BHEL Recruitment: ವೃತ್ತಿಪರರರಿಗೆ ತಿಂಗಳಿಗೆ 80 ಸಾವಿರ ವೇತನ

By Suvarna NewsFirst Published Nov 10, 2021, 2:49 PM IST
Highlights

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ.(BHEL) ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಸ್ಟ್ರಾಟರ್ಜಿ ಮ್ಯಾನೇಜ್‌ಮೆಂಟ್ ಗ್ರೂಪ್‌ನಲ್ಲಿ ಖಾಲಿ ಇರುವ 10 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದ್ದು, ಆಯ್ಕೆಯಾದವರಿಗೆ ತಿಂಗಳಿಗೆ 80 ಸಾವಿರ ರೂ. ವೇತನ ದೊರೆಯಲಿದೆ. ಆಸಕ್ತ ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (Bharat Heavy Electricals Limited -BHEL), ಯುವ ವೃತ್ತಿಪರರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಪೊರೇಟ್ ಸ್ಟ್ರಾಟಜಿ ಮ್ಯಾನೇಜ್‌ಮೆಂಟ್ ಗ್ರೂಪ್ ನಲ್ಲಿ ಖಾಲಿ ಇರುವ 10 ಹುದ್ದೆಗಳಿಗೆ ಯುವ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದು,ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 80,000 ರೂ. ವೇತನ ಸಿಗಲಿದೆ. ಜೊತೆಗೆ ಮತ್ತಷ್ಟು ಇತರ ಪ್ರಯೋಜನಗಳು ಲಭ್ಯವಾಗಲಿವೆ. ಅರ್ಹ ಹಾಗೂ ಆಸಕ್ತಿ ಯುಳ್ಳ ಅಭ್ಯರ್ಥಿಗಳು BHEL ನ ಅಧಿಕೃತ ವೆಬ್‌ಸೈಟ್ careers.bhel.in ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ.

ಯುವ ವೃತ್ತಿಪರರು ಹೊಸ ತಾಂತ್ರಿಕ ಕ್ಷೇತ್ರಗಳಲ್ಲಿ ಅಗತ್ಯ ಅಧ್ಯಯನ/ಸಂಶೋಧನೆ, ಮುಂದುವರಿದ ದೇಶಗಳಲ್ಲಿ ನಡೆಯುತ್ತಿರುವ ಇತ್ತೀಚಿನ ಅಭಿವೃದ್ಧಿ, BHELಗಾಗಿ ಕಾರ್ಯಸಾಧ್ಯ ತಂತ್ರಜ್ಞಾನಗಳು, ನೀತಿ ವಕಾಲತ್ತು, ಮಾರ್ಗಸೂಚಿಗಳು ಮತ್ತು ಮೈಲಿಗಲ್ಲುಗಳು, ವಿವಿಧ ಕ್ಷೇತ್ರಗಳಿಗೆ ಸಂಪನ್ಮೂಲದ ಅವಶ್ಯಕತೆ ಮತ್ತು ಜವಾಬ್ದಾರಿಗಳು ಸೇರಿದಂತೆ ಅನುಷ್ಠಾನ ಯೋಜನೆಗಳ ಬಗ್ಗೆ ಇನ್‌ಪುಟ್‌ಗಳನ್ನು ಒದಗಿಸುವ ಮೂಲಕ ವ್ಯಾಪಾರದ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಕಾರ್ಪೊರೇಟ್ ಸ್ಟ್ರಾಟಜಿ ಮ್ಯಾನೇಜ್‌ಮೆಂಟ್ ಗ್ರೂಪ್‌ಗೆ ಸಹಾಯ ಮಾಡುತ್ತಾರೆ ಎಂದು ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್  ಕಂಪನಿಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ನವೆಂಬರ್ 4, 2021 ಕ್ಕೆ 30 ವರ್ಷಕ್ಕಿಂತ ಹೆಚ್ಚಿರಬಾರದು. ಅಭ್ಯರ್ಥಿಯು ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ  ಪದವಿ ಅಥವಾ 2 ವರ್ಷದ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರಬೇಕು. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) ಅಡಿಯಲ್ಲಿ MHRD ಬಿಡುಗಡೆ ಮಾಡಿದ ಶ್ರೇಯಾಂಕಗಳ ಪ್ರಕಾರ ಯಾವುದೇ IIM ಗಳು ಅಥವಾ ಟಾಪ್ 50 ಮ್ಯಾನೇಜ್‌ಮೆಂಟ್ ಸಂಸ್ಥೆಗಳಿಂದ ಸ್ನಾತಕೋತ್ತರ ಪದವಿ/ಡಿಪ್ಲೊಮಾವನ್ನು ಪಡೆಯಬೇಕು. ಕನಿಷ್ಠ 70%  ಅಥವಾ 10 ರಲ್ಲಿ 7.0 CGPA ಸ್ಥಾನ ಪಡೆದಿರಬೇಕು. (ಪಟ್ಟಿ NIRF ಪ್ರಕಾರ ಟಾಪ್ 50 ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ಗಳನ್ನು ಲಗತ್ತಿಸಲಾದೆ)ಎಂದು ನೋಟಿಫಿಕೇಷನ್ ನಲ್ಲಿ ತಿಳಿಸಲಾಗಿದೆ.

