IRCON Recruitment 2022: ಇಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಅವಕಾಶ

By Suvarna News  |  First Published Feb 21, 2022, 3:46 PM IST

ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ಖಾಲಿ ಇರುವ 40 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 8 ,2022  ಕೊನೆಯ ದಿನಾಂಕವಾಗಿದೆ. 


ಬೆಂಗಳೂರು(ಫೆ.21): ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ (Indian Railway Construction Company Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅರ್ಹ  ಮತ್ತು  ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಸಹಾಯಕ ವ್ಯವಸ್ಥಾಪಕ ಮತ್ತು ಕಾರ್ಯನಿರ್ವಾಹಕ ಸೇರಿ ಒಟ್ಟು 40 ಹುದ್ದೆಗಳು  ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 8 ,2022  ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಮಾರ್ಚ್​ 11 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ  ಇಲಾಖೆಯ ಅಧಿಕೃತ ವೆಬ್‌ ತಾಣ https://www.ircon.org ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 40 ಹುದ್ದೆಗಳ ಮಾಹಿತಿ:
ಸಹಾಯಕ ವ್ಯವಸ್ಥಾಪಕ (Assistant Manager- ಸಿವಿಲ್) - 20 ಹುದ್ದೆಗಳು
ಕಾರ್ಯ ನಿರ್ವಾಹಕ (Executive- ಸಿವಿಲ್) - 20 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿದ ಹುದ್ದೆಗನುಸಾರ  ವಿದ್ಯಾರ್ಹತೆ ಪಡೆದಿರಬೇಕು. 
ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್ ಎಂಜಿನಿಯರಿಂಗ್​ ನಲ್ಲಿ ಶೇ.75ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜೊತೆಗೆ 2 ವರ್ಷಗಳ ಕಾರ್ಯಾನುಭವ ಇರಬೇಕು.
ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್ ಎಂಜಿನಿಯರಿಂಗ್​ ನಲ್ಲಿ ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜೊತೆಗೆ 3 ವರ್ಷಗಳ ಕಾರ್ಯಾನುಭವ ಇರಬೇಕು.

NHAI RECRUITMENT 2022: ನವದೆಹಲಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ

ವಯೋಮಿತಿ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಸಹಾಯಕ ವ್ಯವಸ್ಥಾಪಕ ಹುದ್ದೆಗೆ  ಗರಿಷ್ಠ 30 ಮತ್ತು  ಕಾರ್ಯನಿರ್ವಾಹಕ ಹುದ್ದೆಗೆ ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/ ಓಬಿಸಿ ಅಭ್ಯರ್ಥಿಗಳು 1000 ರೂ ಅರ್ಜಿ ಶುಲ್ಕ ಪಾವತಿಸಬೇಕು.  SC / ST/ EWS/ PwD/ ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Karnataka Admin Reforms Panel: ನಾನ್‌ ಗೆಜೆಟೆಡ್‌ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವಂತೆ ಶಿಫಾರಸು

ವೇತನ ವಿವರ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ವೇತನ ಪಡೆಯಲಿದ್ದಾರೆ. 
ಸಹಾಯಕ ವ್ಯವಸ್ಥಾಪಕ ಹುದ್ದೆಗೆ  ಮಾಸಿಕ ₹40,000 ರಿಂದ  ₹1,40,000.
ಕಾರ್ಯನಿರ್ವಾಹಕ ಹುದ್ದೆಗೆ  ಮಾಸಿಕ  ₹30,000 ರಿಂದ ₹ 1,20,000.

ಅರ್ಜಿ ಸಲ್ಲಿಸುವ ವಿಧಾನ:
ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ https://www.ircon.org/index.php?lang=en ಗೆ ಭೇಟಿ ನೀಡಿ. ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಮಾರ್ಚ್ 8 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. 

click me!