Sports Quota Recruitment: ಭಾರತೀಯ ಸೇನೆಗೆ ನ.29ರಿಂದ ನೇಮಕಾತಿ rally

By Suvarna NewsFirst Published Nov 10, 2021, 3:28 PM IST
Highlights

ನೀವೇನಾದ್ರೂ ಕ್ರೀಡಾಪಟುಗಳಾ? ಬಾಕ್ಸಿಂಗ್, ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್‌ಬಾಲ್ ಪ್ರಿಯರಾ? ಆರ್ಮಿಯಲ್ಲಿ ಉದ್ಯೋಗಕ್ಕೆ ಸೇರಲು ಬಯಸುತ್ತೀರಾ? ಹಾಗಿದ್ರೆ ನಿಮಗಾಗಿ ಭಾರತೀಯ ಸೇನೆಯಲ್ಲೊಂದು ಬಂಪರ್ ಆಫರ್ ಹುಡುಕಿಕೊಂಡು ಬಂದಿದೆ. ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತರಿ ರ್ಯಾಲಿಯನ್ನು ನವೆಂಬರ್ 29ರಿಂದ ಆಯೋಜಿಸಲಾಗುತ್ತಿದೆ. ಆಸಕ್ತರು ಭಾಗವಹಿಸಬಹುದು.

ಸೇನೆಯಲ್ಲಿ ಸೇವೆ ಸಲ್ಲಿಸುವೇಕೆಂದು‌ ಕನಸ್ಸು  ಕಾಣುತ್ತಿರುವವರಿಗೆ ಕೇಂದ್ರ ರಕ್ಷಣಾ ಸಚಿವಾಲಯವು(Defence of Ministry) ಒಳ್ಳೆಯ ಸುದ್ದಿಯನ್ನು ನೀಡಿದೆ. ರಕ್ಷಣಾ ಸಚಿವಾಲಯವು ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಯುನಿಟ್ ಹೆಡ್‌ಕ್ವಾರ್ಟರ್ಸ್ ಕೋಟಾದ ಅಡಿಯಲ್ಲಿ ಸೇನಾ ನೇಮಕಾತಿ  ರ್ಯಾಲಿಯನ್ನು ಸಿಕಂದರಾಬಾದ್‌ನಲ್ಲಿ ನಡೆಸಲಾಗುವುದು ಎಂದು ಭಾರತೀಯ ಸೇನೆ ಘೋಷಿಸಿದೆ. ಭಾರತೀಯ ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹತೆ, ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ ಹಾಗೂ ದಿನಾಂಕವನ್ನು ತಿಳಿಯಲು ನೋಟಿಫಿಕೇಷನ್ ಅನ್ನು ಪರಿಶೀಲಿಸಬೇಕು. ಭಾರತೀಯ ಸೇನೆಯ ಪ್ರಕಟಣೆಯ ಪ್ರಕಾರ, ಸೋಲ್ಜರ್ ಜನರಲ್ ಡ್ಯೂಟಿ (Soldier General Duty) ಮತ್ತು ಸೋಲ್ಜರ್ ಟೆಕ್ (Soldier Tech-AE)) ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದೆ. ಈ ಸೇನಾ ನೇಮಕಾತಿ ರ್ಯಾಲಿಯನ್ನು ನವೆಂಬರ್ 29, 2021 ರಿಂದ ಜನವರಿ 30, 2022 ರವರೆಗೆ ನಡೆಸಲು ನಿರ್ಧರಿಸಿದೆ. ಅತ್ಯುತ್ತಮ ಕ್ರೀಡಾ ಪಟುಗಳು (ಮುಕ್ತ ವರ್ಗ) ಥಾಪರ್ ಸ್ಟೇಡಿಯಂ, AOC ಸೆಂಟರ್ ಸಿಕಂದರಾಬಾದ್‌ನಲ್ಲಿ ನವೆಂಬರ್ 26, ರಂದು ಬೆಳಗ್ಗೆ 8 ಗಂಟೆಗೆ ಕ್ರೀಡಾ ಪ್ರಾಕ್ಟೀಸ್ ಗಾಗಿ ತೆರಳಬಹುದು.

