ಭಾರತ ಸರ್ಕಾರದ ಮಿಂಟ್ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 15 ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 1, 2022 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಬೆಂಗಳೂರು: ಭಾರತ ಸರ್ಕಾರದ ಮಿಂಟ್ (India Government Mint) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಕಿರಿಯ ತಂತ್ರಜ್ಞ (Junior Technician), ಕಾರ್ಯದರ್ಶಿ ಸಹಾಯಕ (Secretarial Assistant), ಶಿಲ್ಪಿ (Engraver), ಜೂನಿಯರ್ ಬುಲಿಯನ್ ಸಹಾಯಕ (Junior Bullion Assistant) ಸೇರಿ ಒಟ್ಟು 15 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 1, 2022 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ igmmumbai.spmcil.com ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 15 ಹುದ್ದೆಗಳ ಮಾಹಿತಿ ಇಂತಿದೆ
ಕಿರಿಯ ತಂತ್ರಜ್ಞ: 7 ಹುದ್ದೆಗಳು
ಕಾರ್ಯದರ್ಶಿ ಸಹಾಯಕ:1 ಹುದ್ದೆ
ಶಿಲ್ಪಿ : 6 ಹುದ್ದೆಗಳು
ಜೂನಿಯರ್ ಬುಲಿಯನ್ ಸಹಾಯಕ: 1 ಹುದ್ದೆ
undefined
ಶೈಕ್ಷಣಿಕ ವಿದ್ಯಾರ್ಹತೆ: ಭಾರತ ಸರ್ಕಾರದ ಮಿಂಟ್ ಇಲಾಖೆಯಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರ ವಿದ್ಯಾಭ್ಯಾಸ ಮಾಡಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕಿರಿಯ ತಂತ್ರಜ್ಞ ಹುದ್ದೆಗೆ, 10 ನೇ ಪಾಸ್ ಜೊತೆಗೆ, ಅಭ್ಯರ್ಥಿಯು ಸಂಬಂಧಿತ ವಿಷಯದಲ್ಲಿ ಐಟಿಐ ಪದವಿ ಮಾಡಿರಬೇಕು. ಮಿಕ್ಕ ಹುದ್ದೆಗಳಿಗೆ 10ನೇ ತರಗತಿ, ಐಟಿಐ, ಡಿಪ್ಲೋಮಾ ಮಾಡಿರಬೇಕು.
EIL Recruitment 2022: ಇಂಜಿನಿಯರಿಂಗ್ ಪದವೀಧರರಿಗೆ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ
ವಯೋಮಿತಿ: ಭಾರತ ಸರ್ಕಾರದ ಮಿಂಟ್ ಇಲಾಖೆಯಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ 25 ರಿಂದ 28 ವರ್ಷದೊಳಗೆ ಇರಬೇಕು.
ಆಯ್ಕೆ ಪ್ರಕ್ರಿಯೆ: ಭಾರತ ಸರ್ಕಾರದ ಮಿಂಟ್ ಇಲಾಖೆಯಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟೈಪಿಂಗ್ ಟೆಸ್ಟ್, ಸ್ಟೆನೋಗ್ರಫಿ ಪರೀಕ್ಷೆಯ ಕಾರ್ಯಕ್ಷಮತೆ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವೇತನ ವಿವರ: ಭಾರತ ಸರ್ಕಾರದ ಮಿಂಟ್ ಇಲಾಖೆಯಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ 67,390 ರೂ ವರೆಗೆ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ:
ಮೊದಲು ಅಧಿಕೃತ ವೆಬ್‌ಸೈಟ್ https://www.spmcil.com/ ಗೆ ಭೇಟಿ ನೀಡಿ. ನಂತರ ಸರ್ಕಾರದ ಮಿಂಟ್, ಕೋಲ್ಕತ್ತಾ ನೇಮಕಾತಿ 2022 ಅರ್ಜಿಯನ್ನು ಡೌನ್‌ಲೋಡ್ ಮಾಡಿ ಅಗತ್ಯ ದಾಖಲೆಯನ್ನು ಇಟ್ಟು ಅರ್ಜಿ ಸಲ್ಲಿಸಿ.
ESIC RECRUITMENT 2022: ಭೋಧಕರ ಹುದ್ದೆಗೆ ಅರ್ಜಿ ಆಹ್ವಾನ, ಮಾರ್ಚ್ 2 ರಂದು ನೇರ ಸಂದರ್ಶನ
ಕ್ರೀಡಾ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಸೇರಲು ಭರ್ಜರಿ ಅವಕಾಶ: ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಆಗ್ನೇಯ ಮಧ್ಯ ರೈಲ್ವೆ (South East Central Railway -SECR ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಸಿ ಹುದ್ದೆಗಳಿಗೆ ಕ್ರೀಡಾ ಕೋಟದ (Sports Quota) ಮೇಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 5, 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://secr.indianrailways.gov.in/ ಗೆ ಭೇಟಿ ನೀಡಬಹುದು.
ಅರ್ಹತೆಗಳು: ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕ್ರಾಸ್ ಕಂಟ್ರಿ, ಹ್ಯಾಂಡ್‌ಬಾಲ್, ಹಾಕಿ, ಖೋ-ಖೋ ಮತ್ತು ಟೇಬಲ್ ಟೆನ್ನಿಸ್‌ನಂತಹ ಕ್ರೀಡೆ/ಆಟಗಳಲ್ಲಿ ಭಾಗವಹಿಸಿದ್ದ ಎಲ್ಲಾ ಆಸಕ್ತ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಲೆವೆಲ್ 2, 3, 4 ಮತ್ತು 5 ವಿಭಾಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ಮತ್ತು SC/ST, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 150 ರೂ ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.