ವಿಕ್ರಾಂತ್ ಮೆಸ್ಸಿಯ '12th ಫೇಲ್’ ಚಿತ್ರಕ್ಕೆ ಈ ಐಪಿಎಸ್ ಅಧಿಕಾರಿಯೇ ಪ್ರೇರಣೆ!

By Suvarna News  |  First Published Nov 27, 2023, 4:33 PM IST

'12th ಫೇಲ್’ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬೇಕು. 9,10ನೇ ತರಗತಿಗಳಲ್ಲಿ ಉತ್ತಮ ಅಂಕ ಗಳಿಸದ, 12ನೇ ತರಗತಿ ಫೇಲಾದ ಹುಡುಗನೊಬ್ಬ ತನ್ನ ಅಚಲ ನಿಶ್ಚಯದಿಂದ UPSC ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಪ್ರೇರಣಾದಾಯಿ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಇದು, ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಗಾಥೆ. 
 


ಬಾಲಿವುಡ್ ನ ಧಮಾಕೆದಾರ್ ಚಲನಚಿತ್ರಗಳ ಮಧ್ಯೆ ಸೈಲೆಂಟ್ ಆಗಿ ಅಲ್ಲೊಂದು ಇಲ್ಲೊಂದು ಅಪೂರ್ವ ಚಿತ್ರಗಳು ತೆರೆಗೆ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಅಂಥ ಚಿತ್ರಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಚಿತ್ರ “12th ಫೇಲ್’. ವಿಧು ವಿನೋದ್ ಚೋಪ್ರಾ ಬರೆದು ನಿರ್ದೇಶನ ಮಾಡಿರುವ ಚಿತ್ರ ಕಳೆದ ಅಕ್ಟೋಬರ್ 27ರಂದು ಹೆಚ್ಚಿನ ಸದ್ದುಗದ್ದಲವಿಲ್ಲದೆ ತೆರೆಗೆ ಬಂದು ಸ್ಲೀಪರ್ ಹಿಟ್ ಆಗಿದೆ. ಈ ಚಿತ್ರದ ನಿಜವಾದ ಸ್ಟಾರ್, ಐಪಿಎಸ್ ಅಧಿಕಾರಿಯಾಗಿರುವ ಮನೋಜ್ ಕುಮಾರ್ ಶರ್ಮಾ. ಇವರ ನೈಜ ಜೀವನದಿಂದ ಪ್ರೇರಣೆ ಪಡೆದೇ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಹೀರೋ ವಿಕ್ರಾಂತ್ ಮೆಸ್ಸಿಗೆ ಇವರ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕಾಗಿ ಸಾಕಷ್ಟು  ಮೆಚ್ಚುಗೆ ದೊರಕುತ್ತಿದೆ. “12th ಫೇಲ್’ ಚಿತ್ರ ಇಂಡಿಯನ್ ಪೊಲೀಸ್ ಸರ್ವೀಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರು ತಮ್ಮ ಜೀವನದಲ್ಲಿ ಎದುರಿಸಿರುವ ಕಡುಬಡತನ, 12ನೇ ತರಗತಿಯಲ್ಲಿ ಒಮ್ಮೆ ಫೇಲ್ ಆದರೂ ಮತ್ತೆ ಕನಸನ್ನು ಸಾಕಾರಗೊಳಿಸಿಕೊಳ್ಳುವ ಮೈನವಿರೇಳಿಸಬಲ್ಲ ಕತೆಯನ್ನು ಅದ್ಭುತವಾಗಿ ತೆರೆದಿಟ್ಟಿದೆ. ಇವರ ಜೀವನದ ಕುರಿತು ಅನುರಾಗ್ ಪಾಠಕ್ ಎನ್ನುವವರು ಪುಸ್ತಕವನ್ನೂ ಬರೆದಿದ್ದಾರೆ.

