ಅರ್ಚನಾ ತಿವಾರಿ ಮಿಸ್ಸಿಂಗ್ ಕೇಸ್ ಭೇದಿಸಿದ ಐಪಿಎಸ್ ರಾಹುಲ್ ಲೋಧಾ ಯಾರು ಗೊತ್ತೇ?

Published : Aug 22, 2025, 12:40 PM IST
IPS Officer Rahul Lodha

ಸಾರಾಂಶ

ಅರ್ಚನಾ ತಿವಾರಿ ಕೇಸ್ ಭೇದಿಸುವ ಮೂಲಕ ರಾಹುಲ್ ಲೋಧಾ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ. ಏನಿದು ಅರ್ಚನಾ ತಿವಾರಿ ಕೇಸ್?, ಎಸ್ಪಿ ರಾಹುಲ್ ಲೋಧಾ ಯಾರೆಂದು ನಿಮಗೆ ಗೊತ್ತಾ?. 

ಚಲಿಸುವ ರೈಲಿನಿಂದ ಯುವತಿ ಅರ್ಚನಾ ತಿವಾರಿ ನಾಪತ್ತೆಯಾದ ನಿಗೂಢತೆಯನ್ನುಇತ್ತೀಚೆಗೆ ಭೇದಿಸಲಾಯ್ತು. ಸದ್ಯ ಅರ್ಚನಾ ತಮ್ಮ ಕುಟುಂಬದೊಂದಿಗೆ ಮನೆಗೆ ಹೋಗಿದ್ದು, ಈ ಕುರಿತು ಕಳೆದ 13 ದಿನಗಳಿಂದ ಹಲವು ರೀತಿಯ ಊಹಾಪೋಹಗಳು ಹರಡಿದ್ದವು. ಏತನ್ಮಧ್ಯೆ, ಅರ್ಚನಾ ತಿವಾರಿ ಕೂಡ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರ ಎಲ್ಲಾ ಯೋಜನೆಗಳನ್ನು ಈಗ ಐಪಿಎಸ್ ರಾಹುಲ್ ಲೋಧಾ (IPS Rahul Lodha) ಮತ್ತು ಅವರ ತಂಡ ವಿಫಲಗೊಳಿಸಿದ್ದು, ಈ ನಿಗೂಢ ಪ್ರಕರಣವನ್ನು ಸಹ ಭೇದಿಸಿದ್ದಾರೆ. ಹಾಗಾದರೆ ಅರ್ಚನಾ ತಿವಾರಿ ಮಿಸ್ಸಿಂಗ್ ಕೇಸ್ ಭೇದಿಸಿದ ಎಸ್ಪಿ ರಾಹುಲ್ ಲೋಧಾ ಯಾರೆಂದು ನಿಮಗೆ ಗೊತ್ತಾ?.

ಐಪಿಎಸ್ ರಾಹುಲ್ ಲೋಧಾ ಯಾರು?
ರಾಹುಲ್ ಲೋಧಾ 2011 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರನ್ನು ಅತ್ಯಂತ ದಕ್ಷ ಅಧಿಕಾರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಭೋಪಾಲ್‌ನಲ್ಲಿ ರೈಲ್ವೆ ಎಸ್‌ಪಿಯಾಗಿ ನೇಮಕಗೊಳ್ಳುವ ಮೊದಲು, ರತ್ಲಂ ಜಿಲ್ಲೆಯ ಎಸ್‌ಪಿಯಾಗಿದ್ದರು. ಬಜರಂಗದಳದೊಂದಿಗಿನ ಕೆಲವು ವಿವಾದಗಳಿಂದಾಗಿ ಅವರನ್ನು ರಾತ್ರೋರಾತ್ರಿ ಅಲ್ಲಿಗೆ ವರ್ಗಾಯಿಸಲಾಯಿತು. ಸೆಪ್ಟೆಂಬರ್ 2024 ರಲ್ಲಿ ಅವರು ರೈಲ್ವೆ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡರು.

ಐಬಿಎಂನಲ್ಲಿ ಕೆಲಸ ಬಿಟ್ಟು ಯುಪಿಎಸ್‌ಸಿಗೆ ತಯಾರಿ
ಐಪಿಎಸ್ ಅಧಿಕಾರಿ ರಾಹುಲ್ ಲೋಧಾ ಮೂಲತಃ ಮಹಾರಾಷ್ಟ್ರದ ಜಲಗಾಂವ್‌ನವರು. 2008 ರಲ್ಲಿ ಬಿಇ ಮುಗಿಸಿದ ನಂತರ ಐಬಿಎಂನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಅವರ ಮನಸ್ಸು ಯಾವಾಗಲೂ ಯುಪಿಎಸ್‌ಸಿಗೆ ತಯಾರಿ ನಡೆಸುವುದರ ಮೇಲೆ ಕೇಂದ್ರೀಕೃತವಾಗಿತ್ತು. 2009 ರಲ್ಲಿ ಯುಪಿಎಸ್‌ಸಿಗೆ ತಯಾರಿ ಆರಂಭಿಸಿದರು.

