
ಎಂಟನೇ ವೇತನ ಆಯೋಗ (8th Pay Commission)ದಲ್ಲಿ ಸರ್ಕಾರಿ ನೌಕರರ (Government employees) ಸಂಬಳ ಎಷ್ಟು ಹೆಚ್ಚಾಗುತ್ತೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಾರ ಸಂಬಳ ಎಷ್ಟು ಹೆಚ್ಚಾಗುತ್ತೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸರ್ಕಾರಿ ನೌಕರರು ಉತ್ತಮ ಹೈಕ್ ನಿರೀಕ್ಷೆ ಮಾಡ್ತಿದ್ದಾರೆ. ಬ್ರೋಕರೇಜ್ ಸಂಸ್ಥೆಗಳು ಮತ್ತು ಇತರ ತಜ್ಞರು ಸಂಭಾವ್ಯ ಫಿಟ್ಮೆಂಟ್ ಅಂಶ ಮತ್ತು ಅದರ ಆಧಾರದ ಮೇಲೆ ಸ್ಯಾಲರಿ ಹೆಚ್ಚಳದ ಬಗ್ಗೆ ತಮ್ಮ ಲೆಕ್ಕಾಚಾರ ನೀಡ್ತಿವೆ.
ಇತ್ತೀಚೆಗೆ ಆಂಬಿಟ್ ಕ್ಯಾಪಿಟಲ್ ಮತ್ತು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಸಂಶೋಧನಾ ವರದಿ ಬಿಡುಗಡೆ ಮಾಡಿವೆ. ಅವರಿಬ್ಬರ ಸಂಶೋಧನಾ ವರದಿಗಳ ಪ್ರಕಾರ, ಸಿಬ್ಬಂದಿ ವೇತನ ಶೇಕಡಾ 13 ರಿಂದ ಶೇಕಡಾ 34 ವರೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಸಂಬಳ ಪರಿಷ್ಕರಣೆಗೆ ಬಳಸುವ ಫಿಟ್ಮೆಂಟ್ ಅಂಶ 1.83 ರಿಂದ 2.46 ರ ನಡುವೆ ಇರಬಹುದು ಎಂದು ಆಂಬಿಟ್ ಕ್ಯಾಪಿಟಲ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಫಿಟ್ಮೆಂಟ್ ಅಂಶ 1.83 ಆಗಿದ್ದರೆ, ವೇತನವು ಶೇಕಡಾ 14 ರಷ್ಟು ಹೆಚ್ಚಾಗಬಹುದು. 2.15 ರ ಫಿಟ್ಮೆಂಟ್ ಅಂಶವಿದ್ದರೆ ಸಂಬಳ ಶೇಕಡಾ 34 ರಷ್ಟು ಹೆಚ್ಚಾಗಬಹುದು. ಒಂದ್ವೇಳೆ 2.46 ರ ಫಿಟ್ಮೆಂಟ್ ಅಂಶವನ್ನು ಶಿಫಾರಸು ಮಾಡಿದರೆ, ಸಂಬಳ ಶೇಕಡಾ 54 ರಷ್ಟು ಹೆಚ್ಚಾಗಬಹುದು.
ಜುಲೈ 21 ರಂದು ಕೋಟಕ್ ಇನ್ಸ್ಟಿಟ್ಯೂಷನಲ್ ಇಕ್ವಿಟೀಸ್ ತನ್ನ ವರದಿಯಲ್ಲಿ 1.8 ರ ಫಿಟ್ಮೆಂಟ್ ಅಂಶವನ್ನು ಅಂದಾಜಿಸಿದೆ. ಇದು ಸಂಬಳವನ್ನು ಶೇಕಡಾ 13 ರಷ್ಟು ಹೆಚ್ಚಿಸುತ್ತದೆ.
ವೇತನ ಹೆಚ್ಚಳದ ಲೆಕ್ಕಾಚಾರ : 1.8 ರ ಫಿಟ್ಮೆಂಟ್ ಅಂಶವು ಅಸ್ತಿತ್ವದಲ್ಲಿರುವ ಮೂಲ ವೇತನವನ್ನು 1.8 ರಿಂದ ಗುಣಿಸುತ್ತದೆ. ಉದಾಹರಣೆಗೆ, 7 ನೇ ವೇತನ ಆಯೋಗವು 2.57 ರ ಫಿಟ್ಮೆಂಟ್ ಅಂಶವನ್ನು ಸೂಚಿಸಿತ್ತು. ಇದು 2016 ರಲ್ಲಿ ಕನಿಷ್ಠ ಮೂಲ ವೇತನವನ್ನು ರೂ 7,000 ರಿಂದ ರೂ 18,000 ಕ್ಕೆ ಹೆಚ್ಚಿಸಿತ್ತು.
