IMA Recruitment 2022: 10,12ನೇ ತರಗತಿ ಆದವರಿಗೆ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಉದ್ಯೋಗ, 63 ಸಾವಿರದವರೆಗೂ ವೇತನ

By Suvarna News  |  First Published Dec 25, 2021, 6:50 PM IST
  • 188 ಹುದ್ದೆಗಳ ಭರ್ತಿಗೆ ಕರೆ ನೀಡಿದ ಭಾರತೀಯ ಮಿಲಿಟರಿ ಅಕಾಡೆಮಿ 
  • ಆಫ್ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಜನವರಿ 3 ಕೊನೆ ದಿನ 
  • ಆಯ್ಕೆಯಾದವರಿಗೆ 18,000 ರಿಂದ 63,200 ವರೆಗೂ ವೇತನ
     

ಬೆಂಗಳೂರು(ಡಿ.25): ಭಾರತೀಯ ಮಿಲಿಟರಿ ಅಕಾಡೆಮಿ (Indian Military Academy-IMA) ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಸಿಹಿ ಸುದ್ದಿ ನೀಡಿದೆ. ಐಎಂಎ ಖಾಲಿ ಇರುವ  ವಿವಿಧ ಹುದ್ದೆಗಳ ಭರ್ಥಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.  ಗ್ರೂಪ್ ಸಿ ವಿಭಾಗದ ಒಟ್ಟು 188 ಹುದ್ದೆಗಳ ಭರ್ತಿಗೆ ಕರೆ ನೀಡಿದ್ದು ಆಫ್ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಜನವರಿ 3, 2022  ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ IMA ನ ಅಧಿಕೃತ ವೆಬ್‌ಸೈಟ್ indianarmy.nic.in ಗೆ ಭೇಟಿ ನೀಡಲು ಕೋರಲಾಗಿದೆ.

188 ಹುದ್ದೆಗಳ ವಿವರ ಇಂತಿದೆ: ಐಎಂಎ ಕುಕ್ ಸ್ಪೆಷಲ್ (12), ಕುಕ್ ಐಟಿ (3), ಎಂಟಿ ಡ್ರೈವರ್(ಆರ್ಡಿನರಿ ಗ್ರೇಡ್)-10, ಬೂಟ್ ಮೇಕರ್ /ರಿಪೇರರ್(1), ಎಲ್‌ಡಿಸಿ (3), ಮಸಾಲ್ಚಿ (2), ವೇಟರ್ (11), ಫಾಟಿಗ್‌ಮನ್ (21), ಎಂಟಿಎಸ್(ಸಫೈವಾಲಾ)-26, ಗ್ರೌಂಡ್ಸ್‌ ಮ್ಯಾನ್ (46), ಜಿಸಿ ಆರ್ಡರ್ಲಿ (33), ಎಂಟಿಎಸ್(ಚೌಕೀದಾರ್)-4, ಗ್ರೂಮ್ (7),  ಕ್ಷೌರಿಕ(2), ಸಲಕರಣೆ ರಿಪೇರಿ (1), ಸೈಕಲ್ ರಿಪೇರಿ (3), MTS(ಮೆಸೆಂಜರ್)-2, ಲ್ಯಾಬೋರೇಟರಿ ಅಟೆಂಡೆಂಟ್ (1) ಇತ್ಯಾದಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Tap to resize

Latest Videos

undefined

ಶೈಕ್ಷಣಿಕ ಅರ್ಹತೆ: ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್‌ಡಿಸಿ ಹುದ್ದೆ ಹೊರತುಪಡಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 10 ನೇ ತರಗತಿ ಪಾಸಾಗಿರಬೇಕು. ಎಲ್‌ಡಿಸಿ ಹುದ್ದೆಗೆ ಪಿಯುಸಿ ಪಾಸಾಗಿರಬೇಕು. 

SSLC EXAMINATION 2022: SSLC ಪರೀಕ್ಷೆ ನೋಂದಣಿ ವಿಸ್ತರಣೆ, ಮೇ ನಲ್ಲಿ ಪರೀಕ್ಷೆ ನಡೆಸಲು ಚಿಂತನೆ

ವಯೋಮಿತಿ ಮತ್ತು ಅರ್ಜಿ ಶುಲ್ಕ: ಎಂಟಿ ಡ್ರೈವರ್, ಲ್ಯಾಬೋರೇಟರಿ ಅಟೆಂಡೆಂಟ್,  ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ ವಯಸ್ಸಿನ ಮಿತಿ ಇದೆ. ಮಿಕ್ಕ ಹುದ್ದೆಗಳಿಗೆ ಅಭ್ಯರ್ಥಿಗಳ ಆಯಸ್ಸು 18 ರಿಂದ 25 ಆಗಿರಬೇಕು. ಸಾಮಾನ್ಯ ಕೆಟಗರಿಯಲ್ಲಿ ಬರುವ ಅಭ್ಯರ್ಥಿಗಳು 50 ರೂ ಪಾವತಿ ಮಾಡಬೇಕು. ಇತರ ಕೆಟಗರಿಯವರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ ಮತ್ತು ವೇತನ : ಇಂಡಿಯನ್ ಮಿಲಿಟರಿ ಅಕಾಡೆಮಿ ಪೋಸ್ಟ್‌ ಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ (Skill Test),ದಾಖಲಾತಿ ಪರಿಶೀಲನರ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 18,000 ರಿಂದ 63,200 ವರೆಗೂ ವೇತನ ಸಿಗಲಿದೆ. ಆಯ್ಕೆಯಾದವರಿಗೆ ಭಾರತದ ಯಾವ ಬೇಕಾದರೂ ಕೆಲಸ ದೊರೆಯಲಿದೆ.

ಅರ್ಜಿ ಸಲ್ಲಿಸಬೇಕಾದ ವಿವರ ಮತ್ತು ವಿಳಾಸ: ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ https://indianarmy.nic.in/home ಭೇಟಿ ನೀಡಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದು. ಅಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿ. ಬಳಿಕ ನಿಮ್ಮ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಅಂಟಿಸಿ. ನಂತರ 5 ರೂ ಗಳ ಅಂಚೆಚೀಟಿ ಅಂಟಿಸಿ Comdt, Indian Military Academy, Dehradun, Uttarakhand- 248007 ಈ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಕಳುಹಿಸಿಕೊಡಿ.

KSMCL RECRUITMENT 2022: ರಾಜ್ಯ ಮಿನೆರಲ್ಸ್​ ಕಾರ್ಪೊರೇಷನ್ ನಲ್ಲಿ ಇಂಜಿನಿಯರಿಂಗ್, ಐಟಿಐ ಆದವರಿಗೆ ಉದ್ಯೋಗವಕಾಶ

ದ್ವಿತೀಯ PUC ಆದವರು ರಾಷ್ಟ್ರೀಯ ತನಿಖಾ ದಳದಲ್ಲಿನ ಕಾನ್ಸ್​​ಟೇಬಲ್ ​ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ: ರಾಷ್ಟ್ರೀಯ ತನಿಖಾ ದಳ (National Investigation Agency) ಖಾಲಿ ಇರುವ ಕಾನ್ಸ್​​ಟೇಬಲ್ (Constable)​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 28 ಕಾನ್ಸ್​​ಟೇಬಲ್ ​ ಹುದ್ದೆಗಳು ಖಾಲಿ ಇದ್ದು, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜನವರಿ 17, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು  www.nia.gov.in ಗೆ ಭೇಟಿ ನೀಡಲು ಕೋರಲಾಗಿದೆ.

click me!