ಭಾರತದ ಕ್ಲಿಷ್ಟಕರ ಪರೀಕ್ಷೆ ಎಂದೇ ಹೆಸರಾಗಿರುವುದು ಯುಪಿಎಸ್ ಸಿ (UPSC). ಭಾರತ ಲೋಕಸೇವಾ ಆಯೋಗವು ಆಡಳಿತ ಸೇವೆ, ಪೊಲೀಸ್ ಸೇವೆ ಸೇರಿದಂತೆ ದೇಶದ 23 ವಿವಿಧ ಉನ್ನತ ಮಟ್ಟದ ಸಿವಿಲ್ ಸರ್ವೀಸ್ (Civil Service) ಹುದ್ದೆಗಳಿಗೆ ನಡೆಸುವ ಈ ಪರೀಕ್ಷೆ ದೇಶದ ಎಲ್ಲ ಪದವೀಧರರಿಗೂ ಲಭ್ಯ. ಪರೀಕ್ಷೆ ಎದುರಿಸಲು ಅಪಾರ ಸಾಮಾನ್ಯ ಜ್ಞಾನ (General Knowledge), ಹಲವು ವಿಷಯಗಳ ಕುರಿತು ಖಚಿತ ಮಾಹಿತಿ ಬೇಕು. ವಿಭಿನ್ನ ವಿಷಯಗಳನ್ನು ಒಳಗೊಂಡಿರುವ ಈ ಪರೀಕ್ಷೆಯ (Exam) ಸಿದ್ಧತೆ ಸಾಕಷ್ಟು ಸಮಯವನ್ನು ಬೇಡುವಂಥದ್ದು. ಎರಡು ಹಂತಗಳ ಪರೀಕ್ಷೆ ಅಭ್ಯರ್ಥಿಗಳ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಒಂದು ಸಾವಿರ ಅಥವಾ ಅದಕ್ಕೂ ಕಡಿಮೆ ಹುದ್ದೆಗಳಿಗೆ ಲಕ್ಷಾಂತರ ಜನ ಪರೀಕ್ಷೆ ಬರೆಯುತ್ತಾರೆ ಎಂದರೆ ಇಲ್ಲಿರುವ ಸ್ಪರ್ಧೆಯನ್ನು ಊಹಿಸಬಹುದು. ಇಷ್ಟೆಲ್ಲ ಕಠಿಣ ಪರೀಕ್ಷೆ ಎಂದರೆ, ಶೈಕ್ಷಣಿಕವಾಗಿ ಹಿಂದುಳಿದ ಯಾರೊಬ್ಬರೂ ಇದನ್ನು ಬರೆದು ಯಶಸ್ವಿಯಾಗಲು ಸಾಧ್ಯವಿಲ್ಲ ಎನ್ನುವ ಭಾವನೆ ಬರುವುದು ಸಾಮಾನ್ಯ. ಆದರೆ, ಜೀವನದ ಯಾವುದೋ ಒಂದು ಹಂತದಲ್ಲಿ ಫೇಲ್ ಆದರೂ ಮಗದೊಮ್ಮೆ ಪುಟಿದೇಳಲು ಸಾಧ್ಯ ಎಂದು ಅಧಿಕಾರಿ ಮನೋಜ್ ಕುಮಾರ್ ಶರ್ಮಾ (Manoj Kumar Sharma) ಅವರಂಥವರು ಸಾಬೀತು ಮಾಡುತ್ತಲೇ ಇರುತ್ತಾರೆ. 

12ನೇ ಕ್ಲಾಸಿನಲ್ಲಿ ಫೇಲ್!
ಮನೋಜ್ ಶರ್ಮಾ ಮಧ್ಯಪ್ರದೇಶ ರಾಜ್ಯದ ಮೊರೆನಾ (Morena) ಜಿಲ್ಲೆಯವರು. ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗುವ ಹಂಬಲ. ಆದರೆ, ಶೈಕ್ಷಣಿಕವಾಗಿ (Education) ಅಷ್ಟೇನೂ ಉತ್ತಮ ಅಂಕ ಪಡೆಯುತ್ತಿರಲಿಲ್ಲ. 9, 10ನೇ ತರಗತಿಗಳಲ್ಲಿ 3ನೇ ಶ್ರೇಣಿ ಪಡೆದರೆ, 12ನೇ ಕ್ಲಾಸಿನಲ್ಲಿ ಪಾಸಾಗಲೂ ಇಲ್ಲ. ಹಿಂದಿ ವಿಷಯವೊಂದನ್ನು ಬಿಟ್ಟು ಬೇರೆಲ್ಲ ವಿಷಯಗಳಲ್ಲೂ ಅಷ್ಟಕ್ಕಷ್ಟೇ. ಆದರೆ, ಜೀವನ (Life) ಬದಲಾಗುವುದು ಈ ಹಂತದಲ್ಲೇ. ಹೇಗಾದರೂ ಮಾಡಿ ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂದು 12ನೇ ತರಗತಿಯ ಪರೀಕ್ಷೆಯನ್ನು ಮತ್ತೆ ಬರೆಯಲು ನಿರ್ಧರಿಸುತ್ತಾರೆ. ಈ ಸಮಯದಲ್ಲಿ ಹಣ ಹೊಂದಿಸಲು ಟ್ರಕ್ ಡ್ರೈವರ್ (Driver) ಆಗಿಯೂ ಕೆಲಸ ಮಾಡುತ್ತಾರೆ. 

