ಷೆಯು 160 ಅಂಕಗಳಿಗೆ ಒಂದು ಗಂಟೆ ಅವಧಿಯಲ್ಲಿ ನಡೆಸಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.50 ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

2. ಶಾರೀರಿಕ ದಕ್ಷತೆ ಪರೀಕ್ಷೆ

ಪುರುಷ ಅಭ್ಯರ್ಥಿಗಳು 5 ಕಿ.ಮೀ 24 ನಿಮಿಷಗಳಲ್ಲಿ ಓಟವನ್ನು ಮುಗಿಸಬೇಕು ಮತ್ತು ಸ್ರ್ತೀ ಅಭ್ಯರ್ಥಿಗಳು 1.6 ಕಿಮೀ 8 ನಿಮಿಷಗಳಲ್ಲಿ ಓಟವನ್ನು ಮುಗಿಸಬೇಕು.

3. ಶಾರೀರಿಕ ಪ್ರಮಾಣಿತ ಪರೀಕ್ಷೆ

ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ ನ ಭೌತಿಕ ಮಾನದಂಡಗಳು ಹೀಗಿವೆ

ಅ) ಪುರುಷ ಅಭ್ಯರ್ಥಿಗಳು 170 ಸೆಂಮೀ ಎತ್ತರ ಹೊಂದಿರಬೇಕು.

ಆ) ಸ್ರ್ತೀ ಅಭ್ಯರ್ಥಿಗಳು 157 ಸೆಂಮೀ ಎತ್ತರ ಹೊಂದಿರಬೇಕು.

ಇ) ಪುರುಷ ಅಭ್ಯರ್ಥಿಗಳ ಎದೆಯ ಸುತ್ತಳತೆ 80-85 ಸೆಂ ಮೀ ಇರಬೇಕು.

ಈ) ವೈದ್ಯಕೀಯ ಮಾನದಂಡಗಳ ಪ್ರಕಾರ ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ ತೂಕ ಇರಬೇಕು.

4. ಈ ಮೇಲಿನ ಎಲ್ಲಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳು ಈ ಮೇಲ್ಕಂಡ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: 

 

click me!