NIA Recruitment 2022: ದ್ವಿತೀಯ PUC ಆದವರು ರಾಷ್ಟ್ರೀಯ ತನಿಖಾ ದಳದಲ್ಲಿನ ಕಾನ್ಸ್​​ಟೇಬಲ್ ​ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

By Suvarna News  |  First Published Dec 25, 2021, 1:48 PM IST
  • ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾದ NIA 
  • ಒಟ್ಟು 28 ಕಾನ್ಸ್​​ಟೇಬಲ್ ​ ಹುದ್ದೆಗಳು ಖಾಲಿ 
  • 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹ

ಬೆಂಗಳೂರು(ಡಿ.25): ರಾಷ್ಟ್ರೀಯ ತನಿಖಾ ದಳ (National Investigation Agency) ಖಾಲಿ ಇರುವ ಕಾನ್ಸ್​​ಟೇಬಲ್ (Constable)​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 28 ಕಾನ್ಸ್​​ಟೇಬಲ್ ​ ಹುದ್ದೆಗಳು ಖಾಲಿ ಇದ್ದು, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜನವರಿ 17, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು  www.nia.gov.in ಗೆ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ: ರಾಷ್ಟ್ರೀಯ ತನಿಖಾ ದಳ ನೇಮಕಾತಿಯ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ ಪಾಸಾಗಿರಬೇಕು. ಮತ್ತು ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು.

Tap to resize

Latest Videos

undefined

ಆಯ್ಕೆ ಪ್ರಕ್ರಿಯೆ ಮತ್ತು ವೇತನ ವಿವರ: ರಾಷ್ಟ್ರೀಯ ತನಿಖಾ ದಳ (NIA) ನೇಮಕಾತಿಯ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆರಿಸಿಕೊಳ್ಳಲಾಗುತ್ತದೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 21,700 ರಿಂದ 69,100 ರೂ ವೇತನ ನಿಗದಿಯಾಗಿದೆ.

DHFWS Haveri Recruitment 2022: ವೈದ್ಯರು, ಫಿಸಿಯೋಥೆರಪಿಸ್ಟ್, ಫಿಸಿಷಿಯನ್, ನರ್ಸ್ ಉದ್ಯೋಗ

ಉದ್ಯೋಗ ಮಾಡಬೇಕಾದ ಸ್ಥಳ ವಿವರ: ರಾಷ್ಟ್ರೀಯ ತನಿಖಾ ದಳ ನೇಮಕಾತಿಯ ಕಾನ್ಸ್​ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಚಂಡೀಗಡ್, ಚೆನ್ನೈ, ಗುವಾಹಟಿ, ಹೈದಾರಾಬಾದ್, ಇಂಫಾಲ್, ಜಮ್ಮು, ಕೊಚ್ಚಿ, ಕೊಲ್ಕತ್ತಾ, ಲಕ್ನೋ, ಮುಂಬೈ, ನವದೆಹಲಿ, ರಾಂಚಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. 

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವಿಳಾಸ ವಿವರ ಹೀಗಿದೆ:
ಎಸ್​ಪಿ(ಅಡ್ಮಿನಿಸ್ಟ್ರೇಟಿವ್​)
ರಾಷ್ಟ್ರೀಯ ತನಿಖಾ ದಳ ಹೆಡ್​ ಕ್ವಾಟ್ರರ್ಸ್​
ಸಿಜಿಒ ಕಾಂಪ್ಲೆಕ್ಸ್​ ಎದುರು
ಲೋಧಿ ರಸ್ತೆ
ನವದೆಹಲಿ-110003

ESIC Recruitment 2022: 11 ಡೀನ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ನೌಕರರ ರಾಜ್ಯ

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ, ಮಾಸಿಕ 1 ಲಕ್ಷದವರೆಗೆ ವೇತನ: ಭಾರತೀಯ ಕ್ರೀಡಾ ಪ್ರಾಧಿಕಾರವು (Sports Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು  ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಜೂನಿಯರ್ ಕನ್ಸಲ್ಟೆಂಟ್ (Junior Consultant) ಹುದ್ದೆಗಳು ಖಾಲಿ ಇದೆ. ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ತಾಣ sportsauthorityofindia.nic.in ಗೆ ಭೇಟಿ ನೀಡಲು ಕೋರಲಾಗಿದೆ.

 ಭಾರತೀಯ ಕ್ರೀಡಾ ಪ್ರಾಧಿಕಾರ ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಎಂಬಿಎ, ಪಿಜಿಡಿಎಂ ಪೂರ್ಣಗೊಳಿಸಿರಬೇಕು. ಯಾವುದೇ ಕ್ರೀಡಾ ವಿಭಾಗಗಳಲ್ಲಿ (Sports Quota) ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು.

ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು  ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ. ಮತ್ತು ಮಾಸಿಕ  75,000-1,00,000 ರೂ ವೇತನ ನೀಡಲಾಗುತ್ತದೆ.

click me!