ಗುರುದ್ವಾರದಲ್ಲಿ ರಾತ್ರಿ ಕಳೆದಿದ್ದ ರಾಹುಲ್ ಲೋಧಾ
ರಾಹುಲ್ ಲೋಧಾ ಐಬಿಎಂನಲ್ಲಿ ತಮ್ಮ ಕೆಲಸವನ್ನು ತೊರೆದು ಯುಪಿಎಸ್‌ಸಿಗೆ ತಯಾರಿ ನಡೆಸಲು ದೆಹಲಿಗೆ ಬಂದರು. ಅವರಿಗೆ ದೆಹಲಿಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆರಂಭಿಕ ದಿನಗಳಲ್ಲಿ, ಅವರು ಚಾಂದನಿ ಚೌಕ್‌ನಲ್ಲಿರುವ ಗುರುದ್ವಾರದಲ್ಲಿ ತರಬೇತಿ ಕೇಂದ್ರ ಹುಡುಕುತ್ತಾ ರಾತ್ರಿಗಳನ್ನು ಕಳೆದರು. ಧರ್ಮಶಾಲಾದಲ್ಲಿಯೂ ಹಲವು ಬಾರಿ ಇರಬೇಕಾಯಿತು. ಹೇಗೋ ಜನರಿಂದ ಕೋಚಿಂಗ್ ಇನ್ಸ್ಟಿಟ್ಯೂಟ್ ಬಗ್ಗೆ ವಿಚಾರಿಸುವ ಮೂಲಕ ಅವರು ಅಲ್ಲಿಗೆ ತಲುಪಿದರು. ಮೊದಲ ಪ್ರಯತ್ನದಲ್ಲಿ ಅವರಿಗೆ ಪ್ರವೇಶ ಸಿಗಲಿಲ್ಲ ಆದರೆ ಬಿಟ್ಟುಕೊಡಲಿಲ್ಲ.

ವಿದ್ಯಾರ್ಥಿವೇತನ ಪಡೆದ ನಂತರ ತರಬೇತಿ ಪ್ರವೇಶ
ಏತನ್ಮಧ್ಯೆ ಅವರಿಗೆ ಕೋಚಿಂಗ್ ಇನ್ಸ್ಟಿಟ್ಯೂಟ್ ಒಂದಕ್ಕೆ ವಿದ್ಯಾರ್ಥಿವೇತನ ಸಿಕ್ಕಿತು. ಇದರಿಂದಾಗಿ ಅವರ ಅಧ್ಯಯನ ಮತ್ತು ಊಟ ಉಚಿತವಾಯಿತು. ನಂತರ ಅವರು ತಯಾರಿ ಆರಂಭಿಸಿದರು. ಆರಂಭಿಕ ದಿನಗಳಲ್ಲಿ ಅವರಿಗೆ ಪ್ರವೇಶ ಸಿಗದಿದ್ದಾಗ ಕೋಚಿಂಗ್ ಇನ್ಸ್ಟಿಟ್ಯೂಟ್ ಹೊರಗೆ ನಿಂತು ವಿದ್ಯಾರ್ಥಿಗಳಿಂದ ಪುಸ್ತಕಗಳು ಮತ್ತು ಟಿಪ್ಪಣಿಗಳ ಬಗ್ಗೆ ಕೇಳುತ್ತಿದ್ದರು. ಅದರ ಸಹಾಯದಿಂದ ಅವರು ತಯಾರಿ ನಡೆಸುತ್ತಿದ್ದರು.

ಅಧ್ಯಯನದ ನಡುವೆ ಪ್ರೀತಿ
ತನ್ನ ಅಧ್ಯಯನದ ಸಮಯದಲ್ಲಿಯೇ ಜೋಧಪುರದ ನಿವಾಸಿ ಶುಭಿಯನ್ನು ಭೇಟಿಯಾದರು. ಅವರು ಕೂಡ ವಿದ್ಯಾರ್ಥಿವೇತನದ ಮೂಲಕ ಕೋಚಿಂಗ್‌ಗೆ ಸೇರಿದ್ದರು. ಇಬ್ಬರೂ ಉತ್ತಮ ಸ್ನೇಹಿತರಾದರು. ಅವರು ಪರಸ್ಪರ ಟಿಪ್ಪಣಿಗಳನ್ನು ಹಂಚಿಕೊಳ್ಳುತ್ತಿದ್ದರು. ಮೂರನೇ ಪ್ರಯತ್ನದ ನಂತರ, ರಾಹುಲ್ ಲೋಧಾ ಮನೆಗೆ ಹೋಗಿ ತನ್ನ ತಾಯಿಗೆ ಶುಭಿಯ ಬಗ್ಗೆ ಹೇಳಿದರು. ಇದಾದ ನಂತರ, ಅವರ ತಾಯಿ ಒಪ್ಪಿಕೊಂಡರು. ತಾಯಿಯ ಒಪ್ಪಿಗೆಯ ನಂತರ ಶುಭಿಗೆ ಪ್ರಪ್ರೋಸಲ್ ಮಾಡಿದರು. ಕೆಲವು ದಿನಗಳ ನಂತರ ಉತ್ತರವು ಸಕಾರಾತ್ಮಕವಾಗಿ ಬಂದಿತು.

