Central Government Jobs: ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

By Suvarna News  |  First Published Nov 17, 2021, 1:50 PM IST

ಭಾರತೀಯ ಅಂಚೆ ಇಲಾಖೆಯು ಜಾರ್ಖಂಡ್ ಪೋಸ್ಟ್ ಆಫೀಸ್ ಸರ್ಕಲ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ. ಆಸಕ್ತ ಹಾಗೂ ಅರ್ಜ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಕೇಂದ್ರ ಸರ್ಕಾರಿ ಉದ್ಯೋಗ ಹುಡುಕಾಡುತ್ತಿರೋರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಭಾರತೀಯ ಅಂಚೆ ಇಲಾಖೆ (India Postal Department) ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಇದೇ ತಿಂಗಳು ಅಂದರೆ ನವೆಂಬ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಜಾರ್ಖಂಡ್ ಪೋಸ್ಟ್ ಆಫೀಸ್ ಸರ್ಕಲ್ (Jharkhand Post Office Circle)ನಲ್ಲಿ ಒಟ್ಟು 19 ಪೋಸ್ಟಲ್ ಅಸಿಸ್ಟೆಂಟ್ (Postal Assistant), ಪೋಸ್ಟ್ಮ್ಯಾನ್ (Postman) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi Tasking Staff) ಹುದ್ದೆಗಳು ಖಾಲಿಯಿದ್ದು, ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕ್ರೀಡಾ ಕೋಟಾ (Sports Quota) ದಡಿ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್ 25  ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಮತ್ತಷ್ಟು ಮಾಹಿತಿ ತಿಳಿಯಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ www.indiapost.gov.in  ಗೆ ಭೇಟಿ ನೀಡಬಹುದು. ಅಂಚೆ ಸಹಾಯಕ /ಪೋಸ್ಟಲ್ ಅಸಿಸ್ಟೆಂಟ್ - 06, ಪೋಸ್ಟ್‌ಮ್ಯಾನ್ - 05, ಮಲ್ಟಿ ಟಾಸ್ಕಿಂಗ್ ಸ್ಟಾಪ್- 08 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಅಂಚೆ ಕಚೇರಿಗಳು ಅಥವಾ ರೈಲ್ವೆ ಮೇಲ್ ಕಛೇರಿಗಳಲ್ಲಿ ಪೋಸ್ಟಲ್ / ವಿಂಗಡಣೆ ಸಹಾಯಕ, ಅಂಚೆ ಕಚೇರಿಗಳಲ್ಲಿ ಪೋಸ್ಟ್‌ಮ್ಯಾನ್, ಅಂಚೆ ಕಚೇರಿಗಳು ಅಥವಾ ರೈಲ್ವೆ ಮೇಲ್ ಕಚೇರಿಗಳಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ನಿಯೋಜಿಸಲಾಗುವುದು. ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
 
ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು. ಇನ್ನು ಪೋಸ್ಟ್‌ಮ್ಯಾನ್ ಹುದ್ದೆಗೆ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು. ಹಾಗೇ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸಾಗಿರಬೇಕು.

Tap to resize

Latest Videos

undefined

RBI Internship: ಅರ್ಹರಿಂದ ಅರ್ಜಿ ಆಹ್ವಾನ, ಆಯ್ಕೆಯಾದವರಿಗೆ 20 ಸಾವಿರ ರೂ. ಸ್ಟೈಫಂಡ್

ಪೋಸ್ಟಲ್ ಅಸಿಸ್ಟೆಂಟ್/ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ನವೆಂಬರ್ 25, 2021ಕ್ಕೆ ಅನ್ವಯಿಸುವಂತೆ 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು. ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ ಹುದ್ದೆಗೆ ನವೆಂಬರ್ 25, 2021ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು.

ಪೋಸ್ಟಲ್/ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ ₹ 25,500 ರಿಂದ ₹81,100 ವರೆಗೆ ವೇತನ ಸಿಗಲಿದೆ. ಪೋಸ್ಟ್‌ಮ್ಯಾನ್ (Postman) ಹುದ್ದಗೆ ಮಾಸಿಕ ₹ 21,700-69,100ರೂ. ವೇತನ ಸಿಗಲಿದೆ. ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿಗೆ ಮಾಸಿಕ ₹ 18,000-56,900 ವೇತನ ಲಭ್ಯವಾಗಲಿದೆ. 

ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.indiapost.gov.in  ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಅಭ್ಯರ್ಥಿಗಳು ತಮ್ಮ ಸಂಬಂಧಿತ ದಾಖಲೆಗಳೊಂದಿಗೆ ಪೋಸ್ಟ್ ಮೂಲಕವೂ ಕಳುಹಿಸಬಹುದು. ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜನರಲ್ (ಸ್ಟಾಫ್), O/o ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಜಾರ್ಖಂಡ್ ಸರ್ಕಲ್, ರಾಂಚಿ- 834002 ಈ ಕೆಳಗಿನ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.

UPSC ಪರೀಕ್ಷೆಯನ್ನು ಎಂಜಿನಿಯರ್‌ಗಳೇ ಯಾಕೆ ಹೆಚ್ಚು ಪಾಸು ಮಾಡೋದು?

ಆಸಕ್ತ ಹಾಗೂ ಅರ್ಹ  ಅಭ್ಯರ್ಥಿಗಳು ಈ ಅಂಚೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ.

click me!