ESIC Recruitment 2022: 11 ಡೀನ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ನೌಕರರ ರಾಜ್ಯ ವಿಮಾ ನಿಗಮ

By Suvarna News  |  First Published Dec 24, 2021, 9:08 PM IST
  • 11 ಡೀನ್ ಹುದ್ದೆಗಳ ನೇಮಕಕ್ಕೆ  ESIC ನೋಟಿಫಿಕೇಶನ್
  • ಬಿಡಿಎಸ್​, ಡಿಎನ್​ಬಿ, ಎಂಎಸ್​, ಎಂಡಿ ಪೂರ್ಣಗೊಳಿಸಿರುವವರಿಗೆ ಅವಕಾಶ.
  • ಡಿಸೆಂಬರ್ 31  ಅರ್ಜಿ ಸಲ್ಲಿಸಲು ಕೊನೆ ದಿನ

ಬೆಂಗಳೂರು(ಡಿ.24): ನೌಕರರ ರಾಜ್ಯ ವಿಮಾ ನಿಗಮದಲ್ಲಿ (Employees State Insurance Corporation- ESIC)  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಒಟ್ಟು 11 ಡೀನ್ (Dean)​ ಹುದ್ದೆಗಳು ಖಾಲಿ ಇದ್ದು, ಬಿಡಿಎಸ್​, ಡಿಎನ್​ಬಿ, ಎಂಎಸ್​, ಎಂಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31,2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://www.esic.nic.in/ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ: ನೌಕರರ ರಾಜ್ಯ ವಿಮಾ ನಿಗಮ- ದೆಹಲಿ ನೇಮಕಾತಿಯ ಡೀನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಂತವೈದ್ಯರ ಕಾಯಿದೆ, 1948 ರ ಶ್ಕೆಡ್ಯೂಲ್ ಭಾಗ I ಅಥವಾ ಭಾಗ II ರಲ್ಲಿ ಒಳಗೊಂಡಿರುವ ಅರ್ಹತೆ ಹೊಂದಿರಬೇಕು.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿರಬೇಕು. ಸ್ನಾತಕೋತ್ತರ ಅರ್ಹತೆ ಅಂದರೆ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಅಥವಾ ಅದಕ್ಕೆ ಸಮಾನವಾದ ಮಾನ್ಯತೆ ಪಡೆದ ಅರ್ಹತೆ ಪಡೆದಿರಬೇಕು.  ಡೀನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 30/01/2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು.

Latest Videos

undefined

ಅನುಭವ ಮತ್ತು ಅರ್ಜಿ ಶುಲ್ಕ: ಮಾನ್ಯತೆ ಪಡೆದ ಸಂಸ್ಥೆಯಲ್ಲಿ 14 ವರ್ಷಗಳ ಬೋಧನಾ ಅನುಭವ ಹೊಂದಿರಬೇಕು. ಮಾಸ್ಟರ್ ಆಫ್ ಡೆಂಟಲ್ ಸರ್ಜರಿಯ ಅರ್ಹತಾ ಪದವಿ ಅಥವಾ ಅದಕ್ಕೆ ಸಮಾನವಾದ ಅರ್ಹತೆ ಪಡೆದ ನಂತರ ವಿಶೇಷ ವಿಷಯದಲ್ಲಿ, ಮಾನ್ಯತೆ ಪಡೆದ ಡೆಂಟಲ್​​ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕನಿಷ್ಠ 5 ವರ್ಷಗಳ ಬೋಧನಾ ಅನುಭವ ಪಡೆದಿರಬೇಕು. ಸಾಮಾನ್ಯ/ಒಬಿಸಿ- 225 ರೂ.  ಮತ್ತು ಎಸ್​ಸಿ/ಎಸ್​ಟಿ/ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

Western Central Railway Recruitment 2022: ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ. ಮಾಸಿಕ  1,44,200 ರಿಂದ 2,18,200 ರೂ ವೇತನ ನೀಡಲಾಗುತ್ತದೆ. 

ಅರ್ಜಿ ಸಲ್ಲಿಸುವ ವಿಳಾಸ: ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ ಕೊಡಿ
ಉಪ ನಿರ್ದೇಶಕರು (ನೇಮಕಾತಿ)
ಇಎಸ್​ಐ ಕಾರ್ಪೊರೇಷನ್
ಪಂಚ್​ದೀಪ್​ ಭವನ್
ಸಿಐಜಿ ಮಾರ್ಗ್​
ನವದೆಹಲಿ- 110002

BEL Recruitment 2022: ಬೆಂಗಳೂರಿನ BELನಲ್ಲಿ ಎಂಜಿನಿಯರ್ ಹುದ್ದೆಗೆ ಅರ್ಜಿ

MBBS ಆದವರಿಗೆ ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗ: ನೌಕರರ ರಾಜ್ಯ ವಿಮಾ ನಿಗಮದಲ್ಲಿ (Employees State Insurance Corporation- ESIC) ಒಟ್ಟು 1,120 ವಿಮಾ ವೈದ್ಯಕೀಯ ಅಧಿಕಾರಿ ಗ್ರೇಡ್ II ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 31,2021 ರಿಂದ ಜನವರಿ 31,2022ರೊಳಗೆ ಅರ್ಜಿ ಹಾಕಲು ಕೋರಲಾಗಿದೆ . ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://www.esic.nic.in/ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ: ರಾಜ್ಯ ನೌಕರರ ವಿಮಾ ನಿಗಮ (ಇಎಸ್‌ಐಸಿ) ನೇಮಕಾತಿಯ ವಿಮಾ ವೈದ್ಯಕೀಯ ಅಧಿಕಾರಿ (Insurance Medical Officer) ಹುದ್ದೆಗಳಿಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ MBBS (Bachelor of Medicine and Bachelor of Surgery) ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು. ಮತ್ತು  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಜನವರಿ 31,2022ರ ಅನ್ವಯ ಗರಿಷ್ಟ 35 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಓಬಿಸಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
 

click me!