ನಂತರ ಎರಡೂ ಕುಟುಂಬಗಳು ಮಾತನಾಡಿ ಮದುವೆ ನಿಶ್ಚಯವಾಯಿತು. "2011 ರಲ್ಲಿ, ನಾನು ಐಪಿಎಸ್ ಆಗಿ ಆಯ್ಕೆಯಾದಾಗ, ಶುಭಿ ನನಗೆ ಕರೆ ಮಾಡಿ ನಾನು ಆಯ್ಕೆಯಾಗಿದ್ದೇನೆ" ಎಂದು ಹೇಳಿದ್ದರು ಎಂದು ರಾಹುಲ್ ಲೋಧಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಐಪಿಎಸ್‌ಗೆ ಆಯ್ಕೆಯಾದ ನಂತರ, ನಾವಿಬ್ಬರೂ 2012 ರಲ್ಲಿ ವಿವಾಹವಾದರು. ರಾಹುಲ್ ಲೋಧಾ ಅವರ ತಂದೆ ಉದ್ಯಮಿ ಮತ್ತು ತಾಯಿ ಗೃಹಿಣಿ ಎಂಬುದು ಗಮನಿಸಬೇಕಾದ ಸಂಗತಿ.

ಅರ್ಚನಾ ತಿವಾರಿಯ ಕೇಸ್ ಭೇದಿಸುವ ಮೂಲಕ ರಾಹುಲ್ ಲೋಧಾ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ.

ಏನಿದು ಅರ್ಚನಾ ತಿವಾರಿ ಕೇಸ್?
13 ದಿನಗಳ ಹಿಂದೆ ನರ್ಮದಾ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಿಂದ ನಾಪತ್ತೆಯಾಗಿದ್ದ ಅರ್ಚನಾ ತಿವಾರಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ರಾಹುಲ್ ಲೋಧಾ, ಅರ್ಚನಾ ತಿವಾರಿ ಆಗಸ್ಟ್ 7 ಮತ್ತು 8 ರ ಮಧ್ಯರಾತ್ರಿ ನಾಪತ್ತೆಯಾಗಿದ್ದಾರು. 11-12 ದಿನಗಳ ನಂತರ ನಾವು ಅವರನ್ನು ನೇಪಾಳ ಬಾರ್ಡರ್‌ನಲ್ಲಿ ಪತ್ತೆ ಹಚ್ಚಿದೆವು. ಅರ್ಚನಾ ಕಟ್ನಿಯಲ್ಲಿ ವಿದ್ಯಾರ್ಥಿ ನಾಯಕಿಯೂ ಆಗಿದ್ದಾರೆ. ಮದುವೆ ಪ್ರಸ್ತಾಪಗಳು ನಿರಂತರವಾಗಿ ಬರುತ್ತಿದ್ದವು, ಆದರೆ ಅವರು ಮದುವೆಯಾಗಲು ಬಯಸಲಿಲ್ಲ.

ತನಿಖೆಯಿಂದ ಅರ್ಚನಾ ತಿವಾರಿಗೆ ಇಂದೋರ್‌ನ ಶುಜಲ್‌ಪುರ ನಿವಾಸಿ ಸರಾಂಶ್ ಜೊತೆಗೆ ಫ್ರೆಂಡ್‌ಶಿಪ್ ಇತ್ತು ಎಂದು ತಿಳಿದುಬಂದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಆ ದಿನ (ಘಟನೆಯ ದಿನ) ಇಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸರಾಂಶ್ ಕೆಲವು ಕಾನೂನು ಸಲಹೆಗಳನ್ನು ಪಡೆದಿದ್ದರು. ಕುಟುಂಬವು ಅರ್ಚನಾ ತಿವಾರಿಯ ಮದುವೆಯನ್ನು ಪಟ್ವಾರಿ ಜೊತೆ ಏರ್ಪಡಿಸಿತ್ತು. ಅರ್ಚನಾಗೆ ತನ್ನ ಅಧ್ಯಯನವನ್ನು ಬಿಟ್ಟು ಮದುವೆಯಾಗುವಂತೆ ಕುಟುಂಬವು ಒತ್ತಡ ಹೇರಿತ್ತು. ಅರ್ಚನಾ ಹರ್ಡಾದ ಧಾಬಾವೊಂದರಲ್ಲಿ ಸರಾಂಶ್ ಜೊತೆ ಮಾತನಾಡಿ ಓಡಿಹೋಗುವ ಯೋಜನೆಗಳನ್ನು ರೂಪಿಸಿದರು. ಆದರೆ ನಂತರ ಓಡಿಹೋಗುವ ಯೋಜನೆಯನ್ನು ರದ್ದುಗೊಳಿಸಿ ನಾಪತ್ತೆಯಾಗಲು ಸಂಚು ರೂಪಿಸಿದಳು.

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್