ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ (Central Silk Board) ಖಾಲಿ ಇರುವ ಹಲವು ಟ್ರೈನರ್ ಮತ್ತು ಟ್ರೈನರ್ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ನವೆಂಬರ್ 17 ಅರ್ಜಿ ಸಲ್ಲಿಸು ಕೊನೆಯ ದಿನವಾಗಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ ಅಭಿಯಾನದಲ್ಲಿ ಒಟ್ಟು 60 ಟ್ರೇನರ್ (Trainer), ಟ್ರೇನಿಂಗ್ ಅಸಿಸ್ಟೆಂಟ್ (Training Assistant) ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುವುದು. ಈಗಾಗಲೇ ನವೆಂಬರ್ 2ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದೆ. ಅಧಿಸೂಚನೆಯ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ವಾರಣಾಸಿ ಕ್ಲಸ್ಟರ್‌ನಲ್ಲಿ ಜಾರಿಗೊಳಿಸಲಾದ ಸಮರ್ಥ್ ಎಂದು ಕರೆಯಲ್ಪಡುವ “ಜವಳಿ ವಲಯದಲ್ಲಿ ಸಾಮರ್ಥ್ಯ ನಿರ್ಮಾಣ ಯೋಜನೆ” ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಟ್ರೈನರ್ ಮತ್ತು ಟ್ರೈನರ್ ಸಹಾಯಕ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (ವಾರಣಾಸಿ ಮತ್ತು ಉತ್ತರ ಪ್ರದೇಶದ ಪಕ್ಕದ ಜಿಲ್ಲೆಗಳು) ಒಂದು ವರ್ಷದ ಅವಧಿಗೆ ಅಥವಾ ನಿಗದಿಪಡಿಸಿದ ತರಬೇತಿ ಗುರಿಯನ್ನು ಪೂರ್ಣಗೊಳಿಸಲು, ಯಾವುದು ಮೊದಲಾಗುತ್ತದೆಯೋ ಅದು. ಅಭ್ಯರ್ಥಿಗಳನ್ನು ಅವನ/ಅವಳ ವಿದ್ಯಾರ್ಹತೆ, ಆಯಾ ಕೆಲಸದ ಪಾತ್ರ(ಗಳಲ್ಲಿ) ಅನುಭವ ಮತ್ತು ಸ್ಕೀಮ್‌ನ ಅವಶ್ಯಕತೆಗೆ ಅನುಗುಣವಾಗಿ ಸಂದರ್ಶನದಲ್ಲಿನ ಕಾರ್ಯಕ್ಷಮತೆಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ (Central Silk Board) ನಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 10ನೇ ತರಗತಿ (SSLC), 12ನೇ ತರಗತಿ (PUC), ಡಿಪ್ಲೋಮಾ (Diploma), ಎಂಜಿನಿಯರಿಂಗ್ (Engineering), ಪದವೀಧರರು, ಐಟಿಐ (ITI) ಪಾಸ್ ಮಾಡಿರುವವರು ಈ ಟ್ರೇನರ್ ಹಾಗೂ ಟ್ರೇನಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಹುದ್ದೆಯ ಕುರಿತಾಗಿ ಮತ್ತಷ್ಟು ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳಿಯಲು ಸಿಲ್ಕ್ ಬೋರ್ಡ್ ಅಧಿಕೃತ ವೆಬ್ಸೈಟ್ csb.gov.inಗೆ ಭೇಟಿ ನೀಡಿ ಪರಿಶೀಲಿಸಿವುದು ಒಳ್ಳೆಯದು.
undefined
ಟ್ರೇನರ್ ಹಾಗೂ ಟ್ರೇನಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ 10th, 12th, ಡಿಪ್ಲೋಮಾ (Diploma), ಎಂಜಿನಿಯರಿಂಗ್ (Engineering), ಐಟಿಐ (ITI) ಪಾಸಾಗಿರಬೇಕು.
ಸೆಂಟ್ರಲ್ ಸಿಲ್ಕ್ ಬೋರ್ಡ್ (Central Silk Board) ನಲ್ಲಿ ಟ್ರೇನರ್ (Trainer) 30 ಹುದ್ದೆಗಳು ಹಾಗೂ ಟ್ರೇನಿಂಗ್ ಅಸಿಸ್ಟೆಂಟ್ (Training Assistant)- 30 ಹುದ್ದೆಗಳಿವೆ. ಟ್ರೇನರ್ ಹಾಗೂ ಟ್ರೇನಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.
BSNL Recruitment: ಡಿಪ್ಲೋಮಾ ಪೂರೈಸಿದವರಿಗೆ ಅಪ್ರೆಂಟಿಸ್ ಜಾಬ್
ಇನ್ನು ಟ್ರೇನರ್ (Trainer) ಹಾಗೂ ಟ್ರೇನಿಂಗ್ ಅಸಿಸ್ಟೆಂಟ್ (Training Assistant) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 5000 ರಿಂದ ₹27,000 ದರವರೆಗೆ ವೇತನ ಸಿಗಲಿದೆ ಎಂದು ಸೆಂಟ್ರಲ್ ಸಿಲ್ಕ್ ಬೋರ್ಡ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಟ್ರೇನರ್ ಹಾಗೂ ಟ್ರೇನಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ನ ಅಧಿಕೃತ ವೆಬ್ಸೈಟ್ https://csb.gov.in/ ಗೆ ಭೇಟಿ ನೀಡಬಹುದಾಗಿದೆ. ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ಆನಂತರ ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತದೆ.
ಕೇಂದ್ರ ರೇಷ್ಮೆ ಮಂಡಳಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ಕೇಂದ್ರ ಸರ್ಕಾರ ಜವಳಿ ಇಲಾಖೆಯಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ರೇಷ್ಮೆ ಕೃಷಿಗೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ರೇಷ್ಮೆ ಕ್ಷೇತ್ರದಲ್ಲಿನ ಸಂಶೋಧನೆ, ನಿರ್ವಹಣೆ, ರೇಷ್ಮೆ ಹುಳು ಉತ್ಪಾದನಾ ಜಾಲ, ಮಾರುಕಟ್ಟೆ ಸೇರಿದಂತೆ ಇನ್ನಿತರ ಪ್ರಕ್ರಿಯೆಗಳಲ್ಲಿ ಕಾರ್ಯನಿರ್ವಹಿಸುತ್ತದೆ.
Sports Quota Recruitment: ಭಾರತೀಯ ಸೇನೆಗೆ ನ.29ರಿಂದ ನೇಮಕಾತಿ rally
ವೈಜ್ಞಾನಿಕ ರೇಷ್ಮೆ ಕೃಷಿ ಪದ್ಧತಿಗಳ ಹರಡುವಿಕೆಯ ಮೂಲಕ ರೇಷ್ಮೆ ಕೃಷಿಯಲ್ಲಿ ಲಾಭದಾಯಕ ಉದ್ಯೋಗ ಮತ್ತು ಸುಧಾರಿತ ಆದಾಯದ ಮಟ್ಟಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು, ರೇಷ್ಮೆ ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ಉತ್ಪಾದಕತೆಯನ್ನು ಸುಧಾರಿಸಲು ಗುಣಮಟ್ಟಕ್ಕೆ ಬದ್ಧತೆಯ ಮೂಲಕ ದಕ್ಷತೆಯ ಮಟ್ಟವನ್ನು ಬಲಪಡಿಸಿ ಈ ಸಂಸ್ಥೆಯ ಉದ್ದೇಶವಾಗಿದೆ.