PMKVY: ಈ ಸರ್ಕಾರಿ ಯೋಜನೆಯಲ್ಲಿ ಉಚಿತ ತರಬೇತಿ ಜೊತೆ ಸಿಗಲಿದೆ 8000 ಸ್ಟೈಫಂಡ್

Published : Aug 19, 2025, 01:07 PM IST
Pradhan Mantri Skill Development Scheme

ಸಾರಾಂಶ

PMKVY : ಕೇಂದ್ರ ಸರ್ಕಾರ ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪಿಎಂಕೆವಿವೈ ಕೂಡ ಒಂದು. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ಭಾರತ ಸರ್ಕಾರ (Government of India )ದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (Pradhan Mantri Skill Development Scheme) ಒಂದು. ಯುವಕರಿಗೆ ಉದ್ಯೋಗ ಆಧಾರಿತ ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (MSDE) ನಿರ್ವಹಿಸುತ್ತದೆ. ನಿರುದ್ಯೋಗಿ ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಇದರ ಮುಖ್ಯ ಗುರಿ. ಈ ಯೋಜನೆಯಡಿಯಲ್ಲಿ, ಯುವಕರಿಗೆ ಉಚಿತ ತರಬೇತಿ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತ್ರ ಸರ್ಟಿಫಿಕೇಟ್ ನೀಡಲಾಗುತ್ತದೆ. ಇದಲ್ಲದೆ ತರಬೇತಿ ಸಮಯದಲ್ಲಿ 8000 ರೂಪಾಯಿ ಪ್ರೋತ್ಸಾಹ ಧನ ಕೂಡ ಸಿಗ್ತಿದೆ.

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಲ್ಲಿ ಯಾವೆಲ್ಲ ಕೋರ್ಸ್ ಲಭ್ಯ ? : ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯು ಯುವಕರಿಗೆ ಐಟಿ, ಮೊಬೈಲ್ ರಿಪೇರಿ, ಎಲೆಕ್ಟ್ರಿಷಿಯನ್ ಕೆಲಸ, ಕಂಪ್ಯೂಟರ್ ಜ್ಞಾನ, ಡಿಜಿಟಲ್ ಮಾರ್ಕೆಟಿಂಗ್, ಹೊಲಿಗೆ-ಕಸೂತಿ, ಸೌಂದರ್ಯ ಚಿಕಿತ್ಸೆ, ಚಿಲ್ಲರೆ ವ್ಯಾಪಾರ ಮತ್ತು ಮಾರಾಟ, ನಿರ್ಮಾಣ ಕಾರ್ಯ, ಆರೋಗ್ಯ ರಕ್ಷಣೆ, ಕೃಷಿ, ಜವಳಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಉಚಿತ ಕೌಶಲ್ಯ ತರಬೇತಿಯನ್ನು ನೀಡುವ ಯೋಜನೆಯಾಗಿದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಯುವಕರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದು ಉದ್ಯೋಗವನ್ನು ಪಡೆಯಲು ಸಹಾಯಕವಾಗಿದೆ. ಈ ಯೋಜನೆಯಡಿ ತರಬೇತಿ ಪಡೆದ ಯುವಕರಿಗೆ ಅನೇಕ ಕಂಪನಿಗಳು ಮತ್ತು ಕೈಗಾರಿಕೆಗಳು ಆದ್ಯತೆ ನೀಡ್ತಿವೆ.

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಗೆ ಅರ್ಹತೆ :

• ಭಾರತದ ನಾಗರಿಕರಾಗಿರಬೇಕು.

• ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಅಭ್ಯರ್ಥಿಯ ಕನಿಷ್ಠ ವಯಸ್ಸು 15 ಮತ್ತು ಗರಿಷ್ಠ 45 ವರ್ಷಗಳು.

• ಅಭ್ಯರ್ಥಿ 10 ಅಥವಾ 12 ನೇ ತರಗತಿಯ ಡ್ರಾಪ್ ಔಟ್ ಆಗಿರಬೇಕು.

• ಕಡಿಮೆ ಆದಾಯ ಹೊಂದಿರುವ, ಕಡಿಮೆ ಸಂಬಳ ಬರುವ ಕೆಲಸಗಾರರು ಸಹ ಕೆಲವು ಷರತ್ತುಗಳೊಂದಿಗೆ ಈ ಯೋಜನೆ ಲಾಭ ಪಡೆಯಬಹುದು.

• ಸರ್ಕಾರಿ ಯೋಜನೆಯಡಿಯಲ್ಲಿ ಈಗಾಗಲೇ ಯಾವುದೇ ಕೌಶಲ್ಯ ತರಬೇತಿಯನ್ನು ಪಡೆಯದ ಯುವಕರಿಗೆ ಮಾತ್ರ ಯೋಜನೆಯ ಪ್ರಯೋಜನ ನೀಡಲಾಗುವುದು

ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಕೆ ಹೇಗೆ? : ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು, ನೀವು ಮೊದಲು ಅಧಿಕೃತ ಪೋರ್ಟಲ್ಗೆ ಹೋಗಬೇಕಾಗುತ್ತದೆ. ಅಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದರ ನಂತ್ರ ನಿಮಗೆ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಸಿಗುತ್ತದೆ. ಅದ್ರ ಮೂಲಕ ನೀವು ಲಾಗಿನ್ ಆಗ್ಬೇಕು. ಲಾಗಿನ್ ಆದ್ಮೇಲೆ ನಿಮ್ಮ ಆಯ್ಕೆಯ ಯಾವುದೇ ಕೋರ್ಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡ್ಬೇಕು. ಅಲ್ಲದೆ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡ್ಬೇಕು. ನಿಮ್ಮ ಅರ್ಜಿ ಸ್ವಿಕೃತವಾದಲ್ಲಿ ತರಬೇತಿ ಶುರುವಾಗುತ್ತದೆ. ತರಬೇತಿ ಸಾಮಾನ್ಯವಾಗಿ 3 ರಿಂದ 6 ತಿಂಗಳಿರುತ್ತದೆ. ಅದ್ರ ನಂತ್ರ ನಿಮಗೆ ಪ್ರಮಾಣ ಪತ್ರ ಸಿಗಲಿದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆ :

ಆಧಾರ್ ಕಾರ್ಡ್

ಪಾಸ್ಪೋರ್ಟ್ ಸೈಜ್ ಫೋಟೋ

ಮೊಬೈಲ್ ನಂಬರ್

ಇಮೇಲ್ ಐಡಿ

ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ (10ನೇ/12ನೇ/ಪದವಿ)

ಬ್ಯಾಂಕ್ ಪಾಸ್ಬುಕ್ನ ಪ್ರತಿ

ವಾಸ ಪ್ರಮಾಣಪತ್ರ

ಈ ಯೋಜನೆಯಿಂದ ಆಗುವ ಲಾಭ : ಯುವಜನರಿಗೆ ಉಚಿತ ತರಬೇತಿ ಲಭ್ಯ. ತರಬೇತಿ ಮುಗಿದ ನಂತರ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣಪತ್ರ ಸಿಗುತ್ತದೆ. ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚು. ಐಟಿ, ಕೃಷಿ, ನಿರ್ಮಾಣ, ಆರೋಗ್ಯ ರಕ್ಷಣೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ತರಬೇತಿ. ಸ್ವಾವಲಂಬಿಗಳಾಗಲು ಅವಕಾಶ. ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ. ಆರ್ಥಿಕವಾಗಿ ದುರ್ಬಲ ಯುವಕರಿಗೆ ಸಹಕಾರಿ.

 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್