IAF AFCAT Exam: ವಾಯು ಪಡೆಯ 317 ಹುದ್ದೆಗಳಿಗೆ ನೇಮಕಾತಿ!

Suvarna News   | Asianet News
Published : Nov 30, 2021, 03:34 PM IST
IAF AFCAT Exam:  ವಾಯು ಪಡೆಯ 317 ಹುದ್ದೆಗಳಿಗೆ ನೇಮಕಾತಿ!

ಸಾರಾಂಶ

ಭಾರತೀಯ ವಾಯುಪಡೆಯು ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್(AFCAT 2022)ಗೆ ಅರ್ಜಿ ಆಹ್ವಾನಿಸಿದೆ. ಆ ಮೂಲಕ ಖಾಲಿ ಇರುವ ಗ್ರೌಂಡ್ ಡ್ಯೂಟಿ (ತಾಂತ್ರಿಕ ಮತ್ತು ತಾಂತ್ರಿಕೇತರ) ಮತ್ತು ಕಮಿಷನ್ಡ್ ಅಧಿಕಾರಿಗಳ ಹುದ್ದೆಗಳ ನೇಮಕಾತಿಯನ್ನು ಆರಂಭಿಸಿದೆ. ಒಟ್ಟು 317 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭವಾಗಲಿದೆ. ಅರ್ಜಿ ಸಲ್ಲಿಕೆ ಡಿಸೆಂಬರ್ 1 ಆರಂಭವಾಗಿ, 30ರವರೆಗೂ ಇರಲಿದೆ. ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ವಾಯುಪಡೆ (Indian Air Force)ಯು ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್(AFCAT 2022)ಗೆ ಆರ್ಜಿ ಆಹ್ವಾನಿಸಿದೆ. ಒಟ್ಟು 317 ಗ್ರೌಂಡ್ ಡ್ಯೂಟಿ(Ground Duty) (ಟೆಕ್ನಿಕಲ್ & ನಾನ್ ಟೆಕ್ನಿಕಲ್), ಕಮಿಷನ್ಡ್ ಆಫೀಸರ್(Commissioned Officer) ಹುದ್ದೆಗಳು ಖಾಲಿ ಇದ್ದು, ಬಿಇ, ಬಿ ಟೆಕ್, ಎಂಎಸ್ಸಿ ಪದವೀಧರರು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ವಾಯುಪಡೆಯ ಅಧಿಕೃತ ವೆಬ್ಸೈಟ್ indianairforce.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 250 ಅರ್ಜಿ ಶುಲ್ಕ ಪಾವತಿಸಬೇಕು ಮತ್ತು ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯನ್ನು ಪೂರೈಸಿರಬೇಕಾಗುತ್ತದೆ. ವಾಯುಪಡೆಯ ಅಧಿಕೃತ ಜಾಲತಾಣದಲ್ಲಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂಬಂಧ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಎಸ್ ಎಸ್ ಸಿ (SSC )77 ಹುದ್ದೆಗಳು, ಎಇ (AE) 129 ಹುದ್ದೆಗಳು, ಅಡ್ಮಿನ್ (Admin) 51 ಹುದ್ದೆಗಳು, ಎಸಿಸಿಟಿಎಸ್ ( Accts 21) ಹುದ್ದೆಗಳು, ಪೋಸ್ಟ್ಸ್ ಎಲ್ ಜಿಎಸ್ (PostsLgs )39 ,ಹುದ್ದೆಗಳು ಸೇರಿ ಒಟ್ಟು ೩೧೭ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.  ಫ್ಲೈಯಿಂಗ್ ಬ್ರಾಂಚ್(Flying Branch), ಗ್ರೌಂಡ್ ಡ್ಯೂಟಿ( Ground Duty-Technical), ಗ್ರೌಂಡ್ ಡ್ಯೂಟಿ (Ground Duty-Non-Technical), ಎನ್ ಸಿಸಿ ಸ್ಪೆಷಲ್ ಎಂಟ್ರಿ (NCC Special Entry-Flying) ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