Tap to resize

Latest Videos

undefined

35,000 ಕೋಟಿ ಆಸ್ತಿ ಇದ್ರೂ ಸರಳ ಜೀವನ ನಡೆಸ್ತಿದ್ದಾರೆ ಈ ಭಾರತೀಯ ಮಹಿಳೆ!

ಲೈಬ್ರರಿಯಲ್ಲಿ ಪ್ಯೂನ್ ಕೆಲಸ
ಆ ದಿನಗಳಲ್ಲಿ ಮನೋಜ್ ಶರ್ಮಾ ಮನೆಯಲ್ಲಿ ಬಡತನ (Poverty) ಹೇಗಿತ್ತು ಎಂದರೆ, ಮನೆಗೆ ಮೇಲ್ಛಾವಣಿಯೇ ಇರಲಿಲ್ಲ. ಭಿಕ್ಷುಕರೊಂದಿಗೆ ಮಲಗಿ ದಿನ ಕಳೆದದ್ದೂ ಇತ್ತು. ನಂತರ, ದೆಹಲಿಗೆ ಬಂದು ಲೈಬ್ರರಿಯೊಂದರಲ್ಲಿ ಪ್ಯೂನ್ ಆಗಿ ಸೇರಿಕೊಂಡರು. ಆ ಸಮಯದಲ್ಲಿ ಗಾರ್ಕಿ, ಅಬ್ರಾಹಂ ಲಿಂಕನ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಜೀವನಗಾಥೆ ಓದಿ ಪ್ರೇರಿತರಾದರು. ಬಳಿಕ, ವಿವಿಧ ಪರೀಕ್ಷೆಗಳನ್ನು ಬರೆಯುತ್ತ ಪೊಲೀಸ್ ಪರೀಕ್ಷೆಯಲ್ಲಿ ಯಶಸ್ವಿಯಾದರು. ಹಾಗೆಯೇ, ಯುಪಿಎಸ್ ಸಿ ಪರೀಕ್ಷೆ ಬರೆಯುವ ಆಸೆಯನ್ನು ಕೈಬಿಡಲಿಲ್ಲ. ಮುಂಬೈ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ ಹುದ್ದೆಗೇರಿದರೂ ತೃಪ್ತರಾಗದೇ ನಾಲ್ಕನೇ ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು 121ನೇ ರ್ಯಾಂಕ್ (Rank) ಪಡೆದರು. 

ಮದುವೆಗೂ ಸಾಲ ಪಡೆದಿದ್ದ ವ್ಯಕ್ತಿ ಈಗ 55 ಸಾವಿರ ಕೋಟಿ ಕಂಪನಿ ಒಡೆಯ!

ಈ ಮಧ್ಯೆ, 12ನೇ ಕ್ಲಾಸಿನಲ್ಲಿರುವಾಗ ಶ್ರದ್ಧಾ ಜೋಶಿ ಎಂಬುವವರನ್ನು ಮನೋಜ್ ಪ್ರೀತಿಸಿದ್ದರು. ಆದರೆ, ಆಗ ತಮ್ಮ ಪ್ರೀತಿಯನ್ನು (Love) ಬಹಿರಂಗಪಡಿಸಿರಲು ಆಗಿರಲಿಲ್ಲ. ಜೀವನದಲ್ಲಿ ಒಂದು ಹಂತಕ್ಕೇರಿದಾಗ ಅವರಿಗೆ ಪ್ರೊಪೋಸ್ ಮಾಡಿ, “ನೀನು ಯೆಸ್ ಎಂದು ಹೇಳು. ನಾವು ಜತೆಯಾಗಿ ಜಗತ್ತನ್ನು ಬದಲಿಸೋಣ’ ಎಂದು ಹೇಳಿದ್ದರು. ಬಳಿಕ, ಅವರನ್ನೇ ಮದುವೆಯಾದರು. ಪ್ರಸ್ತುತ ಮನೋಜ್ ಶರ್ಮಾ, ಮಹಾರಾಷ್ಟ್ರ ಕೇಡರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಚಲ ನಿರ್ಧಾರ, ದೃಢತೆ, ಕನಸನ್ನು (Dream) ಪೂರೈಸಿಕೊಳ್ಳುವ ಛಲದಿಂದಲೇ ಅಪೂರ್ವ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಇವರು ಸಾಕ್ಷಿ. 

click me!