ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಹಂಬಲ ನಿಮಗಿದೆಯೇ? ಈಗಲೇ 1967 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ

By Kannadaprabha News  |  First Published Dec 10, 2023, 12:07 PM IST

ರೈಲ್ವೆ ನೇಮಕಾತಿ ಘಟಕವು ಉತ್ತರ ಮಧ್ಯ ರೈಲ್ವೆಯಲ್ಲಿ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ ಆಕ್ಟ್ ಅಡಿಯಲ್ಲಿ ಬರುವ 1967 ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.


ರೈಲ್ವೆ ನೇಮಕಾತಿ ಘಟಕವು ಉತ್ತರ ಮಧ್ಯ ರೈಲ್ವೆಯಲ್ಲಿ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ ಆಕ್ಟ್ ಅಡಿಯಲ್ಲಿ ಬರುವ 1967 ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಡಿಸೆಂಬರ್‌ 14ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆಯಾದ ಅರ್ಜಿದಾರರಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ನೀಡಲಾಗುತ್ತದೆ. ಅಪ್ರೆಂಟಿಸ್ ಕಾಯಿದೆ 1961ರ ಅಡಿಯಲ್ಲಿ ಒಂದು ವರ್ಷದ ಅವಧಿಗೆ ಸ್ಟೈಪೆಂಡ್ ಪಾವತಿಸಲಾಗುತ್ತದೆ. ಆಯ್ಕೆಯಾದ ಅರ್ಜಿದಾರರು ಅಪ್ರೆಂಟಿಸ್‌ಶಿಪ್ ತರಬೇತಿಯ ಒಪ್ಪಂದಕ್ಕೆ ಒಳಪಟ್ಟಿರುತ್ತಾರೆ.

Tap to resize

Latest Videos

undefined

ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್‌ಸಿ), ಉತ್ತರ ಮಧ್ಯ ರೈಲ್ವೆಯಲ್ಲಿ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ ಆಕ್ಟ್ ಅಡಿಯಲ್ಲಿ ಬರುವ 1967 ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು , ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

1967 ಅಪ್ರೆಂಟಿಸ್ (ವಿಭಾಗವಾರು ಅಪ್ರೆಂಟಿಸ್ ವರ್ಗೀಕರಣ ಈ ಕೆಳಗಿನಂತೆ ವಿಂಗಡಿಸಲಾಗಿದೆ.)

1. ಪ್ರಯಾಗ್‌ರಾಜ್‌ ಮೆಕ್ಯಾನಿಕಲ್ ವಿಭಾಗ – 364 ಹುದ್ದೆ

2. ಪ್ರಯಾಗ್‌ರಾಜ್ ಇಲೆಕ್ರ್ಟಿಕಲ್‌ ವಿಭಾಗ -339 ಹುದ್ದೆ

3.ಝಾನ್ಸಿ ವಿಭಾಗ - 528 ಹುದ್ದೆ

4. ಝಾನ್ಸಿ ವರ್ಕ್‌ ಶಾಪ್‌ - 170 ಹುದ್ದೆ

5. ಆಗ್ರಾ ವಿಭಾಗ - 296 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: 15-11-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿ: 14-12-2023

ಅರ್ಜಿ ಶುಲ್ಕ ಎಷ್ಟು?

ಇತರರಿಗೆ: ರೂ. 100

ಎಸ್‌ ಸಿ/ಎಸ್‌ ಟಿ/ಪಿಡಬ್ಲ್ಯೂಡಿ/ ಮಹಿಳಾ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ.

ವಯಸ್ಸಿನ ಮಿತಿ (14-12-2023 ರಂತೆ)

ಕನಿಷ್ಠ ವಯಸ್ಸಿನ ಮಿತಿ: 15 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು

ಶೈಕ್ಷಣಿಕ ವಿದ್ಯಾರ್ಹತೆಗಳು

1. ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಎಸ್‌ ಎಸ್‌ ಎಲ್‌ ಸಿ/ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

2. ಅಭ್ಯರ್ಥಿಗಳು ತಾವು ಆಯ್ಕೆ ಬಯಸುವ ಹುದ್ದೆಗೆ ತಕ್ಕಂತೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಎನ್‌ ಸಿ ವಿ ಟಿ/ಎಸ್‌ ಸಿ ವಿ ಟಿ ಸಂಸ್ಥೆಯಿಂದ ಫಿಟ್ಟರ್ /ವೆಲ್ಡರ್/ ಆರ್ಮೇಚರ್ ವಿಂಡರ್/ ಮೆಷಿನಿಸ್ಟ್ /ಕಾರ್ಪೆಂಟರ್/ ಎಲೆಕ್ಟ್ರಿಷಿಯನ್/ ಪೇಂಟರ್ (ಜನರಲ್) / ಮೆಕ್ಯಾನಿಕ್/ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವ್ಯವಸ್ಥೆ ನಿರ್ವಹಣೆ, ವೈರ್‌ಮ್ಯಾನ್ ವಿಭಾಗದಲ್ಲಿ ಐಟಿಐ ಪ್ರಮಾಣಪತ್ರ ಪಡೆದಿರಬೇಕು.