6 ನೇ ವೇತನ ಆಯೋಗ : ಇದರ ಅಡಿಯಲ್ಲಿ ಕನಿಷ್ಠ ವೇತನ 7,000 (ಮೂಲ ವೇತನ) + 8,750 (DA) + 2,100 (HRA) + 1,350 (TA) = 19,200 ರೂಪಾಯಿ.
7 ನೇ ವೇತನ ಆಯೋಗ : 18,000 (ಮೂಲ ವೇತನ) + 4,320 (HRA) + 1,350 (TA) + 0 (DA) = 23,670 ರೂಪಾಯಿ
2016 ರಲ್ಲಿ ಇದನ್ನು ಪರಿಷ್ಕರಿಸಲಾಯಿತು. ಹೀಗಾಗಿ, 9 ವರ್ಷಗಳ ಹಿಂದೆ 7 ನೇ ವೇತನ ಆಯೋಗದ ಅನುಷ್ಠಾನದ ನಂತ್ರ ಕನಿಷ್ಠ ವೇತನವು ಶೇಕಡಾ 14. ರಷ್ಟು ಹೆಚ್ಚಳವನ್ನು ಕಂಡಿತ್ತು. ಮೂಲ ವೇತನ 19,200 ರಿಂದ 23,670 ರೂಪಾಯಿಗೆ ಏರಿತ್ತು.
ಸಂಬಳ 50 ಸಾವಿರವಾಗಿದ್ದರೆ ಎಷ್ಟು ಹೆಚ್ಚಾಗುತ್ತದೆ? : ಪ್ರಸ್ತುತ ನಿಮ್ಮ ಮೂಲ ವೇತನ 50,000 ರೂಪಾಯಿ ಇದ್ದರೆ 8 ನೇ ವೇತನ ಆಯೋಗದ ಅನುಷ್ಠಾನದ ನಂತರ ಸಂಭವನೀಯ ವೇತನ ಹೆಚ್ಚಳ ಎಷ್ಟಿರಬಹುದು ಎಂದು ಲೆಕ್ಕ ಹಾಕೋಣ.
ಮೂಲ ವೇತನ: 50,000
HRA (24%): 12,000
TA: 2,160
DA (55%): 27,500
ಒಟ್ಟು ಸಂಬಳ: 91,660 ರೂಪಾಯಿ
7ನೇ ವೇತನ ಆಯೋಗದ ಸಮಯದಲ್ಲಿ ಡಿಎ ಅನ್ನು ಶೇಕಡಾ 55 ಎಂದು ಲೆಕ್ಕಹಾಕಲಾಗುತ್ತದೆ.
1.82 ರ ಫಿಟ್ಮೆಂಟ್ ಅಂಶವಿದ್ರೆ :
ಹೊಸ ಮೂಲ ವೇತನ (50,000 x 1.82) = 91,000
ಹೊಸ HRA (91,000 x 24%) = 21,840
TA = 2,160
ಹೊಸ ಡಿಎ = 0
ಹೊಸ ಒಟ್ಟು ಸಂಬಳ: 1,15,000 (ಸುಮಾರು ಶೇಕಡಾ 25.46 ರಷ್ಟು ಹೆಚ್ಚಳ)
2.15 ರ ಫಿಟ್ಮೆಂಟ್ ಅಂಶವಿದ್ರೆ :
ಹೊಸ ಮೂಲ ವೇತನ (50,000 x 2.15) = 1,07,500
ಹೊಸ HRA (1,07,500 x 24%) = 25,800
ಹೊಸ TA = 2,160
ಹೊಸ DA = 0
ಹೊಸ ಒಟ್ಟು ಸಂಬಳ: 1,35,460 ರೂ. (ಸುಮಾರು ಶೇಕಡಾ 47.78 ಹೆಚ್ಚಳ)
ನೆನಪಿನಲ್ಲಿಟ್ಟುಕೊಳ್ಳುವ ವಿಷ್ಯ ಅಂದ್ರೆ ಇದು ಬರೀ ಲೆಕ್ಕಾಚಾರ.ನಿಜವಾದ ಫಿಟ್ಮೆಂಟ್ ಅಂಶವನ್ನು 8 ನೇ ವೇತನ ಆಯೋಗ ಶಿಫಾರಸು ಮಾಡುತ್ತದೆ.