ಸೋಲ್ಜರ್ ಜನರಲ್ ಡ್ಯೂಟಿ (Soldier General Duty), ಸೋಲ್ಜರ್ ಟೆಕ್ (Soldier Tech -AE), ಸೋಲ್ಜರ್ ಟ್ರೇಡ್ಸ್‌ಮನ್ (Soldier Tradesmen),  ಸೋಲ್ಜರ್  ಸಿಎಲ್ ಕೆ/ಎಸ್ ಕೆಟಿ (Soldier Clk/SKT)ವಿಭಾಗ ಹಾಗೂ ಔಟ್ ಸ್ಟ್ಯಾಂಡಿಂಗ್ ಸ್ಪೋಟ್ಸ್ ಮೆನ್(Outstanding Sportsmen) ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಬಾಕ್ಸಿಂಗ್, ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ಹಾಕಿ, ಈಜು, ಕುಸ್ತಿ, ಅಥ್ಲೆಟಿಕ್ಸ್, ಕಬ್ಬಡಿ ಮತ್ತು ಕ್ರಿಕೆಟ್ - ಹೀಗೆ ಯಾವುದೇ ಕ್ಷೇತ್ರಗಳಲ್ಲಿ ಪ್ರತಿನಿಧಿಸಿರುವ ಅತ್ಯುತ್ತಮ ಕ್ರೀಡಾಪಟುಗಳು ತಮ್ಮ ಪ್ರಮಾಣಪತ್ರದೊಂದಿಗೆ ಈ ನೇಮಕಾತಿ ಡ್ರೈವ್ ನಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹಿರಿಯ ಅಥವಾ ಕಿರಿಯ ಮಟ್ಟದಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿರಬೇಕು. ಕ್ರೀಡಾ ಸ್ಪರ್ಧೆಯ ಪ್ರಮಾಣಪತ್ರವು ಎರಡು ವರ್ಷಕ್ಕಿಂತ ಹಳೆಯದಾಗಿರಬಾರದು.

CRPF Recruitment: ವೈದ್ಯಕೀಯ ಹುದ್ದೆಗೆ ನ.22, 29 ವಾಕ್ ಇನ್ ಇಂಟರ್‌ವ್ಯೂ

ಸೋಲ್ಜರ್ ಜನರಲ್ ಡ್ಯೂಟಿ (Soldier General Duty) ಹುದ್ದೆಗೆ ಅರ್ಜಿ ಸಲ್ಲುಸುವ ಅಭ್ಯರ್ಥಿಯ ವಯೋಮಿತಿ 17.5 ರಿಂದ 21 ವರ್ಷಗಳ ಒಳಗಿರಬೇಕು. ಸೋಲ್ಜರ್ ಟೆಕ್ (Soldier Tech -AE) ಹುದ್ದೆಗೆ 17.5 ರಿಂದ 21 ವರ್ಷಗಳ ವಯೋಮಿತಿ ಇದೆ. ಇನ್ನು ಸೋಲ್ಜರ್ ಟ್ರೇಡ್ಸ್‌ಮೆನ್ (Soldier Tradesmen) ಹುದ್ದೆಗೆ ಅಭ್ಯರ್ಥಿಯ ವಯಸ್ಸು ಕನಿಷ್ಟ 17.5 ರಿಂದ ಗರಿಷ್ಟ 23 ವರ್ಷಗಳ ಒಳಗಿರಬೇಕು. ಸೋಲ್ಜರ್ ಸಿಎಲ್‌ಕೆ / ಎಸ್‌ಕೆಟಿ (Soldier Clk/SKT) ಅಭ್ಯರ್ಥಿಗಳಿಗೆ 17.5 ರಿಂದ 23 ವರ್ಷಗಳ ವಯೋಮಿತಿ ಇದೆ.

ಸೋಲ್ಜರ್ ಜನರಲ್ ಡ್ಯೂಟಿ(Soldier General Duty) ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಯು  ಮೆಟ್ರಿಕ್ಯುಲೇಷನ್/ SSC ಪ್ರತಿ ವಿಷಯದಲ್ಲಿ ಒಟ್ಟು 33% ಮತ್ತು 45% ಅಂಕ ಪಡೆದಿರಬೇಕು.ಸೋಲ್ಜರ್ ಟೆಕ್ (Soldier Tech-AE),  ಹುದ್ದೆಗೆ 10+2/PCM ಮತ್ತು ಇಂಗ್ಲಿಷ್‌ನೊಂದಿಗೆ ವಿಜ್ಞಾನ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ 50% ಅಂಕಗಳೊಂದಿಗೆ (ಪ್ರತಿ ವಿಷಯದಲ್ಲಿ 40% ) ತೇರ್ಗಡೆ ಆಗಿರಬೇಕು.

ಸೋಲ್ಜರ್  ಸಿಎಲ್ ಕೆ/ಎಸ್ ಕೆಟಿ (Soldier CLK/SKT - AOC ward only)ವಿಭಾಗ - 10+2/ಮಧ್ಯಂತರ ಉತ್ತೀರ್ಣರಾಗಿ ಯಾವುದೇ ಸ್ಟ್ರೀಮ್‌ನಲ್ಲಿ ಒಟ್ಟು 60% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 50% ಅಂಕ ಗಳಿಸಿರಬೇಕು. 12 ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 50% ಗಳಿಸಿದ್ದರೆ ಮಾತ್ರ ಸೇನೆಗೆ ಅರ್ಜಿ ಹಾಕಲು ಅರ್ಹರು. 

IOCL Recrutiment: 527 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

click me!