CRPF Recruitment: ವೈದ್ಯಕೀಯ ಹುದ್ದೆಗೆ ನ.22, 29 ವಾಕ್ ಇನ್ ಇಂಟರ್‌ವ್ಯೂ

ಪ್ರತಿಷ್ಠಿತ ಸಂಸ್ಥೆಗಳಿಂದ ಎಂಜಿನಿಯರಿಂಗ್ ಪಡೆದಿರುವ ಪದವೀಧರರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿದಾರರು ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ಬಿಎಚ್ಇಎಲ್ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿ ನಮೂನೆಗಳನ್ನು ಮೊದಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಆಯ್ಕೆ ಮಂಡಳಿಯಿಂದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (Bharat Heavy Electricals Limited -BHEL)ಗೆ ಆಯ್ಕೆಯಾಗುವ ಯುವ ವೃತ್ತಿಪರರಿಗೆ ಮಾಸಿಕ ಶುಲ್ಕ ತಿಂಗಳಿಗೆ 80,000 ರೂ.ಪಡೆಯಬಹುದು.  ಮಾಸಿಕ ಏಕೀಕೃತ ಶುಲ್ಕದ ಜೊತೆಗೆ ಅವರು ಕುಟುಂಬದ ಮೆಡಿಕ್ಲೈಮ್ ಪಾಲಿಸಿಗಾಗಿ (ಅಂದರೆ ಸ್ವಯಂ ಮತ್ತು ಸಂಗಾತಿಯ) ರೂ. 3500 + GST ವರೆಗಿನ ವಾರ್ಷಿಕ ಪ್ರೀಮಿಯಂ ಮರುಪಾವತಿಗೆ ಅರ್ಹರಾಗಿರುತ್ತಾರೆ. ಇದಲ್ಲದೆ, ಕಾಂಟ್ರಾಕ್ಟ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಯುವ ವೃತ್ತಿಪರರಿಗೆ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (Bharat Heavy Electricals Limited -BHEL)ನ ಹೈಡ್ರೋಜನ್ ಅರ್ಥಶಾಸ್ತ್ರ, ಸಂಯೋಜಕ ಉತ್ಪಾದನೆ, ಅಪ್‌ಸ್ಟ್ರೀಮ್ ಸೌರ ಮೌಲ್ಯ ಸರಪಳಿ, ಶಕ್ತಿ ಸಂಗ್ರಹಣೆ, ಕಲ್ಲಿದ್ದಲು ಮೆಥನಾಲ್ ಮತ್ತು ಕಾರ್ಬನ್ ಕ್ಯಾಪ್ಚರ್ ಕ್ಷೇತ್ರಗಳಲ್ಲಿ ಯುವ ವೃತ್ತಿಪರರನ್ನು ನೇಮಿಸಿಕೊಳ್ಳಲಾಗುತ್ತದೆ.

IOCL Recrutiment: 527 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

click me!