Indian Railways: ಆಗ್ನೇಯ ರೈಲ್ವೆ ವಲಯದಲ್ಲಿ SSLC, ITI ಮಾಡಿದವರಿಗೆ ಉದ್ಯೋಗ

By Suvarna News  |  First Published Nov 15, 2021, 4:51 PM IST

SSLC ಹಾಗೂ ಐಟಿಐ ಪೂರೈಸಿದವರಿಗೆ ಆಗ್ನೇಯ ರೈಲ್ವೆ ವಲಯ (South Eastern Railway)ದಲ್ಲಿ ಅಪ್ರೆಂಟಿಸ್ ಮಾಡುವ ಅವಕಾಶವಿದೆ. ಖಾಲಿ ಇರುವ 1785 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಆಗ್ನೇಯ ರೈಲ್ವೆ ವಲಯ (South Eastern Railway)ವು ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 1785 ಅಪ್ರೆಂಟಿಸ್ (Apprentice) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಗ್ನೇಯ ರೈಲ್ವೆ (South Eastern Railway)ಯ ಅಧಿಕೃತ ವೆಬ್ಸೈಟ್ ser.indianrailways.gov.in ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಗಳ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ತಿಳಿದುಕೊಳ್ಳಬಹುದು. ಖರಗಪುರ್ ವರ್ಕ್ಶಾಪ್ (Kharagpur) - 360 ಹುದ್ದೆಗಳು, ಸಿಗ್ನಲ್ ಆ್ಯಂಡ್ ಟೆಲಿಕಾಮ್ (Signal and Telecom  - 87 ಹುದ್ದೆಗಳು, ಟ್ರ್ಯಾಕ್ ಮೆಷಿನ್ ವರ್ಕ್ಶಾಪ್ (Track Machine)- 120 ಹುದ್ದೆಗಳು, ಎಸ್ಇಇ (SSE) - 28 ಹುದ್ದೆಗಳು, ಕ್ಯಾರೇಜ್ &ವೇಗಾನ್ ವಿಭಾಗ(Carriage & Wagon Depot) 121 ಹುದ್ದೆಗಳು, ಡಿಸೇಲ್ ಲೊಕೊಶೆಡ್ (Diesel Loco Shed) 50  ಹುದ್ದೆಗಳು, ಸೀನಿಯರ್ ಡಿ  90 ಹುದ್ದೆಗಳು, ಟಿಆರ್ಡಿ ಡಿಪಾರ್ಟ್ಮೆಂಟ್ (TRD Depot/Electrical) 40 ಹುದ್ದೆಗಳಿಗೆ ಆಗ್ನೇಯ ರೇಲ್ವೆ ವಲಯವು ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ.

ಅದೇ ರೀತಿ, ಇಎಂಯು ಶೆಡ್/ಎಲೆಕ್ಟ್ರಿಕಲ್/ಟಿಪಿಕೆಆರ್  40 ಹುದ್ದೆಗಳು, ಎಲೆಕ್ಟ್ರಿಕ್ ಲೊಕೊಶೆಡ್/ಸಂತ್ರಗಚಿ  - 36 ಹುದ್ದೆಗಳು, ಸೀನಿಯರ್ ಡೀ(ಜಿ)ಚಕ್ರದರ್ಪುರ್  - 93 ಹುದ್ದೆಗಳು, ಎಲೆಕ್ಟ್ರಾನಿಕ್ ಟ್ರಾಕ್ಷನ್ ವಿಭಾಗ (Electronic Traction Depot) 30 ಹುದ್ದೆಗಳು, ಕ್ಯಾರೇಜ್ &ವೇಗಾನ್ ವಿಭಾಗ  65 ಹುದ್ದೆಗಳು, ಎಲೆಕ್ಟ್ರಿಕ್ ಲೊಕೊ ಶೆಡ್/ಟಾಟಾ  72 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Tap to resize

Latest Videos

undefined

BSNL Recruitment: ಡಿಪ್ಲೋಮಾ ಪೂರೈಸಿದವರಿಗೆ ಅಪ್ರೆಂಟಿಸ್ ಜಾಬ್

ಇನ್ನು, ಇಂಜಿನಿಯರಿಂಗ್ ವರ್ಕ್ಶಾಪ್/ಸಿನಿ (Engineering Workshop/Sini)- 100 ಹುದ್ದೆಗಳು, ಟ್ರ್ಯಾಕ್ ಮೆಷಿನ್ ವರ್ಕ್ಶಾಪ್/ಸಿನಿ 7 ಹುದ್ದೆಗಳು,  ಎಲೆಕ್ಟ್ರಿಕ್ ಲೋಕೋ ಶೆಡ್/ಬೊಂಡಾಮುಂಡ (Electric Loco Shed) - 50 ಹುದ್ದೆಗಳು, ಡೀಸೆಲ್ ಲೊಕೊ ಶೆಡ್/ಬೊಂಡಾಮುಂಡ  - 52 ಹುದ್ದೆಗಳು, ಹಿರಿಯ DEE (G)/Adra - 30 ಪೋಸ್ಟ್‌ಗಳು, ಸೀನಿಯರ್ ಡಿಇಇ ರಾಂಚಿ- 30 ಹುದ್ದೆಗಳು, ಟಿಆರ್ಡಿ ವಿಭಾಗ/ಎಲೆಕ್ಟ್ರಕಲ್/ರಾಂಚಿ  10 ಹುದ್ದೆಗಳು, ಎಸ್ಎಸ್ಇ 10 ಹುದ್ದೆಗಳು ಸೇರಿ ಒಟ್ಟು 1785 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 

ಆಗ್ನೇಯ ರೈಲ್ವೆ ವಲಯ (South Eastern Railway) ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. SC/ ST/ PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 15- 24 ವರ್ಷದೊಳಗೆ ಇರಬೇಕು. 

ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳ ದಾಖಲಾತಿಗಳನ್ನ ಪರಿಶೀಲನೆ ನಡೆಸಿ ಬಳಿಕ  ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ಆನಂತರ ಆಯ್ಕೆಯಾದ ಅಭ್ಯರ್ಥಿಯನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

Sports Quota Recruitment: ಭಾರತೀಯ ಸೇನೆಗೆ ನ.29ರಿಂದ ನೇಮಕಾತಿ rally

ಆಗ್ನೇಯ ರೈಲ್ವೆ ವಲಯದಲ್ಲಿ ಖಾಲಿ ಇರುವ 1785ಕ್ಕೂ ಹೆಚ್ಚು ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

click me!