NHAI Recruitment 2022: ನವದೆಹಲಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ

By Suvarna News  |  First Published Feb 21, 2022, 1:15 PM IST

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ನವದೆಹಲಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 9  ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಫೆ.20): ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ನವದೆಹಲಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಹಲವು ವಿಭಾಗಗಳಲ್ಲಿ ಒಟ್ಟು  33  ವ್ಯವಸ್ಥಾಪಕರು (General Manager) ಹುದ್ದೆಗಳು ಖಾಲಿ ಇದ್ದು,  . ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ ಎರಡೂ ಪ್ರಕಾರವಾಗಿ ಮಾರ್ಚ್ 9ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ https://nhai.gov.in/#/ ಗೆ ಭೇಟಿ ನೀಡಬಹುದು.

ಒಟ್ಟು 33 ಹುದ್ದೆಗಳ ಮಾಹಿತಿ ಇಂತಿದೆ.
ಚೀಫ್ ಜನರಲ್‌ ಮ್ಯಾನೇಜರ್‌ (ಹಣಕಾಸು-Finance):1 ಹುದ್ದೆ
ಉಪ ಜನರಲ್‌ ಮ್ಯಾನೇಜರ್‌ (ಕಾನೂನು-Legal):1 ಹುದ್ದೆ
ಉಪ ಜನರಲ್‌ ಮ್ಯಾನೇಜರ್‌ (ಮಾಧ್ಯಮ ವಿಭಾಗ): 1 ಹುದ್ದೆ ಮ್ಯಾನೇಜರ್‌ (ಟೆಕ್ನಿಕಲ್): 31 ಹುದ್ದೆಗಳು

Latest Videos

undefined

KARNATAKA ADMIN REFORMS PANEL: ನಾನ್‌ ಗೆಜೆಟೆಡ್‌ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವಂತೆ ಶಿಫಾರಸು

ಶೈಕ್ಷಣಿಕ ವಿದ್ಯಾರ್ಹತೆ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ದಲ್ಲಿ ಖಾಲಿ ಇರುವ  ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ  ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.

ಮುಖ್ಯ ಜನರಲ್ ಮ್ಯಾನೇಜರ್ (ಹಣಕಾಸು) ಹುದ್ದೆಗೆ ಅಭ್ಯರ್ಥಿಗಳು ವಾಣಿಜ್ಯ, ವ್ಯವಹಾರ (Accounts),ಹಣಕಾಸು, ICAI, ICWAI ಈ ಯಾವುದಾದರೊಂದು ವಿಷಯದಲ್ಲಿ ಪದವಿ ಹೊಂದಿರಬೇಕು.

ಉಪ ಜನರಲ್‌ ಮ್ಯಾನೇಜರ್‌ (ಕಾನೂನು) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಕಾನೂನು ಪದವಿಯನ್ನು  ಮಾಡಿರಬೇಕು.

ಉಪ ಜನರಲ್‌ ಮ್ಯಾನೇಜರ್‌ (ಮಾಧ್ಯಮ ವಿಭಾಗ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಡೆದಿರಬೇಕು. ಜೊತೆಗೆ ಹೆಚ್ಚುವರಿಯಾಗಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ,  ಅಥವಾ ಸಾರ್ವಜನಿಕ ಸಂಪರ್ಕ (Public Relations)ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾವನ್ನು ಮಾಡಿರಬೇಕು.

ಮ್ಯಾನೇಜರ್‌ (ಟೆಕ್ನಿಕಲ್) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಮಾಡಿರಬೇಕು.

KNNL Recruitment 2022: ಕರ್ನಾಟಕ ನೀರಾವರಿ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಖಾಲಿ ಇರುವ ಟೆಕ್ನಿಕಲ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು ಬಳಿಕ ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ  ಆಯ್ಕೆ ಮಾಡಲಾಗುವುದು.

ವೇತನ ವಿವರ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ದಲ್ಲಿ ಖಾಲಿ ಇರುವ  ವ್ಯವಸ್ಥಾಪಕ ಹುದ್ದೆಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ಮಾಸಿಕ ವೇತನ ದೊರೆಯಲಿದೆ.
ಚೀಫ್ ಜನರಲ್‌ ಮ್ಯಾನೇಜರ್‌ (ಹಣಕಾಸು): ₹37,400 ರಿಂದ ₹67,000
ಉಪ ಜನರಲ್‌ ಮ್ಯಾನೇಜರ್‌ (ಕಾನೂನು-): ₹15600 ರಿಂದ
₹39100
ಉಪ ಜನರಲ್‌ ಮ್ಯಾನೇಜರ್‌ (ಮಾಧ್ಯಮ ವಿಭಾಗ):  ₹15600 ರಿಂದ
₹39100
ಮ್ಯಾನೇಜರ್‌ (ಟೆಕ್ನಿಕಲ್):  ₹67700 ರಿಂದ ₹208700

ವಯೋಮಿತಿ:  ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ದಲ್ಲಿ ಖಾಲಿ ಇರುವ  ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷವಾಗಿರಬೇಕು.

ಅರ್ಜಿ ಸಲ್ಲಿಸಬೇಕಾದ ಆಫ್‌ಲೈನ್ ವಿಳಾಸ:
DGM (HR & Admn.) IA,
National Highways Authority of India,
Plot No: G -5 & 6
Sector – 10, Dwarka, New Delhi – 110075

click me!