MECON ನೇಮಕಾತಿ: ಮ್ಯಾನೇಜರ್‌ ಹುದ್ದೆಗಳಿ ಅರ್ಜಿ ಆಹ್ವಾನ    

ಫ್ಲೈಯಿಂಗ್ ಬ್ರಾಂಚ್ ಹುದ್ದೆಗೆ ಅಭ್ಯರ್ಥಿಯು 10+2 ಹಂತದಲ್ಲಿ ಗಣಿತ ಮತ್ತು ಭೌತಶಾಸ್ತ್ರದಲ್ಲಿ ತಲಾ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು ಮತ್ತು ಕನಿಷ್ಠ 60% ಅಂಕಗಳೊಂದಿಗೆ ಅಥವಾ ತತ್ಸಮಾನದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಕನಿಷ್ಠ ಮೂರು ವರ್ಷಗಳ ಪದವಿ ಪಡೆದಿರಬೇಕು. ಅಥವಾ ಕನಿಷ್ಠ 60% ಅಂಕಗಳು ಅಥವಾ ತತ್ಸಮಾನದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE/B ಟೆಕ್ ಪದವಿ (ನಾಲ್ಕು ವರ್ಷಗಳ ಕೋರ್ಸ್) ಆಗಿರಬೇಕು. ಅಥವಾ ಕನಿಷ್ಠ 60% ಅಂಕಗಳು ಅಥವಾ ತತ್ಸಮಾನದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಇಂಜಿನಿಯರ್ಸ್ ಸಂಸ್ಥೆ (ಭಾರತ) ಅಥವಾ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಸೋಸಿಯೇಟ್ ಸದಸ್ಯತ್ವದ ವಿಭಾಗ A & B ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಕಮಿಷನ್ಡ್ ಆಫೀಸರ್  ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ  20 ರಿಂದ 24 ವರ್ಷ ವಯೋಮಿತಿ ಇರಬೇಕು. ಹಾಗೇ ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ & ನಾನ್ ಟೆಕ್ನಿಕಲ್) ಹುದ್ದೆಗೆ 20 ರಿಂದ 26 ವರ್ಷದೊಳಗಿರಬೇಕು. ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ & ನಾನ್ ಟೆಕ್ನಿಕಲ್), ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 56,100-1,77,500 ವೇತನ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ಹಾಗೂ ಪ್ರಾಕ್ಟಿಕಲ್/ಫಿಜಿಕಲ್/ಸ್ಕಿಲ್ ಟೆಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಳಿಕ ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳನ್ನ ವೈಯಕ್ತಿಕ ಸಂದರ್ಶನಕ್ಕೆ ಕರೆದು ಅಂತಿಮವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. 

ಇನ್ನು ಈ ಹುದ್ದೆಗಳಿಗೆ (IAF Air Force Common Admission Test-AFCAT) ಅರ್ಜಿ ಶುಲ್ಕ ರೂ 250 ಇರಲಿದೆ.  ಎನ್ಸಿಸಿಯಿಂದ( NCC) ವಿಶೇಷ ಪ್ರವೇಶಕ್ಕಾಗಿ ನೋಂದಾಯಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗಿದೆ.  IAF AFCAT 2022 ಪ್ರವೇಶ CBT ಮೋಡ್ ಪರೀಕ್ಷೆಯಲ್ಲಿ ಇರಲಿದ್ದು, ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಪರೀಕ್ಷೆ ನಡೆಯಲಿದೆ. ಏರ್ ಫೋರ್ಸ್ ಅಕಾಡೆಮಿ ದುಂಡಿಗಲ್‌ನಲ್ಲಿರುವ ಎಲ್ಲಾ ಕೋರ್ಸ್‌ಗಳು ಜನವರಿ 2023 ರ ಮೊದಲ ವಾರದಲ್ಲಿ ತರಬೇತಿಯನ್ನು ಪ್ರಾರಂಭಿಸಲಿವೆ.

HAL Recruitment: ಸ್ಟಾಫ್ ನರ್ಸ್, ಫಿಜಿಯೋ ಥೆರಪಿಸ್ಟ್ ಹುದ್ದೆಗಳಿಗೆ ನೇಮಕಾತಿ    

ಎನ್ ಸಿಸಿ ಕ್ರೆಡಿಟ್‌ ಹೊಂದಿರುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಭಾರತೀಯ ವಾಯುಪಡೆಯ ಅಧಿಕೃತ ವೆಬ್ಸೈಟ್ indianairforce.nic.in ಗೆ ಅಭ್ಯರ್ಥಿಗಳು ಭೇಟಿ ನೀಡಿ, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಪದವಿ ಮುಗಿಸಿರುವ ಅಭ್ಯರ್ಥಿಗಳು ಈ ಐಎಎಫ್ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್