MECON ನೇಮಕಾತಿ: ಮ್ಯಾನೇಜರ್‌ ಹುದ್ದೆಗಳಿ ಅರ್ಜಿ ಆಹ್ವಾನ

By Suvarna News  |  First Published Nov 29, 2021, 6:02 PM IST

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಮೆಕಾನ್ ಲಿ. ಕಂಪನಿಯು ಖಾಲಿ ಇರುವ ನಾನಾ ಮ್ಯಾನೇಜರ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 78 ಹುದ್ದೆಗಳಿಗೆ ಈಗ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.


ಕೇಂದ್ರ ಸರ್ಕಾರದ ಉಕ್ಕು ಸಚಿವಾಲಯ (Ministry of Steel) ದ ಅಡಿ ಬರುವ ಮೆಕಾನ್ ಲಿಮಿಟೆಡ್ (MECON Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 78 ಮ್ಯಾನೇಜರ್ (Manager), ಅಸಿಸ್ಟೆಂಟ್ ಮ್ಯಾನೇಜರ್ (Assistant Manager), ಸೀನಿಯರ್ ಮ್ಯಾನೇಜರ್ (Senior Manager), ಡೆಪ್ಯುಟಿ ಮ್ಯಾನೇಜರ್ (Deputy Manager), ಡೆಪ್ಯುಟಿ ಜನರಲ್ ಮ್ಯಾನೇಜರ್ (Deputy General Manager), ಜನರಲ್ ಮ್ಯಾನೇಜರ್ (General Manager), ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (Assistant General Manager) ಹುದ್ದೆಗಳು ಖಾಲಿ ಇವೆ. ಬಿಇ (BE), ಬಿ.ಟೆಕ್ (B Tech), ಬಿ. ಆರ್ಚ್ (B Arch), ಎಂಎಸ್ಸಿ (MSc), ಎಂಬಿಎ (MBA), ಎಂಎ (MA), ಎಂಟೆಕ್ (M Tech), ಎಂಇ (ME), ಪಿಎಚ್.ಡಿ (PhD), ಎಂಎಸ್‌ಡಬ್ಲ್ಯೂ  (MSW), ಐಸಿಎಐ (ICAI) ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 26ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೆಕಾನ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ www.meconlimited.co.inಗೆ ಭೇಟಿ ನೀಡಬಹುದು.

ಮ್ಯಾನೇಜರ್ - 22, ಅಸಿಸ್ಟೆಂಟ್ ಮ್ಯಾನೇಜರ್ - 17, ಸೀನಿಯರ್ ಮ್ಯಾನೇಜರ್ - 04, ಡೆಪ್ಯುಟಿ ಮ್ಯಾನೇಜರ್ - 25, ಡೆಪ್ಯುಟಿ ಜನರಲ್ ಮ್ಯಾನೇಜರ್ - 03, ಜನರಲ್ ಮ್ಯಾನೇಜರ್ - 05, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ - 02 ಹುದ್ದೆಗಳಿಗೆ ಮೆಕಾನ್ ಲಿ.ಕಂಪನಿಯು ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಬಿಇ, ಬಿ.ಟೆಕ್, ಬಿ. ಆರ್ಚ್, ಎಂಎಸ್ಸಿ, ಎಂಬಿಎ, ಎಂಎ, ಎಂಟೆಕ್, ಎಂಇ, ಪಿಎಚ್.ಡಿ, MSW, ICAI ಪೂರ್ಣಗೊಳಿಸಿರಬೇಕು. ಅಧಿಸೂಚನೆಯ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Tap to resize

Latest Videos

Jobs Vacancy: ಭಾರತೀಯ ಐಟಿ ಕ್ಷೇತ್ರದಿಂದ ಭರ್ಜರಿ ನೇಮಕಾತಿ !

ಮೆಕಾನ್ ಲಿಮಿಟೆಡ್ (MECON Limited)ನ  ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 30ರಿಂದ ಗರಿಷ್ಠ 52 ವರ್ಷ ಇರಬೇಕು. ಸಾಮಾನ್ಯ ವರ್ಗ, ಒಬಿಸಿ ವರ್ಗದ (OBC) ಅಭ್ಯರ್ಥಿಗಳು 1000 ರೂ ಅರ್ಜಿ ಶುಲ್ಕ ಪಾವತಿಸಬೇಕು. SC / ST / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ನೀಡಿ, ತಿಳಿದುಕೊಳ್ಳಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 20,600 ದಿಂದ 73,000 ರೂ.ವರೆಗೆ ವೇತನ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮೊದಲಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಬಳಿಕ ದಾಖಲಾತಿ ಪರಿಶೀಲನೆ ನಡೆಸಿ ನಂತರ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.

Wipro Recruitment: ಎಂಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶ

ಕೇಂದ್ರ ಸರಕಾರದ ಉಕ್ಕು ಸಚಿವಾಲಯದ ಅಧೀನ ಕಾರ್ಯನಿರ್ವಹಿಸುವ ಈ ಮೆಕಾನ್ ಸಂಸ್ಥೆಯ ಸಾರ್ವಜನಿಕ ವಲಯದ ಪ್ರಮುಖ ಕಂಪನಿಯಾಗಿದೆ. 1959ರಲ್ಲಿ ಸ್ಥಾಪನೆಯಾದ ಈ ಕಂಪನಿಯ ಕೇಂದ್ರ  ಕಚೇರಿಯುವ ಜಾರ್ಖಂಡದ ರಾಂಚಿಯಲ್ಲಿದೆ. ಈ ಮೇಲೆ ತಿಳಿಸಿದ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿ.25ರವರೆಗೂ ಅವಕಾಶವಿದೆ.

click me!