ಸೂಚನೆ:

1. ಎಸ್‌ ಎಸ್‌ ಸಿ / ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಫಲಿತಾಂಶಗಳನ್ನು ನಿರೀಕ್ಷಿಸುತ್ತಿರುವ ಅರ್ಜಿದಾರರು ಈ ಮೇಲಿನ ಯಾವುದೇ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

2. ಎಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರು ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಆಯ್ಕೆಯ ವಿಧಾನ

1. ಅಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಸರಾಸರಿಯನ್ನು ತೆಗೆದುಕೊಂಡು ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ಕನಿಷ್ಠ 50 ಪತ್ರಿಶತ ಅಂಕಗಳು ಕಡ್ಡಾಯವಾಗಿರುತ್ತದೆ.

2. ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಡಾಕ್ಯುಮೆಂಟ್/ಪ್ರಮಾಣಪತ್ರ ಪರಿಶೀಲನೆಗಾಗಿ ಕರೆಯಲಾಗುವುದು.

3. ಇಬ್ಬರು ಅರ್ಜಿದಾರರು ಒಂದೇ ಅಂಕಗಳನ್ನು ಹೊಂದಿದ್ದರೆ, ಅರ್ಜಿದಾರರ ವಯಸ್ಸನ್ನು ಆಧರಿಸಿ ಅವರೋಹಣ ಕ್ರಮದಲ್ಲಿ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

4. ಆಯ್ಕೆಯಾದ ಅಭ್ಯರ್ಥಿಗಳು ಅಂತಿಮವಾಗಿ ಸರ್ಕಾರಿ ಅಧಿಕೃತ ವೈದ್ಯರಿಂದ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಡಾಕ್ಯುಮೆಂಟ್‌ಗಳ ಪರಿಶೀಲನೆಯ ಸಮಯದಲ್ಲಿ ಸಲ್ಲಿಸಬೇಕು.

ತರಬೇತಿ ಅವಧಿ

ಆಯ್ಕೆಯಾದ ಅರ್ಜಿದಾರರಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ನೀಡಲಾಗುತ್ತದೆ.

ಸ್ಟೈಪೆಂಡ್ ಎಷ್ಟು?

ಅಪ್ರೆಂಟಿಸ್ ಕಾಯಿದೆ 1961 ರ ಅಡಿಯಲ್ಲಿ ಒಂದು ವರ್ಷದ ಅವಧಿಗೆ ಸ್ಟೈಪೆಂಡ್ ಪಾವತಿಸಲಾಗುತ್ತದೆ.

ತರಬೇತಿಯ ಒಪ್ಪಂದ

ಆಯ್ಕೆಯಾದ ಅರ್ಜಿದಾರರು ಅಪ್ರೆಂಟಿಸ್‌ಶಿಪ್ ತರಬೇತಿಯ ಒಪ್ಪಂದಕ್ಕೆ ಒಳಪಟ್ಟಿರುತ್ತಾರೆ. ಒಂದು ವೇಳೆ ಅರ್ಜಿದಾರರು ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸುವಲ್ಲಿ ವಿಫಲರಾದರೆ ಅಪ್ರೆಂಟಿಸ್‌ಶಿಪ್ ನಿಯಮ1992 ಅಡಿಯಲ್ಲಿ ಮೂರು ತಿಂಗಳ ಪರಿಹಾರ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಪ್ರಮಾಣಪತ್ರದ ವಿವರ

ತರಬೇತಿಯನ್ನು ಪೂರ್ಣಗೊಳಿಸಿದ ಪ್ರತಿಯೊಬ್ಬ ಟ್ರೇಡ್ ಅಪ್ರೆಂಟಿಸ್‌ಗೆ ನ್ಯಾಷನಲ್ ಕೌನ್ಸಿಲ್‌ನಿಂದ ಕೌನ್ಸಿಲ್ ಫಾರ್ ಟ್ರೇನಿಂಗ್ ಇನ್ ವೊಕೇಶನಲ್ ಟ್ರೇಡ್ಸ್ ನಲ್ಲಿ ಪ್ರಾವೀಣ್ಯತೆಯನ್ನು ನಿರ್ಧರಿಸಲು ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವೆಬ್‌ಸೈಟ್‌ ವೀಕ್ಷಿಸಬಹುದು.

 

click me!